ರಾಮನಾಥಪುರದಲ್ಲಿ ಸಂತೆಗೆ ತಂದಿದ್ದ ವಿವಿಧ ಪದಾರ್ಥಗಳ ತೆರವು

 ರಾಮನಾಥಪುರ:-ಕೊವೀಡ್ ಪ್ರಕರಣಗಳು ಹೆಚ್ಚುತ್ತಿದ್ದು, ಸರಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಬಸವೇಶ್ವರ ವೃತ್ತದಲ್ಲಿ ಕೆಲವು ಟೀ ಅಂಗಡಿಗಳು, ಸಂತೆಗೆ ಬೇರೆಡೆಯಿಂದ ತಂದಿದ್ದ ಅಂಗಡಿ ಮುಂಗಟ್ಟುಗಳು ತರಕಾರಿ, ಇನ್ನಿತರ ಪದಾರ್ಥಗಳನ್ನು  ಪಂಚಾಯಿತಿಯವರು ಮತ್ತು ಕೊಣನೂರು ಠಾಣೆ ಎಸ್.. ಅಜಯ್ ಕುಮಾರ್ ತೆರವುಗೊಳಿಸಿದರು.

ರಾಮನಾಥಪುರದ ಬಸವೇಶ್ವರ ವೃತ್ತದಲ್ಲಿ ಮಾತನಾಡಿದ ಅವರು ಕೊರೊನಾ ಪ್ರಕರಣ ಹೆಚ್ಚುತ್ತಿದ್ದು, ಸರಕಾರದ ಮಾರ್ಗಸೂಚಿಯನ್ನು ಪಾಲಿಸುವಂತೆ ಮನವಿ ಮಾಡಿದ ಅವರು ತಾಲ್ಲೂಕಿನಲ್ಲಿ  ಕೊರೊನಾ 2ನೇ ಅಲೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಲಾಕ್ಡೌನ್ ಮಾಡಿಲಾಗಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಸರಕಾರದ ಮಾರ್ಗಸೂಚಿಯನ್ನು ಪಾಲಿಸಿ ಇದರ ತಡೆಗೆ ಎಲ್ಲರೂ ಕಡ್ಡಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ತಿಳಿಸಿದರು.



ಈಗಾಗಲೇ ಮಧುವೆ ಮಂಟಪ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಹಾಕದೇ ಇದ್ದವರಿಗೆ ದಂಡ ಹಾಕಲಾಗಿದೆ. ಪಟ್ಟಣದ ಬಟ್ಟೆ ಅಂಗಡಿ, ಎಲೆಕ್ಟಾçನಿಕ್ ಅಂಗಡಿಗಳು, ಬಂದ್ ಮಾಡಲು ಸೂಚಿಸಲಾಗಿದೆ. ಜೀವನಾವಶ್ಯಕ ಅಲ್ಲದ ಅಂಗಡಿಗಳು ಬಂದ್ ಮಾಡಲಾಗುತ್ತಿದ್ದು, ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊರೊನಾ ಹರಡುತ್ತಿರುವ ಹಿನ್ನಲೆಯಲ್ಲಿ ಪ್ರತಿಯೊಂದು ಅಂಗಡಿಯವರಿಗೆ ತಿಳುವಳಿಕೆ ನೀಡಿ ಸ್ವಚ್ಚತೆ ಮತ್ತು ಅಂತರ ಕಾಪಾಡಬೇಕು. ದಿನಸಿ ಅಂಗಡಿ, ಹಣ್ಣು ಮತ್ತು ತರಕಾರಿ ಅಂಗಡಿಗಳು ಪೇಪರ್, ಹಾಲು, ಹಾಗೂ ಇನ್ನಿತರ ಅಗತ್ಯ ವಸ್ತುಗಳ ಮಾರಾಟ, ವಿವಾಹದ ಕಾರ್ಯಕ್ರಮದಲ್ಲಿ ಸಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡದರು.

ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಚ್.. ವಿಜಯಕುಮಾರ್, ಕಾರ್ಯದರ್ಶಿ ಎಚ್.ಸಿ. ನಿಂಗಣ್ಣ, ಧಮೇಶ್, ಪೋಲೀಸ್ ಸಿಬ್ಬಂದಿಗಳಾದ ಸಂತೋಷ್, ನಂದೀಶ್, ಮಹೇಶ್, ಪ್ರಕಾಶ್ ಮುಂತಾದವರು ತೆರವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂತೆ ಸ್ಥಳಕ್ಕೆ  ಒತ್ತಾಯ:- ಕಳೆದ ವರ್ಷ ಕೊರೊನಾ ಸಂಸರ್ಭದಲ್ಲಿ ಇಲ್ಲಿಯ ಪಟ್ಟಾಭಿರಾಮ ಗ್ರಾಮಾಂತರ ಪೌಢಶಾಲೆಯ ಅವರಣದಲ್ಲಿ ಸಮಾನಾಂತರ ಕಾಯ್ಕುಕೊಂಡು ಸಂತೆ ವ್ಯವಸ್ಥೆಯನ್ನು ತಾಲ್ಲೂಕು ಅಡಳಿತ ಮತ್ತು ಗ್ರಾಮ ಪಂಚಾಯಿತಿಯವರು ವ್ಯವಸ್ಥೆ ಮಾಡಿದ್ದರು. ಅದೇ ರೀತಿ ಸಾರಿಯೂ ಸಂತೆ ವ್ಯವಸ್ಥೆ ಮಾಡುವಂತೆ ವ್ಯಾಪರಸ್ಥರು ತಾಲ್ಲೂಕು ಅಡಳಿತವನ್ನು ಗ್ರಾಹಕರು ಒತ್ತಾಯಿಸಿದರು.

Post a Comment

Previous Post Next Post