ಹಾಸನದ ಸ್ಫಂದನ ಸಿರಿ ವೇದಿಕೆ(ರಿ) ರಾಜ್ಯ ಮತ್ತು ಜಿಲ್ಲಾ ಘಟಕ, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜೀವ ರಕ್ಷ ನಿಧಿ, ಹಾಸನ ಇವರ ಸಹಯೋಗದೊಂದಿಗೆ ಸಹೃದಯ ಸಂಗಮ ಬದುಕು ಬರಹದ ೨೫ನೇ ಬೆಳ್ಳಿಹಬ್ಬದ ಸ್ಫಂದನ ಸಿರಿ ಕೃತಿ ಮತ್ತು ಶ್ರೀಮತಿ ಜಿ.ಎನ್.ಕಲಾವತಿ ಮಧುಸೂಧನ್ ಅವರ ಪಾಪ ಪ್ರಜ್ಞೆ ಕೃತಿ ಲೋಕಾರ್ಪಣೆ ಮತ್ತು ರಾಜ್ಯಮಟ್ಟದ ಕವಿಗೋಷ್ಠಿ, ರಕ್ತದಾನ ಶಿಬಿರ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ದಿ.೧೧-೪-೨೦೨೧ರ ಭಾನುವಾರ ಬೆಳಿಗ್ಗೆ ೯ ಗಂಟೆಗೆ ಕಸಾಪ ಭವನದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿಗಳು ಶ್ರೀ ಆರ್.ಗಿರೀಶ್ ಅವರು ರಕ್ತದಾನ ಶಿಬಿರ ಉದ್ಘಾಟಿಸುವ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ರೀ ಶ್ರೀನಿವಾಸಗೌಡ ಆರ್. ಅವರು ಕೃತಿಗಳನ್ನು ಬಿಡುಗಡೆ ಮಾಡುವರು. ಸ್ಫಂದನ ಸಿರಿ ವೇದಿಕೆ ಸಂಸ್ಥಾಪಕ ಅಧ್ಯಕ್ಷರು ಶ್ರೀಮತಿ ಕಲಾವತಿ ಮಧುಸೂಧನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಡಾ. ಗುರುರಾಜ್ ಹೆಬ್ಬಾರ್, ಡಾ.ವೀರಭದ್ರಪ್ಪ, ಜನತಾ ಮಾದ್ಯಮ ಪತ್ರಿಕೆ ಸಂಪಾದಕರು ಆರ್.ಪಿ.ವೆಂಕಟೇಶ್ ಮೂರ್ತಿ, ಕಸಾಪ. ಗೌ.ಅಧ್ಯಕ್ಷರು ರವಿ ನಾಕಲಗೊಡು, ಕಸಾಪ. ಜಿಲ್ಲಾಧ್ಯಕ್ಷರು ನಾಯಕರಹಳ್ಳಿ ಮಂಜೇಗೌಡ, ತಾ.ಅಧ್ಯಕ್ಷರು ಜೆ.ಓ.ಮಹಾಂತಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕವಿ ಗೊರೂರು ಅನಂತರಾಜು ಅಧ್ಯಕ್ಷತೆಯಲ್ಲಿ ನಡೆಯುವ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕವಿ ಚಂದ್ರಕಾAತ್ ಪಡೆಸೂರ್ ಆಶಯ ನುಡಿಗಳನ್ನಾಡಲಿದ್ದು ಜಿಲ್ಲೆ, ಹೊರಜಿಲ್ಲೆಗಳ ಕವಿ ಕವಯತ್ರಿಯರು ದೇವಿರಮ್ಮ, ಹರ್ಷಿಯಾ ಭಾನು, ಎಂ.ಹರಿಣಿ ಜಿನ್ನಿ ಬೆಂಗಳೂರು, ಮಾಲ ಎಂ.ಎಸ್, ಅಲ್ಲಾರಂಡ ವಿಠಲನಂಜಪ್ಪ, ಗಿರಿಜಾ ನಿರ್ವಾಣಿ, ಮಾಳೇಕರ ಸೀತಮ್ಮ, ಪ್ರವೀಣ್, ಸುಧಾ ಬಾಣಾವಾರ, ಪವಿತ್ರ ಕಟ್ಟಾಯ, ಶಾಂತಾ ಜಯನಂದ್ ಬೆಂಗಳೂರು, ಲಲಿತಮ್ಮ. ಆರ್. ಮಲ್ಲೇಶ್. ಜಿ. ರೇಷ್ಮಾಶೆಟ್ಟಿ ಭಾಗವಹಿಸುವರು. ಕವಯಿತ್ರಿ ಮಿಲನಭರತ್ ಸ್ಫಂದನ ಸಿರಿ ಕೃತಿಯನ್ನು ಮತ್ತು ಡಾ. ಸಿ.ಜ.ಯತೀಶ್ವರ್ ಪಾಪಪ್ರಜ್ಞೆ ಕೃತಿ ಕುರಿತು ಮಾತನಾಡುವರು. ಮಂಜುಳಮ್ಮ, ಮಹಾಲಕ್ಮöಮ್ಮ, ಉಮಾ ಜಿ., ಚಂದ್ರಕಲಾ, ವೇದಾವತಿ ಜಿ. ನಂಜಪ್ಪಶೆಟ್ಟಿ, ಪೌಲಸ್, ಕ್ಯಾಪ್ಟನ್ ಜಯರಾಮ್ ಪುಟ್ಟೇಗೌಡ ಮತ್ತು ಕೆ.ಆರ್.ಹರೀಶ್ ಸೇವಾ ಪ್ರಶಸ್ತಿ ಪುರಸ್ಕೃತರು. ಬಳಗದ ಕಲಾವಿದರಿಂದ ಜಾನಪದ, ಭಾವಗೀತೆ, ಭಕ್ತಿಗೀತೆಗಳ ಗಾಯನ, ರಂಗಗೀತೆಗಳ ಪ್ರಸ್ತುತಿ ಮತ್ತು ಗಾನಸಿರಿಯಿಂದ ನೃತ್ಯ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯುವುವು.
Tags
ಹಾಸನ