ಬೇಲೂರು : ದನಮೇಯಿಸಲು ಹೋದ ಮಹಿಳೆ ಕಾಣೆಯಾಗಿದ್ದಾರೆ ಎಂದು ದೂರು ನೀಡಲಾಗಿತ್ತು.ನಂತರ ಸ್ಥಳ ಪರಿಶೀಲಿಸಿದಾಗ ದುಷ್ಕರ್ಮಿಗಳು ಕೊಲೆಮಾಡಿ ಮಣ್ಣಿನಲ್ಲಿ ಹೂತು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಹಾಲ್ತೊರೆ ಗ್ರಾಮದ ರಂಗೇಗೌಡರ ಪತ್ನಿ ಲಕ್ಷ್ಮಮ್ಮ ೫೦ ವರ್ಷ ಕೊಲೆಯಾಗಿರುವ ಮಹಿಳೆ. ಹಾಲ್ತೊರೆ ಗ್ರಾಮದ ರಂಗೇಗೌಡ ಎಂಬುವವರ ಪತ್ನಿ ಲಕ್ಷ್ಮಮ್ಮ ತನ್ನ ಮೇಕೆಗಳಿಗೆ ಬುಧವಾರ ಸಂಜೆ ಜಮೀನಿನ ಪಕ್ಕದಲ್ಲಿ ಇರುವ ಹಳ್ಳದಲ್ಲಿ ನೀರು ಕುಡಿಸಲು ಹೋದ ಸಂದರ್ಭದಲ್ಲಿ ಕಾಣೆಯಾಗಿದ್ದರು.
ರಾತ್ರಿ ಸಮಯವಾದರೂ ಸಹ ಲಕ್ಷ್ಮಮ್ಮ ಬಾರದಿದ್ದರಿಂದ ಸುತ್ತಮುತ್ತ ಹುಡುಕಿದ್ದಾರೆ.ಜಮೀನಿನ ಬಳಿ ಅವರಿಗೆ ಸೇರಿದ್ದ ಮೇಕೆಗಳು ಮಾತ್ರ ಕಾಣಿಸಿದ್ದವು.ಆದರೆ ಲಕ್ಷಮ್ಮ ಕಾಣದಿದ್ದರಿಂದ ಗ್ರಾಮಸ್ಥರೆಲ್ಲಾ ಸೇರಿ ಹುಡುಕಾಟ ನಡೆಸಿದ್ದರು.ಆದರೂ ಸಹ ಲಕ್ಷ್ಮಮ್ಮ ನವರ ಸುಳಿವು ಕಾಣದಿದ್ದರಿಂದ ಎಲ್ಲೋ ಹೋಗಿರಬಹುದು ಎಂದು ಭಾವಿಸಿ ಮತ್ತೆ ಬೆಳಗ್ಗೆ ಎಲ್ಲಾ ಕಡೆ ಹುಡುಕಿ ನೋಡಿದಾಗ ಪೊದೆಯ ಬಳಿ ಅವರು ಬಳಸುತ್ತಿದ್ದ ಎಲೆ ಅಡಿಕೆ ಚೀಲ ಮೊಬೈಲ್ ,ಚಪ್ಪಲಿ ಕಾಣಿಸಿತ್ತು.ಅಲ್ಲದೆ ಸ್ವಲ್ಪ ದೂರದಲ್ಲಿ ಮಾವಿನ ತೋಪಿನಲ್ಲಿ ಮಣ್ಣಿನಿಂದ ಎನೋ ಮುಚ್ಚಿರುವ ರೀತಿಯಲ್ಲಿ ಕಂಡ ಗ್ರಾಮಸ್ಥರು ತಕ್ಷಣವೇ ಪೋಲೀಸರಿಗೆ ದೂರು ಸಲ್ಲಿಸಿದಾರೆ.
ಗ್ರಾಮಸ್ಥರ ಹೇಳಿಕೆ ಮೇರೆಗೆ ಸ್ಥಳಕ್ಕೆ ಆಗಮಿಸಿದ ಬೇಲೂರು ಸಿಪಿಐ ಶ್ರೀಕಾಂತ್ ಹಾಗೂ ಹಳೇಬೀಡು ಪೋಲೀಸರು ತಕ್ಷಣವೇ ಶ್ವಾನದಳವನ್ನು ತರಿಸಿ ಸುತ್ತಮುತ್ತ ಪರಿಶೀಲಿಸಿದಾಗ ಲಕ್ಷ್ಮಮ್ಮ ಳನ್ನು ಯಾರೋ ಕೊಲೆ ಮಾಡಿ ಶವವನ್ನು ಹೂತುಹಾಕಿರುವುದು ಕಂಡು ಬಂದಿತ್ತು.
ಗ್ರಾಮದ ಮುದ್ದೇಗೌಡ ಮಾತನಾಡಿ ರಂಗೇಗೌಡ ಹಾಗೂ ಲಕ್ಷಮ್ಮ ಕುಟುಂಬದವರು ತುಂಬಾ ಒಳ್ಳೆಯವರು ಎಲ್ಲರೊಂದಿಗೆ ಪ್ರೀತಿ ಭಾಂದವ್ಯದಿಂದ ಇದ್ದಂತವರು.ಅಲ್ಲದೆ ದಂಪತಿಗಳು ಒಟ್ಟಿಗೆ ಜಮೀನಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು.ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಮಗಳನ್ನು ಮದುವೆ ಮಾಡಲಾಗಿದ್ದು,ಮಗ ಆಂದ್ರ ಪ್ರದೇಶದಲ್ಲಿ ಬೇಕರಿ ಇಟ್ಟುಕೊಂಡಿದ್ದು,ತಾಯಿಗೆ ಸಾಕಷ್ಟು ಒಡವೆ ಮಾಡಿಸಿಕೊಟ್ಟಿದ್ದು,ನೆನ್ನೆ ಸಂಬಂದಿಕರ ಮಗಳ ಆರತಿ ಕಾರ್ಯಕ್ರಮ ಇದ್ದಿದ್ದರಿಂದ ಒಡವೆಗಳನ್ನು ಧರಿಸಿ ಕಾರ್ಯಕ್ರಮ ಬಾಗವಹಿಸಿ ಸೀದಾ ಜಮೀನಿಗೆ ಬಂದಿರುವ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ಒಡವೆ ಆಸೆಗಾಗಿ ಲಕ್ಷಮ್ಮ ಅವರನ್ನು ಕೊಲೆ ಮಾಡಿ ಚಿಕ್ಕ ಗುಂಡಿಯನ್ನು ತೆಗದು ಹೂತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ತಹಶೀಲ್ದಾರ್ ಎನ್‌ವಿ ನಟೇಶ್,ಸಿಪಿಐ ಶ್ರೀಕಾಂತ್ ಶ್ವಾನದಳದೊಂದಿಗೆ ಸ್ಥಳ ಪರಿಶೀಲಿಸಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಪ್ರಕರಣವನ್ನು ಹಳೇಬೀಡು ಪೋಲೀಸರು ದಾಖಲಿಸಿಕೊಂಡಿದ್ದಾರೆ.
