ಹಾಸನ ಜಿಲ್ಲೆಯಲ್ಲಿಂದು ೯೨ ಕರೋನ ಪ್ರಕರಣಗಳು ಪತ್ತೆಯಾಗಿದ್ದು ೧ ಸಾವು ಸಂಭವಿಸಿದೆ

ಹಾಸನ :-ಜಿಲ್ಲೆಯಲ್ಲಿಂದು ಹೊಸದಾಗಿ 92 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 30071 ಏರಿಕೆಯಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ 743 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈವರೆಗೆ 28850 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್-೧೯ ನಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 478 ಮಂದಿ ಸಾವನ್ನಪ್ಪಿದ್ದಾರೆ. 

ಇಂದು ಪತ್ತೆಯಾದ 92 ಕೋವಿಡ್ ಪ್ರಕರಣಗಳಲ್ಲಿ ಹಾಸನ ತಾಲ್ಲೂಕಿನಲ್ಲಿ  35 ಮಂದಿ, ಅರಸೀಕೆರೆ ತಾಲ್ಲೂಕಿನಲ್ಲಿ 8 ಮಂದಿ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 23 ಮಂದಿಗೆ, ಬೇಲೂರು ತಾಲ್ಲೂಕಿನಲ್ಲಿ 3 ಮಂದಿ,  ಹೊಳೆನರಸೀಪುರ ತಾಲ್ಲೂಕಿನಲ್ಲಿ 6 ಮಂದಿ,s ಆಲೂರು ತಾಲ್ಲೂಕಿನಲ್ಲಿ 2 ಮಂದಿ, ಸಕಲೇಶಪುರ  ತಾಲ್ಲೂಕಿನಲ್ಲಿ 1 ಮಂದಿ ಹಾಗೂ  ಅರಕಲಗೂಡು ತಾಲ್ಲೂಕಿನಲ್ಲಿ 5 ಮಂದಿಗೆ ಕೋವಿಡ್-೧೯ ದೃಡ ಪಟ್ಟಿದೆ ಎಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಅವರು ತಿಳಿಸಿದ್ದಾರೆ. 

Post a Comment

Previous Post Next Post