ಪೋಲಿಸರು ತಪ್ಪಿಸ್ಥರು ಎಂದು ಬಿಂಬಿಸಿದ್ದ ಲಾರಿ ಡ್ರೈವರ್‌ ಕೇಸ್‌ನ ಅಸಲಿ ಸತ್ಯ.

ದಿನಾಂಕ 03/04/2021 ರಂದು ಬೆಳಗ್ಗಿನ ಜಾವ ಮೂರು ಗಂಟೆಯ ಸಮಯದಲ್ಲಿ ಶಾಂತಿಗ್ರಾಮದ ರಾತ್ರಿ ಸಿಬ್ಬಂದಿಗಳಾದ ಪಿಸಿ - 710 ಪಾಪಯ್ಯ ಮತ್ತು ಪಿಸಿ -48 ನವೀನ್‌ಕುಮಾರ್‌ರವರು ಕರ್ತವ್ಯದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ KA -41 A - 9511 ನಂಬರ್‌ನ ಲಾರಿಯ ಚಾಲಕ ಬಿ ಎಂ ರಸ್ತೆಯಲ್ಲಿ ಅತ್ಯಂತ ಅಜಾಗರೂಕತೆಯಿಂದ ಚಾಲನೆ ಮಾಡಿರುತ್ತಾನೆ, ಇದನ್ನು ಗಮನಿಸಿದ ಪೋಲಿಸ್ ಸಿಬ್ಬಂದಿಗಳು ಆ ಲಾರಿಯನ್ನು ನಿಲ್ಲಿಸಲು ಚಾಲಕನಿಗೆ ಸೂಚನೆ ನೀಡಿರುತ್ತಾರೆ ಆದರೆ ಆ ಲಾರಿಯ ಚಾಲಕ ಪೋಲಿಸ್ ಸಿಬ್ಬಂದಿಯವರ ಸೂಚನೆಗೆ ನಿರ್ಲಕ್ಷ್ಯ ತೋರಿ ಲಾರಿಯನ್ನು ಮತ್ತಷ್ಟು ವೇಗದಲ್ಲಿ ಚಲಿಸಿಕೊಂಡು ಮುಂದೆ ಹೋಗಿರುತ್ತಾನೆ, ಆ ಚಾಲಕನ ವರ್ತನೆಯಿಂದ ಅನುಮಾನ ಪಟ್ಟ ಪೋಲೀಸ್ ಸಿಬ್ಬಂದಿಗಳು ಆ ಲಾರಿಯ ಬೆನ್ನಟ್ಟಿ ಹೈವೇಯ ಗಾಡೇನಹಳ್ಳಿ ಡಾಬದ ಸಮೀಪ ತಡೆಗಟ್ಟಿರುತ್ತಾರೆ.
ಲಾರಿಯಲ್ಲಿ ಚಾಲಕನ ಜೊತೆಗೆ ಕ್ಲಿನರ್ ಒಬ್ಬ ಇದ್ದು, ಆ ಇಬ್ಬರನ್ನೂ ಪೋಲಿಸ್ ಸಿಬ್ಬಂದಿಯವರು ವಿಚಾರಣೆ ಮಾಡಿರುತ್ತಾರೆ, ನಿರ್ಲಕ್ಷ್ಯತನದಿಂದ ಅತಿವೇಗದಲ್ಲಿ ಲಾರಿ ಚಲಾಯಿಸಬಾರದು ಎಂದು ತಿಳುವಳಿಕೆ ಹೇಳುತ್ತಿದ್ದ ಸಂದರ್ಭದಲ್ಲಿ ಲಾರಿಯ ಚಾಲಕ ಮತ್ತು ಕ್ಲಿನರ್ ಇಬ್ಬರು ಪೋಲಿಸ್ ಸಿಬ್ಬಂದಿಗಳ ಜೊತೆ ಅನುಚಿತವಾಗಿ ವರ್ತಿಸಿರುತ್ತಾರೆ. ಹೀಗೆ ಪೋಲಿಸ್ ಸಿಬ್ಬಂದಿಯವರ ಜೊತೆ ವಾದ-ವಿವಾದ ನಡೆಸಿದ ಸ್ವಲ್ಪ ಸಮಯದ ನಂತರ ಲಾರಿ ಚಾಲಕ‌ ಮತ್ತು ಕ್ಲಿನರ್ ಇಬ್ಬರಿಗೂ ಅವರ ತಪ್ಪಿನ‌ ಅರಿವಾಗಿ ಇನ್ನೂ ಮುಂದೆ ‌ಚಾಲನೆ ಮಾಡುವಾಗ ಈ ರೀತಿಯ ಅಜಾಗರೂಕತೆ ತೋರುವುದಿಲ್ಲ ಎಂದು ಮನವಿ ಮಾಡಿಕೊಂಡಿರುತ್ತಾರೆ, ನಂತರ ಸಬಾಹು ಬೀಟ್ ಆಪ್‌ನಲ್ಲಿ ಇನ್ಸಿಡೆಂಟ್‌ ಅನ್ನು ರಾತ್ರಿ  3 ಗಂಟೆ 4 ನಿಮಿಷದಲ್ಲಿ ‌ATTAMT ASSALT BY LORRY PERSON ಎಂದು ಲಾಗ್ ಮಾಡಲಾಗಿರುತ್ತದೆ. 
ನಂತರ ಆ ಇಬ್ಬರನ್ನೂ ಕಳುಹಿಸಿಕೊಟ್ಟಿರುತ್ತೇವೆ ಎಂದು ರಾತ್ರಿ ಗಸ್ತಿನ ಸಿಬ್ಬಂದಿಗಳು ಬೆಳಗ್ಗಿನ ಜಾವ 3-15 ಗಂಟೆಗೆ ಠಾಣೆಗೆ ಬಂದು ಠಾಣಾ ಎಸ್ ಎಚ್ ಒ ಅವರಲ್ಲಿ ವರದಿ ಮಾಡಿರುತ್ತಾರೆ ಮತ್ತು ಠಾಣಾ ದಿನಚರಿಯಲ್ಲಿ ನಮೂದಿಸಲಾಗಿರುತ್ತದೆ.

ನಂತರ ದಿನಾಂಕ 03/04/2021 ರ ಸಂಜೆ 4:35ರ ಸಮಯದಲ್ಲಿ ಹಾಸನದ ಕಂಟ್ರೋಲ್‌ಯಿಂದ ಎನ್ ಆರ್ - 10 ಜಿ ಆರ್ 35ರ ಉಲ್ಲೇಖದಲ್ಲಿ ಪುತ್ತೂರು ಟೌನ್ ಪೋಲಿಸ್ ಠಾಣೆ ಠಾಣಾಧಿಕಾರಿಗಳಿಂದ ಶಾಂತಿಗ್ರಾಮ‌ ಠಾಣಾಧಿಕಾರಿಯವರಿಗೆ ಎಂ ಎಲ್ ಸಿ ಇಂಟಿಮೇಷನ್ ಬಂದಿದ್ದು ಆ ವರದಿಯಲ್ಲಿ ಲಾರಿಯ ಚಾಲಕ ಸಯ್ಯದ್ ನದೀಮ್‌ನ ಮೇಲೆ ಶಾಂತಿಗ್ರಾಮದ ಬಳಿ ಪೋಲಿಸ್ ಸಿಬ್ಬಂದಿಯವರಿಂದ ಹಲ್ಲೆ ಆಗಿರುತ್ತದೆ ಎಂದು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಎಂ ಎಲ್ ಸಿ ನಮೂದಾಗಿರುವ ಮಾಹಿತಿ ತಿಳಿಸಿರುತ್ತಾರೆ, ಈ ಮಾಹಿತಿ ಸತ್ಯಕ್ಕೆ ದೂರವಾಗಿದ್ದು ಪೋಲಿಸ್ ಸಿಬ್ಬಂದಿಯವರ ಮೇಲೆ ಸುಳ್ಳು ಅಪಾದನೆ ಮಾಡಿರುತ್ತಾರೆ.

ನಂತರ ಶಾಂತಿಗ್ರಾಮ ಠಾಣೆಯಿಂದ ಪುತ್ತೂರು ಟೌನ್ ಪೋಲಿಸ್ ಠಾಣೆಗೆ ಕರೆ ಮಾಡಿ ಎಂ ಎಲ್ ಸಿ ಹಾಗೂ ಚಾಲಕನ ನದೀಮನ ಬಗ್ಗೆ ಮಾಹಿತಿ ಕೇಳಿರುತ್ತಾರೆ ಅಲ್ಲಿನ ಸಬ್‌‌ಇನ್ಸ್ಪೆಕ್ಟರ್‌ರವರು ಚಾಲಕ ನದೀಮ್ ಪುತ್ತೂರು ಆಸ್ಪತ್ರೆಗೆ ಹೊರರೋಗಿಯಾಗಿ ಹೋಗಿ ಡಿಸ್ಚಾರ್ಜ್ ಆಗಿರುವ ಮಾಹಿತಿಯನ್ನು ಶಾಂತಿಗ್ರಾಮ ಠಾಣೆಗೆ ತಿಳಿಸಿರುತ್ತಾರೆ.
ಇದಿಷ್ಟು ಆ ಘಟನೆಯ ಸತ್ಯಾಂಶವಾಗಿದ್ದು ರಾತ್ರಿ ವೇಳೆ ಅಜಾಗರೂಕತೆಯಿಂದ ಅತಿವೇಗದಲ್ಲಿ ಚಾಲನೆ ಮಾಡಿದ ಲಾರಿ ಚಾಲಕನನ್ನು ವಿಚಾರಣೆ ಮಾಡಿ ತಿಳುವಳಿಕೆ ಹೇಳಿ ಕಳುಹಿಸಿರುವ ರಾತ್ರಿ ಗಸ್ತಿನ ಸಿಬ್ಬಂದಿಗಳಾದ ಪಾಪಯ್ಯ ಮತ್ತು ನವೀನ್‌ಕುಮಾರ್ ಅವರ ಮೇಲೆ ಸುಳ್ಳು ಅಪಾದನೆ ಮಾಡಲಾಗಿರುತ್ತದೆ.

Post a Comment

Previous Post Next Post