ಹಾಸನ: ನಗರದ ಹೊಸಲೈನ್ ರಸ್ತೆ, ಶ್ರೀ ಬಸವೇಶ್ವರ ಕಲ್ಯಾಣ ಮಂಟಪದ ಎದುರು ಇರುವ ಡಾ|| ನಾಗರಾಜು ರವರ ಜಯಶೀಲ ಕ್ಲಿನಿಕ್ ನಲ್ಲಿರುವ ಮೆಡಿಕಲ್ ನಲ್ಲಿದ್ದ ೭ ಸಾವಿರಕ್ಕೂ ಹೆಚ್ಚು ರೂಗಳನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ.
ಪ್ರತಿ ದಿನದಂತೆ ಶುಕ್ರವಾರದಂದು ಜಯಶೀಲ ಕ್ಲಿನಿಕ್ ನ್ನು ರಾತ್ರಿ ಬಾಗಿಲು ಹಾಕಿಕೊಂಡು ಮನೆಗೆ ಹೋದ ಮೇಲೆ ತಡ ರಾತ್ರಿಯಲ್ಲಿ ಬಾಗಿಲ ತೆಗೆದ ಕಳ್ಳರು ಕ್ಲಿನಿಕ್ ಒಳ ಹೋಗಲು ಎತ್ತರಕ್ಕೆ ಛೇರನ್ನು ಜೋಡಿಸಿಕೊಂಡು ಮೇಲತ್ತಿ ಒಳ ನುಗ್ಗಿದ್ದಾರೆ. ಕ್ಲಿನಿಕ್ ಒಳಗೆ ಹಣ ಸಿಗದಿದ್ದಾಗ ಹಿಂಬಾಗ ಕಿಟಿಕೆಯಂತಿದ್ದ ಮೆಡಿಕಲ್ ಒಳ ನುಗ್ಗಲು ಅಲ್ಲೆ ಇದ್ದ ಕತ್ತರಿಯಿಂದ ಮೀಟಿದ್ದಾರೆ. ಟೇಬಲ್‌ನ ಡ್ರಾಯರ್ ಒಳಗೆ ಇದ್ದ ೭ ಸಾವಿರ ರೂಗಳ ಹಣವನ್ನು ದೋಚಿದ್ದಾರೆ. ಮತ್ತೆ ಯಾವುದೆ ಬೆಲೆ ಬಾಳುವ ವಸ್ತುಗಳು ಸಿಕ್ಕಿರುವುದಿಲ್ಲ ಆದರೇ ಕಳ್ಳರು ಒಳ ನುಗ್ಗಲು ಕೆಲ ವಸ್ತುಗಳನ್ನು ನಷ್ಟ ಮಾಡಿದ್ದಾರೆ. ಶನಿವಾರದಂದು ಬೆಳಿಗ್ಗೆ ವಿಚಾರ ತಿಳಿದ ಜಯಶೀಲ ಕ್ಲಿನಿಕ್ ನ ಮಾಲೀಕರು ಮತ್ತು ವೈದ್ಯರಾದ ಡಾ. ಹೆಚ್. ನಾಗರಾಜು ರವರು ಆಸ್ಪತ್ರೆಗೆ ಬಂದು ಪೊಲೀಸ್ ಠಾಣೆಗೆÀ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಕಳ್ಳತನ ಮಾಡಿದ ಆರೋಪಿ ಬಂಧನಕ್ಕೆ ಮುಂದಾಗಿದ್ದಾರೆ.
ಈ ಭಾಗದಲ್ಲಿ ಯಾವ ಸಿಸಿ ಕ್ಯಾಮರ ಅಳವಡಿಸಿರುವುದಿಲ್ಲ. ಕ್ಯಾಮರ ಇದ್ದಿದ್ದರೇ ಕಳ್ಳತನ ಮಾಡಿದ ಆರೋಪಿಯನ್ನು ಪತ್ತೆ ಹಚ್ಚಲು ಸಹಕಾರಿಯಾಗುತಿತ್ತು ಎಂದು ಇಲ್ಲಿನ ಸುತ್ತ ಮುತ್ತಲ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು.