ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಸಾವರ ಸ್ಥಳದಲ್ಲೇ ಮೃತಪಟ್ಟಿದ್ದಾರೆ

ಆಲೂರು : ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಆಲೂರು ತಾಲೂಕಿನ ಕಾರ್ಜವಳ್ಳಿ ಕೂಡಿಗೆ ಬಳಿ ಶನಿವಾರ ಸಂಜೆ ನಡೆದಿದೆ.   
    ಮೃತ ವ್ಯಕ್ತಿಯು ಬಿಕ್ಕೋಡು ಗ್ರಾಮದ ಜನಾರ್ಧನ ಆಚಾರ್ಯ (67) ಎಂದು ಗುರುತಿಸಲಾಗಿದೆ.  ಮೃತ ವ್ಯಕ್ತಿಯು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು  ಅದೇ ಗ್ರಾಮದ  ಸ್ನೇಹಿತನ ಮೋಹನ್ ಕುಮಾರ್  (58) ನ ಜೊತೆ ಬೈಕ್ ನಲ್ಲಿ  ತೆರಳುತ್ತಿದ್ದಾಗ ಪಾಳ್ಯ ಹೋಬಳಿಯ ಕಾರ್ಜುವಳ್ಳಿ ತಿರುವಿನಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಜನಾರ್ದನ ಆಚಾರ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಮೋಹನ್ ಕುಮಾನ್  ಹಾಸನದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
 
ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

Previous Post Next Post