ಬೇಲೂರು:ಇಲ್ಲಿನ ಪ್ರಸಿದ್ಧ ಶ್ರೀ ಚನ್ನಕೇಶವಸ್ವಾಮಿಯವರ ದೇವಾಲಯದಲ್ಲಿ ಯುಗಾದಿ ಹಬ್ಬವಾದ ಮಂಗಳವಾರ ಶ್ರೀಯವರನ್ನು ಅಡ್ಡೆಯಲ್ಲಿಟ್ಟು ದೇಗುಲದ ಒಳ ಆವರಣದಲ್ಲಿ ಸರಳವಾಗಿ ಉತ್ಸವ ನಡೆಸಲಾಯಿತು.
ಉತ್ಸವವು ದೇಗುಲದ ಹೊರಭಾಗದ 8 ಉತ್ಸವ ಬೀದಿಗಳಲ್ಲಿ ನಡೆಯಬೇಕಿತ್ತಾದರೂ ಕೊರೊನಾ ಹಿನ್ನಲೆಯಲ್ಲಿ ಸರ್ಕಾರದ ಆದೇಶದಂತೆ ದೇಗುಲದ ಒಳ ಆವರಣದಲ್ಲಷ್ಟೇ ನಡೆಸಲಾಯಿತು.
ಉತ್ಸವ ಸಂದರ್ಭ ದೇವಾಲಯದ ಒಳಭಾಗಕ್ಕೆ ಭಕ್ತರಿಗೆ ನಿರ್ಭಂಧಿಸಲಾಗಿತ್ತು. ಉತ್ಸವದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಯುಗಾದಿ ಹಬ್ಬದಂದು ನಡೆಯುವ ಉತ್ಸವವು ಏಪ್ರಿಲ್ 23 ರಂದು ನಡೆಯುವ ಶ್ರೀ ಚನ್ನಕೇಶವಸ್ವಾಮಿಯವರ ರಥೋತ್ಸವಕ್ಕೆ ಪೂರಕವಾಗಿ ಪ್ರಥಮ ಉತ್ಸವವಾಗಿದ್ದು ಇಂದಿನಿಂದ ದೇಗುಲದ ಒಳ ಆವರಣದಲ್ಲಿ ರಥೋತ್ಸವದವರಗೂ ವಿವಿಧ ಉತ್ಸವಾದಿಗಳು ಜರುಗಲಿವೆ.
ಆದರೆ ಉತ್ಸವದ ವೇಳೆ ಭಕ್ತರಿಗೆ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.
ಬೇಸರ: ಯುಗಾದಿ ಹಬ್ಬದ ಮುನ್ನಾದಿನ ಮಿನಿವಿಧಾನಸೌಧದಲ್ಲಿರುವ ಖಜಾನೆಯಿಂದ ದೇವರ
ಆಭರಣವನ್ನು ಮೆರವಣಿಗೆ ಮೂಲಕ ತಂದು ದೇವರಿಗೆ ತೊಡಿಸಲಾಗುತ್ತಿತ್ತು.
ಕೊರೊನಾ ಹಿನ್ನಲೆಯಲ್ಲಿ ಈ ವರ್ಷ ಆಭರಣ ತೊಡಿಸಲಿಲ್ಲ.ಪ್ರತಿವರ್ಷ ಯುಗಾದಿ ಹಬ್ಬದಂದು ದೇಗುಲಕ್ಕೆ ಬರುವ ಆಭರಣದ ದಿರಿಸಿನಲ್ಲಿ ಶ್ರೀಚನ್ನಕೇಶವಸ್ವಾಮಿಯವರ ದರ್ಶನ ಪಡೆದು ಪುಳಕಿತರಾಗುತ್ತಿದ್ದರು. ಆದರೆ ಈ ವರ್ಷ ಆಭರಣವಿಲ್ಲದ ಶ್ರೀಚನ್ನಕೇಶವನ ದರ್ಶನ ಪಡೆದರು. ಇದು ಭಕ್ತರಿಗೆ ನಿರಾಸೆ ಉಂಟು ಮಾಡಿತು.
ದೇಗುಲದ ಹೊರಭಾಗದಲ್ಲಿ ಯಾವುದೆ
ರೀತಿಯ ನಿರ್ಭಂಧವಿಲ್ಲದೆ ಜನರು ಓಡಾಡುತ್ತಿದ್ದಾರೆ,
ಹಬ್ಬದಂದು ಗುಂಪುಗೂಡಿ ವಸ್ತುಗಳ
ಖರೀದಿಸಿದ್ದಾರೆ, ಆದರೆ 15 ರಿಂದ 20 ಜನರೊಂದಿಗೆ
ನಡೆಯುವ ದೇವರ ಉತ್ಸವಕ್ಕೆ ಮತ್ತು ಕೇವಲ
15 ಜನಸಂಖ್ಯೆಯೊಂದಿಗೆ ಖಜಾನೆಯಿಂದ ತರಲಾಗುವ
ಆಭರಣಕ್ಕೆ ಏಕೆ ನಿರ್ಭಂದ ಹೇರಲಾಯಿತು ಎನ್ನುವ
ಬಗ್ಗೆ ಭಕ್ತರು ಚರ್ಚಿಸುತ್ತಿದ್ದರು.
ಉತ್ಸವದ ನಂತರ ಮಾತನಾಡಿದ ದೇಗುಲದ ಕಾರ್ಯನಿರ್ವಾಹಣಾಧಿಕಾರಿ ವಿದ್ಯುಲ್ಲತಾ ಅವರು,
ಯುಗಾದಿ ಹಬ್ಬದಂದಿನಿಂದ ಆರಂಭಗೊಳ್ಳಲಿರುವ
ಉತ್ಸವವು ರಥೋತ್ಸವದವರಗೂ ಜರುಗಲಿದೆ.
ಕೊರೊನಾ ಹಿನ್ನಲೆಯಲ್ಲಿ ದೇಗುಲದ ಒಳ ಆವರಣದಲ್ಲೆ ಅಡ್ಡೆಉತ್ಸವ ನಡೆಸಲಾಗುತ್ತದೆ.
ಏಪ್ರಿಲ್ 23 ಹಾಗೂ 24 ರಂದು ರಥೋತ್ಸವನ್ನು
ದೇಗುಲದ ಒಳ ಆವರಣದಲ್ಲೆ ಚಿಕ್ಕರಥದ ಮೇಲೆ
ಪ್ರತಿಷ್ಠಾಪಿಸಿ ರಥೋತ್ಸವ ನಡೆಸಲಾಗುವುದು. ಆ
ಸಂದರ್ಭ ಭಕ್ತರಿಗೆ ಪ್ರವೇಶ
ನಿರ್ಭಂಧಿಸಲಾಗಿರುತ್ತದೆ. ಭಕ್ತರು
ಸಹಕರಿಸಬೇಕೆಂದು ಮನವಿ ಮಾಡಿದರು.
ದೇಗುಲದ ವತಿಯಿಂದ ನಡೆದ ಉತ್ಸವದ ನಂತರ
ಸೇವಾರ್ಥದಾರ ಪ್ರಕಾಶ್ ಇವರಿಂದ ಉತ್ಸವವು
ಜರುಗಿತು.
ಇಂದಿನ ಉತ್ಸವದ ವೇಳೆ ಆಗಮಿಕ ಅರ್ಚಕ
ಕೃಷ್ಣಸ್ವಾಮಿಭಟ್ಟರ್ ಹಾಗೂ ಪುರೋಹಿತರ ತಂಡ,
ಅಡ್ಡೆಗಾರರು ಹಾಗೂ ದೇಗುಲದ ನೌಕರರು
ಇದ್ದರು.
Tags
ಬೇಲೂರು