ಉತ್ತಮ ಪ್ರತಿಕ್ರಿಯೆಯೊಂದಿಗೆ ಯಶಸ್ವಿಯಾದ ಮೊದಲ ದಿನದ ಲಾಕ್ ಡೌನ್.

ಇಡೀ ದೇಶದಾದ್ಯಂತ ಕರೋನಾ ಎರಡನೇ ಅಲೆಯೂ ವ್ಯಾಪಕವಾಗಿ ಬಹಳ ಬೇಗ ಹಬ್ಬುತ್ತಿರುವ ಪರಿಣಾಮದಿಂದಾಗಿ ರಾಜ್ಯ ರ‍್ಕಾರವು ಆದೇಶಿಸಿರುವ ೧೪ ದಿನಗಳ ಲಾಕ್ ಡೌನ್ ನ ಮೊದಲ ದಿನವಾದ ಇಂದು ಆಲೂರಿನಲ್ಲಿ ಸರ‍್ವಜನಿಕರಿಂದ ,ರ‍್ತಕರುಗಳಿಂದ, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಸರ‍್ವಜನಿಕರ ಹಿತದೃಷ್ಟಿಯಿಂದ ಬೆಳಿಗ್ಗೆ ಆರರಿಂದ ಹತ್ತು ಗಂಟೆಯವರೆಗೆ ದಿನನಿತ್ಯದ ಅಗತ್ಯ  ವಸ್ತುಗಳ ಖರೀದಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು, ರ‍್ಕಾರದ ಆದೇಶದಂತೆ ಜನರು ತಮಗೆ ಬೇಕಾಗಿರುವ ಅಗತ್ಯ ವಸ್ತುಗಳನು ಹತ್ತು ಗಂಟೆಯ ಮುಂಚಿತವಾಗಿಯೇ ಕೊಂಡುಕೊಳ್ಳಲು ಅಂಗಡಿಯ ಮುಂದೆ ನಿಂತಿರುವಂತಹ ದೃಶ್ಯಗಳು ಕಂಡುಬಂದವು.

ಎಂದಿನಂತೆ ಮೆಡಿಕಲ್ ಶಾಪ್,ಬ್ಯಾಂಕುಗಳು , ಪೆಟ್ರೋಲ್ ಬಂಕ್, ಆಸ್ಪತ್ರೆಗಳು ಕರ‍್ಯವನ್ನು ನರ‍್ವಹಿಸಿದವು.

ರ‍್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಅನಗತ್ಯವಾಗಿ ಓಡಾಡುತ್ತಿದ್ದ ಸರ‍್ವಜನಿಕರಿಗೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಅಡ್ಡಗಟ್ಟಿ ಎಚ್ಚರಿಕೆನೀಡಿ ಅನಗತ್ಯವಾಗಿ ಓಡಾಡುವಂತಹ ಅವರಿಗೆ ದಂಡ ಅಥವಾ ವಾಹನವನ್ನು ವಶಪಡಿಸಿಕೊಳ್ಳುವುದಾಗಿ ತಿಳಿಸಿದರು .

Post a Comment

Previous Post Next Post