ಮಾನ್ಯ ಮುಖ್ಯ ಮಂತ್ರಿಯವರೇ,
ರಾಜ್ಯಾದ್ಯಂತ ಬೀಸುತ್ತಿರುವ ಕೊರೋನಾ ಸೋಂಕುವಿನ 2ನೇ ಅಲೆಯ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಎರಡು ವಾರದ ಅವಧಿಯ ಕರ್ಮ್ಯೂವಿನಿಂದ ಬಾಧಿತವಾಗಿರುವ ಕೂಲಿ ಕಾರ್ಮಿಕರಿಗೆ ಪರಿಹಾರ ಪ್ಯಾಕೇಜ್ ನೀಡಲು ಮತ್ತು ಹಾಸನ ಜಿಲ್ಲೆಯಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮನವಿ,
ದೇಶದಾದ್ಯಂತ ಕೊರೋನಾ ಸೋಂಕುವಿನ 2ನೇ ಅಲೆ ವ್ಯಾಪಕವಾಗಿ ಹಬ್ಬುತ್ತಿದ್ದು, ನಮ್ಮ ರಾಜ್ಯದಲ್ಲಿ ಈ 2ನೇ ಅಲೆಯಲ್ಲಿ ಈ ಮಹಾಮಾರಿ ಸೋಂಕುವಿನ ದಿನನಿತ್ಯ ಸಾವಿರಾರು ಜನರು ಸಾವಿಗೀಡಾಗುತ್ತಿದ್ದಾರೆ.
ರಾಜ್ಯದಲ್ಲಿ ಪ್ರಸಕ್ತದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯಗಳಿಂದ ಕೊರೋನಾ ಸೋಂಕಿತರನ್ನು ಆಸ್ಪತ್ರೆಗಳಲ್ಲಿ ದಾಖಲಿಸಿಕೊಂಡು, ಹಾಸಿಗೆಗಳನ್ನು ಹಾಗೂ ಆಮ್ಲಜನಕಯುಕ್ತ ಹಾಸಿಗೆಗಳು ಮತ್ತು ಐ.ಸಿ.ಯು. ಗಳನ್ನು ಒದಗಿಸಲು ಸಾಕಾಗುತ್ತಿಲ್ಲ. ಇದಲ್ಲದೆ, ದಿನೇದಿನೇ ಹೆಚ್ಚಾಗುತ್ತಿರುವ ರೋಗಿಗಳ ಸಂಖ್ಯೆಯಿಂದ ಮತ್ತು ವೃದ್ಧರು, ಯುವಕರಲ್ಲಿ ವ್ಯಾಪಕವಾಗಿ ಈ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರು ಭಯ-ಭೀತರಾಗಿ ಈ ಸೋಂಕಿತರನ್ನು ಆಸ್ಪತ್ರೆಗಳಿಗೆ ದಾಖಲಿಸಲು ಮುನ್ನುಗ್ಗುತ್ತಿದ್ದಾರೆ.
ಇದಲ್ಲದೆ, ರಾಜ್ಯದಲ್ಲಿನ ಎಲ್ಲಾ ಆಸ್ಪತ್ರೆಗಳಲ್ಲಿ ಜೀವ-ವಾಯು ಆಗಿರುವ ಆಕ್ಸಿಜನ್ ಕೊರತೆ ತುಂಬಾ ಇರುತ್ತದೆ. ಅಲ್ಲದೆ, ರೋಗ ನಿರೋಧಕ ಔಷಧಿಗಳಾದ ರೆಮೊಡಿಸಿವಿಲ್ ಮತ್ತು ನೋರೋಡೆಸಲಿನ್ ಬಹಳ ಕೊರತೆ ಇದ್ದು, ಕಠಿಣ ಪರಿಸ್ಥಿತಿಯಲ್ಲಿರುವ ರೋಗಿಗಳ ಜೀವ ಉಳಿಸಲು ವೃದ್ಧರು ಮತ್ತು ಆರೋಗ್ಯ ಕಾರ್ಯಕರ್ತರು ಹಗಲು-ಇರುಳು ಶ್ರಮಿಸುತ್ತಿದ್ದಾರೆ.
ಇಂತಹ ಕ್ಲಿಷ್ಠ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳ ಅಗತ್ಯತೆಯನ್ನು ಪೂರೈಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ. ಅಲ್ಲದೆ, ಮುಂಬರುವ ಎರಡು ತಿಂಗಳ ಕಾಲ ರಾಜ್ಯ ಮತ್ತು ದೇಶಕ್ಕೆ ಕಠಿಣ ಸಮಯ ಮತ್ತು ವಿಷಮ ಪರಿಸ್ಥಿತಿ ಆಗಿರುವುದರಿಂದ ಈ ಬಗ್ಗೆ ಸದಾಕಾಲ ಎಚ್ಚರವಹಿಸಬೇಕೆಂದು ಕೋರುತ್ತೇನೆ.
ನನ್ನ ತವರು ಜಿಲ್ಲೆಯಾದ ಹಾಸನದಲ್ಲಿ ಕಳೆದ ಮಾರ್ಚ್ ತಿಂಗಳಿಂದ ಪ್ರತಿ ದಿನ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಪ್ರತಿದಿನ ಅಂದಾಜು 800-1000 ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.
ಇದುವರೆಗೂ ಹಾಸನ ಜಿಲ್ಲೆಯಲ್ಲಿ 37890 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಈ ಪೈಕಿ 556 ಜನ ಕೋವಿಡ್-19 ಸೋಂಕುವಿನಿಂದ ಮೃತಪಟ್ಟಿರುತ್ತಾರೆ. ಪ್ರಸ್ತುತ 31502ಸೋಂಕಿತರು ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿರುತ್ತಾರೆ. ಪ್ರಸಕ್ತ ಜಿಲ್ಲೆಯಲ್ಲಿ 5832 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ, 72ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಿನಾಂಕ: 28-04-2021ರಲ್ಲಿದ್ದಂತೆ, ತಾಲ್ಲೂಕುವಾರು ಕೋವಿಡ್-19 ಸೋಂಕಿತರ ವಿವರ ಕಳಕಂಡಂತಿದೆ:
ಹಾಸನ ಜಿಲ್ಲೆಯಲ್ಲಿ, ಒಂದು ಜಿಲ್ಲಾ ಆಸ್ಪತ್ರೆ, 07 ತಾಲ್ಲೂಕು ಆಸ್ಪತ್ರೆ ಮತ್ತು 15 ಸಮುದಾಯ ಆರೋಗ್ಯ ಕೇಂದ್ರಗಳಿದ್ದು, ಈ ಆಸ್ಪತ್ರೆಗಳಲ್ಲಿ ಒಟ್ಟು 2030 ಹಾಸಿಗೆಗಳು ಲಭ್ಯವಿದ್ದು, ಈ ಪೈಕಿ 855 ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲಾಗಿದೆ. ಮಿಗಿಲಾಗಿ ಸೋಂಕಿತರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದರಲ್ಲಿ, ಈಗಾಗಲೇ 500 ಕ್ಕೂ
ಇದೇ ರೀತಿ, ಜಿಲ್ಲೆಯಲ್ಲಿ 11 ಖಾಸಗಿ ಆಸ್ಪತ್ರೆಗಳನ್ನು ಕೋವಿಡ್-19 ಆಸ್ಪತ್ರೆಗಳೆಂದು ಜಿಲ್ಲಾಡಳಿತ ಗುರುತಿಸಿದ್ದು, ಈ ಆಸ್ಪತ್ರೆಗಳಲ್ಲಿ ಒಟ್ಟು 504 ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲು ಇರಿಸಲಾಗಿದ್ದು, ಇಂದಿನವರೆಗೆ 192 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು 13000 ಕಿಲೋ ಲೀಟರ್ ಸಾಮರ್ಥ್ಯದ ಆಕ್ಸಿಜನ್ ಘಟಕದ ವ್ಯವಸ್ಥೆ ಇದ್ದರೂ, ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಮತ್ತು ಸಮುದಾಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸರಬರಾಜು ಮಾಡಲು ಜಂಬೋ ಆಕ್ಸಿಜನ ಸಿಲಿಂಡರ್‌ಗಳ ಸರಬರಾಜು ವ್ಯವಸ್ಥೆಯನ್ನು ತುರ್ತಾಗಿ ಮಾಡಬೇಕಾಗಿದೆ.
ಅಲ್ಲದೆ, ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಈ ಕೆಳಕಂಡ ಮೂಲ ಸೌಕರ್ಯಗಳ ಕೊರತೆಯಿದ್ದು, ಈ ಅವಶ್ಯಕತೆಯನ್ನು ಕೂಡಲೇ ಪೂರೈಸುವುದು ಅವಶ್ಯವಾಗಿದೆ:
1)Cots
2)Coir Beds
3)Pillow & Pillow Covers
4)Bed Sheets
5)Colour Bed Sheets
6)Woolen Blanket
6)Oxygen Flow Meter Pulse Oxymeter
7)Infrared Thermometer
8)HFNC Machine
ಜಿಲ್ಲೆಯಲ್ಲಿ ಪ್ರತಿ ದಿನ 1000 ಕ್ಕೂ ಮಿಗಿಲಾಗಿ ಸೋಂಕಿತ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಪ್ರತಿದಿನ 500 ಜನರಿಗೆ ರೋಗ ನಿರೋಧಕ ರೆಮಿಡಿಸಿವಿಲ್ ಇಂಜಕ್ಷನ್ ನೀಡುವುದು ಅವಶ್ಯವಿರುವುದಾಗಿ ತಿಳಿದುಬಂದಿದೆ.
ಆದರೆ, ಜಿಲ್ಲೆಯಲ್ಲಿ ಪ್ರಸ್ತುತ ಕೇವಲ 126 ವಯಲ್ ರೆಮಿಡಿಸಿಏರ್ ಇಂಜಕ್ಷನ್ ಮಾತ್ರ ಲಭ್ಯವಿರುವುದಾಗಿ ವರದಿಯಾಗಿದೆ. ವಯಲ್ ರೆಮಿಡಿಸಿಎ ಇಂಜಕ್ಷನ್ ಅನ್ನು ಸರ್ಕಾರ ನೀಡಬೇಕೆಂದು ಒತ್ತಾಯಿಸುತ್ತೇನೆ. ಜಿಲ್ಲೆಯಲ್ಲಿ ಹಲವಾರು ಸೋಂಕಿತರು ತಮ್ಮ ಸ್ವಗೃಹದಲ್ಲಿ ಹೋಂ ಐಸೋಲೋಷನ್‌ನಲ್ಲಿ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರನ್ನು ಒಳಗೊಂಡಂತೆ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಈ ಕೆಳಕಂಡ ಔಷಧಿ ಸಾಮಗ್ರಿಗಳನ್ನು ಜಿಲ್ಲಾಡಳಿತಕ್ಕೆ ಕೂಡಲೇ ಒದಗಿಸುವುದು ರಾಜ್ಯ ಸರ್ಕಾರದ ಆದ್ದರಿಂದ ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ತುರ್ತಾಗಿ 10,000 ಆದ್ಯಕರ್ತವ್ಯವಾಗಿದೆ:
1 Inj Dexamethasone
2 Inj Hydrocortisone 100mg
3 Inj Enoxaparin 40mg
4 Inj Methyl Prednisolone
5 InjRemdesivir 100
6)Inj Dobutamine
7)Inj Dopamine
8)Inj Noradrenaline
9)Inj Vasopressin
10)Tab Hydroxychloroquine 200mg 1 X 10 X 10
11) Tab Hydroxychloroquine 200mg 1 X 15
12)Cap Oseltamivir 75mg
1 X10
13)Tab Azithromycin 500mg
14)Tab Vitamin - C
15) Tab Zinc
16)Tab Favipiravir 200mg 1 X
17)Rapid Antigen kits
18) Cough syrup
19)Alcoholic Hand Disinfectant 500ml
20)Hand Sanitizer 375 ML
21) Triple layer mask
22) N-95 Mask
23) PPE
24)Sterile Gloves 6.5
25)Sterile Gloves 7
26)VTM
27)Erythropoietin Inj
28)Inj Ascorbic Acid
29)Inj.Doxycycline
30) Inj.Tocilizumab 2000/400/800mg .
31) lnj.Panatprazole
32) Tab. Ivermectin 12mg
33) Cap.Doxycycline
34)Tab.Paracetamol 650 mg
ಆದ್ದರಿಂದ, ಮೇಲೆ ತಿಳಿಸಿದಂತೆ, ಹಾಸನ ಜಿಲ್ಲಾಡಳಿತಕ್ಕೆ ಅಗತ್ಯವಿರುವ ಆಕ್ಸಿಜನ್ ಸರಬರಾಜು, ರೆಮಿಡಿಸಿಎರ್ ಇಂಜಕ್ಷನ್, ಇತರೆ ಅಗತ್ಯ ಔಷಧಿ ಸಾಮಗ್ರಿಗಳು ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸಲು ಬೇಕಾಗಿರುವ, ಮಂಚ, ಹಾಸಿಗೆ, ಹೊದಿಕೆ, ಪಲ್ಸ್ ಆಕ್ಸಿಮೀಟರ್ ಮುಂತಾದವುಗಳನ್ನು ತುರ್ತಾಗಿ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ.
ಅಲ್ಲದೆ, ರಾಜ್ಯದಲ್ಲಿ ಎರಡು ವಾರಗಳ ಅವಧಿಯ ಕರ್ಮ್ಯೂ ವಿಧಿಸಿರುವುದರಿಂದ, ಸಮಾಜದ ದುರ್ಬಲ ವರ್ಗದವರು ಬಹಳವಾಗಿ ಬಳಲುತ್ತಾರೆ. ಅದರಲ್ಲಿ ಕೃಷಿ - ಕಾರ್ಮಿಕರು, ಕೂಲಿ-ಕಾರ್ಮಿಕರು, ಮನೆಗೆಲಸದವರು, ನಿರ್ಗತಿಕರು ಆಹಾರವಿಲ್ಲದೆ ಪೇಚಾಡುತ್ತಾರೆ.
ಇಂತಹ ವರ್ಗಕ್ಕೆ ಸೇರಿದವರ ಸಂಕಷ್ಟವನ್ನು ಬಗೆಹರಿಸಲು ಸರ್ಕಾರ ಈ ಕರ್ಥ್ಯ ಅವಧಿಯಲ್ಲಿ ಪ್ರತಿಯೊಬ್ಬರಿಗೂ 10 ಕೆ.ಜಿ. ಅಕ್ಕಿ, ಗೋಧಿ ಮತ್ತು ರಾಗಿ ವಿತರಿಸಬೇಕೆಂದು ಆಗ್ರಹಿಸುತ್ತೇನೆ. ಅಲ್ಲದೆ, ಈ ವರ್ಗದವರ ದೈನಂದಿನ ದುಡಿಮೆ ಈ ಸಮಯದಲ್ಲಿ ಅಸಾಧ್ಯವಾಗಿರುವುದರಿಂದ ಇಂತವರ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಕನಿಷ್ಟ ರೂ. 2000/- ಗಳನ್ನು ಪರಿಹಾರವಾಗಿ ಸರ್ಕಾರದಿಂದ ಜಮಾ ಮಾಡಬೇಕೆಂದು ಒತ್ತಾಯಿಸುತ್ತೇನೆ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ,
(ಹೆಚ್.ಡಿ.ದೇವೇಗೌಡ)

