ರಿಯಲ್ ಸ್ಟಾರ್ ಉಪೇಂದ್ರ ತಲೆಗೆ ಬಡಿದ ರಾಡ್ | ಶೂಟಿಂಗ್ ವೇಳೆ ಘಟನೆ

ಫೈಟಿಂಗ್ ದೃಶ್ಯ ಶೂಟಿಂಗ್ ಮಾಡುತ್ತಿದ್ದ ವೇಳೆ ಸಹ ನಟ ಬೀಸಿದ ರಾಡ್ ಆಕಸ್ಮಿಕವಾಗಿ ರಿಯಲ್ ಸ್ಟಾರ್ ಉಪೇಂದ್ರ ಅವರ ತಲೆಗೆ ಬಡಿದು ಅವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.


ಕಳೆದ ರಾತ್ರಿ ಮಿನರ್ವ ಮಿಲ್ ನಲ್ಲಿ ಶೂಟಿಂಗ್ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಇದು ಆಕಸ್ಮಿಕವಾಗಿ ನಡೆದಿರುವ ಘಟನೆಯಾಗಿದೆ ಎಂದು ತಿಳಿದು ಬಂದಿದೆ.

ಉಪೇಂದ್ರ ಅವರ ಬಹು ನಿರೀಕ್ಷಿತ ಚಿತ್ರ “ಕಬ್ಜ”ದ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ.  ಗಾಯಗೊಂಡರೂ ಉಪೇಂದ್ರ ಅವರು ಶೂಟಿಂಗ್ ಮುಗಿಸಿದ ಬಳಿಕವೇ ಸ್ಥಳದಿಂದ ತೆರಳಿದ್ದಾರೆ ಎಂದು ಹೇಳಲಾಗಿದೆ.

Post a Comment

Previous Post Next Post