ಹಾಸನ: ಹೊಳೆನರಸೀಪುರದಿಂದ ನಗರಕ್ಕೆ ಬರುತ್ತಿದ್ದ ಹಾಸನ ಡಿಪೊ ಬಸ್‌ಗೆ ಗುರುವಾರ ಯಳ್ಳೇಶಪುರ ಗ್ರಾಮದ ಬಳಿ ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಬಸ್ ಗಾಜು ಜಖಂಗೊಂಡಿದ್ದು, ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಹಾಸನಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಮಾಸ್ಟ್ ಮತ್ತು ಹೆಲ್ಮಟ್ ಧರಿಸಿ ಬಂದ ಇಬ್ಬರು ಹಿಂದಿನಿಂದ ಬಂದು ಕಲ್ಲು ಎಸೆದಿದ್ದರಿಂದ ಬಸ್‌ನ ಹಿಂದಿನ ಗಾಜು ಒಡೆದಿದೆ. ಈ ಸಂಬಂಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.