ಬೆಂಗಳೂರು: ಬೆಂಗಳೂರು ಆಕಾಶವಾಣಿಯ ಹಿರಿಯ ತಾಂತ್ರಿಕ ಸಹಾಯಕಿ ಉಮಾ ವೆಂಕಟೇಶ್ ಇಂದು (ಏ.15) ಕೊರೋನಾಗೆ ಬಲಿಯಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಅವರು ನಗರದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದರು ಎಂದು ಬೆಂಗಳೂರು ಆಕಾಶವಾಣಿಯ ಮೂಲಗಳು ತಿಳಿಸಿವೆ. ಉಮಾ ವೆಂಕಟೇಶ್ ಅವರ ನಿಧನಕ್ಕೆ ಆಕಾಶವಾಣಿ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.