ಹಾಸನ : ಶಂಕರನಹಳ್ಳಿ ಗ್ರಾಮಪಂಚಾಯಿತಿಯ ಗೋಳೇನಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರವರ ಜಯಂತಿಯನ್ನು ಸರಳವಾಗಿ ಆಚರಸಿಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೀನಾಕ್ಷಮ್ಮ ವೆಂಕಟೇಶ್‌ರವರು ಮಾತನಾಡಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತಿನಂತೆ ನಾವೆಲ್ಲರೂ ಒಗ್ಗಟ್ಟಾಗಿ ಮುನ್ನೆಡೆಯುವ ಎಂಬ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಯುವಕ ಯದೀಶ್, ಇದೇ ಮೊದಲ ಬಾರಿಗೆ ನಾವು ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದ್ದೇವೆ ಇನ್ನೂ ಮುಂದಿನ ದಿನಗಳಲ್ಲಿ ಬರುವ ಕೆಂಪೇಗೌಡ ಜಯಂತಿ, ಕನಕದಾಸ ಜಯಂತಿ ಬಸವ ಜಯಂತಿ ಸೇರಿದಂತೆ ಸರ್ಕಾರದ ವತಿಯಿಂದ ಆಚರಿಸುವ ಎಲ್ಲಾ ಜಯಂತಿಗಳನ್ನು ಗ್ರಾಮದಲ್ಲಿ ಆಚರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೋಳೇನಹಳ್ಳಿ ಗ್ರಾಮದ ಮತ್ತೊರ್ವ ಸದಸ್ಯರಾದ ಮಂಜುಳಮ್ಮ ಹಾಗೂ ಗ್ರಾಮದ ಯುವಕರಾದ ಸುನೀಲ್, ಕೃಷ್ಣೇಗೌಡ, ಲೋಹಿತ್, ಮೋಹನ್, ಆನಂದ ಇತರರು ಹಾಜರಿದ್ದರು.
Tags
ಹಾಸನ