ರಾಮನಾಥಪುರ.;- ಪರಿಸರ, ಸ್ವಚ್ಚತೆ ಮತ್ತು ಉತ್ತಮ ಆರೋಗ್ಯದ ದೃಷ್ಠಿಯಿಂದ ಕಾವೇರಿ ನದಿ ಸ್ವಚ್ಚತಾ ಸಮಿತಿಯವರು ಸುಮಾರು ೧೦ ವರ್ಷಗಳಿಂದ ಸ್ವಚ್ಚತಾ ಕಾರ್ಯಮಾಡಿಕೊಂಡು ಬರುತ್ತಿದ್ದು, ಅದರೆ ಕಾವೇರಿ ನದಿಗೆ ದೇವರ ಪೂಜೆಗೆ ಬರುವವರು ಕಾವೇರಿ ನದಿ ಒಳಭಾಗದಲ್ಲಿ ಬಟ್ಟೆ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿರುವುದನ್ನು ಕಾವೇರಿ ನದಿ ಸ್ವಚ್ಚತಾ ಅಂದೋಲನಾ ಸಮಿತಿ ತಾಲ್ಲೂಕು ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದರಾಜು ಖಂಡಿಸಿದ್ದಾರೆ.
ರಾಮನಾಥಪುರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ಇಲ್ಲಿಯ ರಾಮೇಶ್ವರಸ್ವಾಮಿ ಹತ್ತಿರ ವಹ್ನಿಪುಕ್ಷರಣಿ, ಗೋಗರ್ಭ ಗಾಯತ್ರಿಶಿಲೆ, ಕುಮಾರಧಾರ ಮುಂತಾದ ಕಡೆಗಳಲ್ಲಿ ಗ್ರಾಮೀಣ ಪ್ರದೇಶದಿಂದ ಬರುವ ಭಕ್ತರು ದೇವರು ತಂದು ಇಲ್ಲಿ ಪೂಜೆಗೆ ತಂದAತಹ ಬಟ್ಟೆ, ಬಾಳೆಮರ, ಮಾವಿನಸೋಪ್ಪು ಅಲ್ಲದೇ ಮುಂತಾದ ತ್ಯಜ್ಯಾವನ್ನು ನದಿಯಲ್ಲಿ ಬಿಟ್ಟು ಭಕ್ತರು ಹೋಗುತ್ತಾರೆ. ಇನ್ನು ಮುಂದೆ ಈ ರೀತಿ ಮಾಡಹೋದರೆ ಅವರಿಗೆ ತಕ್ಕ ಶಾಸ್ರ ಮಾಡುತ್ತೆವೆ ಎಂದು ಗುಡಿಗಿದರು.
ಈವಾಗ ಕಾವೇರಿ ನದಿಯಲ್ಲಿ ನೀರು ಕಡಿಮೆಗಿದ್ದು, ಇಲ್ಲಿಯ ನೀರು ಎತ್ತುವ ಮೋಟರ್ ಹತ್ತಿರ ಗ್ರಾಮದ ಸಾರ್ವಜನಿಕರ ಕುಡಿಯುವ ನೀರಿನ ಪಂಪುಹೌಸ್ ಇದ್ದು ಇದರಿಂದ ನೀರು ಮಲಿನವಾಗುತ್ತಿದೆ. ಪರಿಸರ ಸ್ವಚ್ಚತೆ ಮತ್ತು ಉತ್ತಮ ಆರೋಗ್ಯದ ದೃಷ್ಠಿಯಿಂದ ಕಾವೇರಿ ನದಿ ದಂಡೆಯಲ್ಲಿ ಬಟ್ಟೆ ಮತ್ತು ಪರಿಕರಗಳನ್ನು ಹಾಕಬಾರದೆಂದು ಅನೇಕ ಸಾರಿ ಎಚ್ಚರಿಕೆ ನೀಡುತ್ತಿದ್ದರೂ ಸಹ ಕಾವೇರಿ ನದಿಯ ದಂಡೆಯಲ್ಲಿ ಪೋಟೋ, ಬಟ್ಟೆ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಕಾವೇರಿ ನದಿಯ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಮತ್ತು ಪೋಲೀಶ್ ಇಲಾಖೆಯವರಲ್ಲಿ ಕಾವೇರಿ ನದಿ ಸ್ವಚ್ಚತಾ ಅಂದೋಲನಾ ಸಮಿತಿ ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ. ಕಾರ್ಯದರ್ಶಿ ಕುಮಾರಸ್ವಾಮಿರಾವ್, ಖಜಾಂಚಿ ರಘು, ತಾಲ್ಲೂಕು ಕಾರ್ಯದರ್ಶಿ ಕಾಳಬೋಯಿ, ಖಜಾಂಚಿ ಕೇಶವ ಮುಂತಾದವರು ಒತ್ತಾಯಿಸಿದ್ದಾರೆ.