ಹಾಸನ: ೬ನೇ ವೇತನ ಜಾರಿಗೆ ಹಾಗೂ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಮೂರು ದಿವಸದಿಂದ ನಡೆಸುತ್ತಿರುವ ಮುಷ್ಕರದಲ್ಲಿ ನಾಲ್ಕನೆ ದಿವಸದಂದು ರಾಜ್ಯ ಸರಕಾರಿ ನೌಕರರ ಕೂಟದಿಂದ ಸಭೆ ಸೇರಿ ಚರ್ಚಿಸಿ ಕೊನೆಗೆ ಬೇಡಿಕೆ ಈಡೇರುವವರೆಗೂ ಮುಷ್ಕರ ಕೈಬಿಡದಿರಲು ನಿರ್ಧರಿಸಲಾಯಿತು.
ನಗರದ ಶ್ರೀಕೃಷ್ಣ ಹೋಟಲ್ ಪಕ್ಕದ ಖಾಲಿ ಜಾಗದಲ್ಲಿ ಶನಿವಾರದಂದು ಮದ್ಯಾಹ್ನ ಸಭೆ ಸೇರಿದ ನೌಕರರು ಬಸ್ ಮುಷ್ಕರದ ಬಗ್ಗೆ ಸುರ್ಧಿರ್ಘವಾಗಿ ಚರ್ಚೆ ಮಾಡಿದರು. ಈಗ ಸರಕಾರ ನೀಡುತ್ತಿರುವ ಸಂಬಳದಲ್ಲಿ ಕುಟುಂಬ ನಿರ್ವಹಣೆ ಮಾಡುವುದೆ ಕಷ್ಟಕರವಾಗಿದೆ. ಇನ್ನು ಬಹು ಮುಖ್ಯ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇವಲ ಭರವಸೆ ನೀಡುವ ಮೂಲಕ ದಿನಗಳನ್ನು ಮುಂದೂಡುವ ಮೂಲಕ ಸಮಸ್ಯೆಗಳನ್ನು ಆಗೆ ಉಳಿಸಿರುವುದಾಗಿ ಆಕ್ರೋಶವ್ಯಕ್ತವಾಯಿತು. ಕೆ.ಎಸ್.ಆರ್.ಟಿ.ಸಿ. ನೌಕರರ ಬೇಡಿಕೆ ಈಡೇರುವವರೆಗೂ ನಮ್ಮ ಮುಷ್ಕರವನ್ನು ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದರು. ಈ ವೇಳೆ ಒಕ್ಕೂಟದ ನಡುವೆ ಕೆಲ ಗೊಂದಲದ ಮಾತುಗಳು ಕೂಡ ಕೇಳಿ ಬಂದಿತು. ಒಕ್ಕೂಟದ ಜಿ.ಟಿ. ರಂಗೇಗೌಡ, ಶಿವನಂಜೇಗೌಡ, ಆರ್. ಆನಂದ್ ಇತರರು ಉಪಸ್ಥಿತರಿದ್ದರು.
