ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ನೂರಾರು ಮರಗಳನ್ನು ಧರೆಗುರುಳಿದ್ದು ಈ ಕೂಡಲೇ ಸೂಕ್ತ ತನಿಖೆ ನಡೆಸಿ ಅಧಿಕಾರಿಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾಲುಮರದ ತಿಮ್ಮಕ್ಕನವರ ದತ್ತುಪುತ್ರ ಬಳ್ಳೂರು ಉಮೇಶ್ ಆಗ್ರಹಿಸಿದ್ದಾರೆ
. ಈ ಬಗ್ಗೆ ಮಾತನಾಡಿದ ಅವರು ಬಿಕ್ಕೋಡು ಹೋಬಳಿ ವೆಂಕಟಪೇಟೆ ಗಡಿಯಿಂದ ಮಲ್ಲಾಪುರ ಹಿರಿರ‍್ಜೆ ಮರ‍್ಗವಾಗಿ ಅರೇಹಳ್ಳಿ ಗ್ರಾಮದ ವರೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ಕಾಮಗಾರಿ ನಡೆಯುತ್ತಿದೆ . ನೂರಾರು ರ‍್ಷಗಳಿಂದ ರಸ್ತೆ ಕಿರಿದಾಗಿದ್ದು ಈಗ ಅಗಲೀಕರಣವಾಗುತ್ತಿರುವ ವುದು ಸ್ವಾಗತರ‍್ಹ . ರಸ್ತೆ, ಕುಡಿಯುವ ನೀರಿನಂತಹ ಅವಶ್ಯಕ ಅಭಿವೃದ್ಧಿ ಕೆಲಸಗಳಿಗೆ ನಮ್ಮದು ಯಾವುದೇ ತಕರಾರು ಇಲ್ಲ ಮತ್ತು ಅಡ್ಡಿಪಡಿಸುವುದಿಲ್ಲ. ಆದರೆ ರಸ್ತೆ ಅಭಿವೃದ್ಧಿ ಸಂರ‍್ಭದಲ್ಲಿ ಅಕ್ಕಪಕ್ಕವಿದ್ದ ನೂರಾರು ಬೆಲೆಬಾಳುವ ಮರಗಳು ಧರೆಗುರುಳಿದ್ದು ಅರಣ್ಯ ಇಲಾಖೆಯವರು ಏನು ಮಾಡುತ್ತಿದ್ದರು ಎಂಬುದು ಯಕ್ಷ ಪ್ರಶ್ನೆಯಾಗಿದೆ . ಬಡಪಾಯಿ ರೈತ ೧ಮರ ಕಡಿದರೂ ಆತನ ಮೇಲೆ ಇಲ್ಲ ಸಲ್ಲದ ಮೊಕದ್ದಮೆ ದಾಖಲಿಸುವ ಇಲಾಖೆಯವರು ಇಲ್ಲಿ ರಾಜಾರೋಷವಾಗಿ ಮರಗಳ ಮಾರಣಹೋಮ ನಡೆದರೂ ಕಣ್ಮುಚ್ಚಿ ಕುಳಿತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದಿದ್ದಾರೆ . ದಟ್ಟ ಕಾಡಿನ ಮಧ್ಯೆ ಮರ ಕಡಿಯುತ್ತಿರುವುದನ್ನು ತಿಳಿದುಕೊಂಡು ದಾಳಿ ಮಾಡುವ ಅರಣ್ಯ ಇಲಾಖೆಯವರು ನಡು ರಸ್ತೆಯಲ್ಲಿ ಮರಗಳನ್ನು ಕಡಿದಿದ್ದು ಜಾಣ ಮೌನಕ್ಕೆ ಶರಣಾಗಿದೆ . ೭ ಕಿ.ಮಿ ರಸ್ತೆ ಕಾಮಗಾರಿ ಆರಂಭಕ್ಕೂ ಮುನ್ನ ಮರಗಳ ಎಣಿಕೆ ಆಗಬೇಕು ಟೆಂಡರ್ ಪ್ರಕ್ರಿಯೆ ನಡೆಯಬೇಕು ನಂತರ ಅನುಮತಿ ಪಡೆದುಕೊಳ್ಳಬೇಕು . ತದನಂತರ ಹರಾಜು ನಡೆಯಬೇಕು ಆದರೆ ಇಲ್ಲಿ ಯಾವುದೇ ಪ್ರಕ್ರಿಯೆ ನಡೆದಿದೆಯೇ ಎಂಬು ಪ್ರಶ್ನೆಗೆ ಅರಣ್ಯ ಇಲಾಖೆ ಸ್ಪಷ್ಟ ಉತ್ತರ ಕೊಡುತ್ತಿಲ್ಲ ಎಂದು ದೂರುತ್ತಾರೆ.
ಈ ಬಗ್ಗೆ ಉಪ ಅರಣ್ಯ ಅಧಿಕಾರಿ ಅವರನ್ನು ಕೇಳಿದರೆ ರೈತರೇ ಸ್ವಯಂ ಪ್ರೇರಿತರಾಗಿ ರಸ್ತೆ ಅಗಲೀಕರಣಕ್ಕೆ ಜಾಗ ಕೊಟ್ಟಿರುತ್ತಾರೆ ಮತ್ತು ಮರವನ್ನು ಕೂಡ ಅವರು ಕಡಿದಿದ್ದು ಮರದ ಬುಡ ಗಳು ಮಾತ್ರ ಇದ್ದು ದೂರು ದಾಖಲಿಸುವುದು ಕಷ್ಟ ಅಲ್ಲದೆ ಈ ಬಗ್ಗೆ ನಮಗೆ ಯಾವುದೇ ದೂರುಗಳು ಬಂದಿರುವುದಿಲ್ಲ ಎಂಬ ಉತ್ತರ ಕೊಡುತ್ತಾರೆ . ಹಾಗಾದರೆ ದೂರು ಬಂದರೆ ಮಾತ್ರ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಳ್ಳುತ್ತಾರಾ. ಈಗಾಗಲೇ ತಾಲ್ಲೂಕಿನಲ್ಲಿ ನಿರಂತರವಾಗಿ ಮರಗಳ ಮಾರಣಹೋಮ ನಡೆಯುತ್ತಿದ್ದು ಈಗಲಾದರೂ ತಾಲ್ಲೂಕು ಆಡಳಿತ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ .
Tags
ಬೇಲೂರು.
