ಹಾಸನ: ನಾನು ಬಿಜೆಪಿ ಪಕ್ಷದವನು ಎಂಬ ಕಾರಣಕ್ಕೆ ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣನವರು ವಿರೋಧ ಮಾಡುವ ಉದ್ದೇಶದಲ್ಲಿ ಇಲ್ಲಸಲ್ಲದ ಆರೋಪ ಮಾಡುತ್ತಿರುವುದಾಗಿ ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಮಾಯಣ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರದಂದು ಮಾತನಾಡಿ, ಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಹೋಬಳಿಯ ಕಲ್ಲೋಡೆಬೋರೆ ಕಾವಲು ಗ್ರಾಮದ ಸರ್ವೆ ನಂ.೧ ರಲ್ಲಿ ಒಂದು ಕ್ರಷರ್ ಇದ್ದು, ೩ ಎಕರೆ ೧೫ ಗುಂಟೆ ಭೂಮಿ ಇರುವಂತಹ ಎಲ್ಲಾ ದಾಖಲಾತಿಗಳನ್ನು ಸರಕಾರದಿಂದ ಪಡೆದು ನಿಯಮಾನುಸಾರ ೨೦೧೭ ರಿಂದ ಗಣಿಗಾರಿಕೆ ನಡೆಸುತ್ತಿದ್ದರೂ ಸಹ ಇಲ್ಲಿನ ಸ್ಥಳೀಯ ಶಾಸಕರಾದ ಹೆಚ್.ಡಿ. ರೇವಣ್ಣನವರು ಪದೆ ಪದೆ ತೇಜೂವಧೆ ಮಾಡುವುದು, ಈ ಬಗ್ಗೆ ವಿಧಾನಸೌದದಲ್ಲಿ ಹಲವಾರು ಬಾರಿ ಚರ್ಚೆ ಕೂಡ ಮಾಡಿದ್ದು, ಈ ಬಗ್ಗೆ ಎ.ಟಿ. ರಾಮಸ್ವಾಮಿರವರಿಂದ ಹೇಳಿಸಿದ್ದಾರೆ. ಇನನ್ನು ಇದಕ್ಕೆ ಸಂಬAಧವಿಲ್ಲದಿದ್ದರೂ ಬೇಲೂರು ಶಾಸಕ ಲಿಂಗೇಶ್ ರವರಿಂದಲೂ ಹೇಳಿಕೆ ಕೊಡಿಸಿದ್ದಾರೆ ಎಂದು ದೂರಿದರು. ಎಲ್ಲಾ ಕಾನೂನು ಬದ್ಧವಾಗಿ ಪರವಾನಿಗೆ ಇದ್ದರೂ ಇಲಿಗಲ್ ಆಗಿ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಜಿಲೆಟನ್ ಸ್ಪೋಟವಾಗಿದ್ದು, ಇದನ್ನು ನಡೆಸಲು ಪರವಾನಿಗೆ ಕೊಡಿಸಿರುವುದು ಇದೆ ರೇವಣ್ಣನವರು. ನಡೆಸುತ್ತಿರುವವರು ಕುಟುಂಬದವರೆಲ್ಲಾ ಜೆಡಿಎಸ್ ಪಕ್ಷದ ಕಾರ್ಯಕರ್ತರು. ಆದರೇ ಇವರಿಗೆ ಪರವಾನಿಗೆ ಕೊಟ್ಟಿರುವುದೆ ನನಗೆ ಗೊತ್ತಿಲ್ಲ. ನನಗೂ ಇದಕ್ಕೂ ಸಂಬAಧವಿಲ್ಲ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ರೇವಣ್ಣನವರ ಬಿಟ್ಟು ಹೊಳೆನರಸೀಪುರ ತಾಲೂಕಿನಲ್ಲಿ ಒಂದು ಹಕ್ಕಿಯೂ ಕೂಡ ಹಾರಾಡುವುದಕ್ಕೆ ಆಗುವುದಿಲ್ಲ ಎಂದು ಟಾಂಗ್ ನೀಡಿದರು.
ಹೊಳೆನರಸೀಪುರದಲ್ಲಿ ೫೩೫೦ ಮೀಟರ್ ಚೈನ ಗೋಡೆ ನಿರ್ಮಿಸಿದ್ದು, ಇದಕ್ಕೆ ಜೆಲ್ಲಿ ಮರಳು ಎಲ್ಲಿಂದ ಬಂದಿದೆ. ಮೊನ್ನೆ ಚಕ್ಕೇನಹಳ್ಳಿಕಟ್ಟೆಯಲ್ಲಿ ಬ್ಲಾಸ್ಟ್ ಆದರೇ ಕಲ್ಲೋಡೆಬೋರೆ ಕಾವಲು ಬಗ್ಗೆ ಮಾತನಾಡುತ್ತಾರೆ. ನಾವು ಈಗಲು ಸುಮ್ಮನೆ ಇದ್ದರೇ ಇಲಿಗಲ್ ಆಗಿ ನಡೆಸುತ್ತಿದ್ದಾರೆ ಅಂದುಕೊಳ್ಳುತ್ತಾರೆ ಅದಕ್ಕಾಗಿ ಜನರಿಗೆ ಸತ್ಯಾಂಶ ತಿಳಿಸಬೇಕಾಗಿದೆ. ರೇವಣ್ಣನವರ ಅಕ್ರಮ ಒಂದ ಎರಡಾ..ಅನೇಕ ಇದ್ದು, ಅಧಿಕಾರಿಗಳಿಂದ ತನಿಖೆ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಕೆಲ ಉದಾಹರಣೆ ನೀಡಿದರು. ರೇವಣ್ಣನವರ ರಾಜಕಾರಣ ಜನತೆ ಎಲ್ಲರಿಗೂ ಗೊತ್ತಿದೆ. ರೇವಣ್ಣನವರ ವಿರೋಧಿಗಳು ಯಾವ ವ್ಯವಹಾರವನ್ನು ಹೊಳೆನರಸೀಪುರ ತಾಲೂಕಿನಲ್ಲಿ ಮಾಡಬಾರದು. ಏಕೆಂದರೇ ಅವರು ನಮ್ಮಗಿಂತ ಬಲಿಷ್ಟವಾಗುತ್ತಾರೆ ಮತ್ತು ಬಿಜೆಪಿ ಪಕ್ಷದವರು ಎಂಬ ಒಂದೆ ಕಾರಣಕ್ಕೆ ನಮ್ಮ ಮೇಲೆ ವಿರೋಧಿಸುತ್ತಿರುವುದಾಗಿ ಗಂಭೀರವಾಗಿ ಆರೋಪಿಸಿದರು. ಹಿಂದೆ ವಕೀಲರಾದ ದೇವರಾಜೇಗೌಡರು ಜೆಡಿಎಸ್ ೨೫ ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎಂದಿದ್ದರು. ಆದರೇ ನಾನು ಹೇಳುತ್ತೇನೆ ಇವರು ೨೭ ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದರೆಂದು ಎಂದು ಕಿಡಿಕಾರಿದರು. ನನ್ನ ಮೇಲೆ ದೂರಿರುವ ವಿಚಾರವಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ ಅದಕ್ಕೆ ನಾನು ಸಿದ್ಧನಾಗಿದ್ದೇನೆ ಎಂದು ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಂ.ಎಲ್. ರಾಜು ಇತರರು ಉಪಸ್ಥಿತರಿದ್ದರು