ಹಾಸನ: ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕರಾದ ಬಿ. ಗುಣರಂಜನ್ ಶೆಟ್ಟಿಯವರ ಆದೇಶದಂತೆ ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಅಧ್ಯಕ್ಷರ ಘೋಷಣೆ ಮಾಡಿರುವುದಾಗಿ ವೇದಿಕೆ ರಾಜ್ಯಾಧ್ಯಕ್ಷ ಚಂದ್ರಪ್ಪ ತಿಳಿಸಿದರು
. ಪತ್ರಿಕಾಗೋಷ್ಠಿಯಲ್ಲಿ ಶನಿವಾರದಂದು ಮಾತನಾಡಿ, ಜಯಕರ್ನಾಟಕ ಜನಪರ ವೇದಿಕೆಯ ಅರಸೀಕೆರೆ ತಾಲೂಕಿನ ಅಧ್ಯಕ್ಷರಾಗಿ ಜಿ.ಜಿ. ದಯಾನಂದ್, ಅರಕಲಗೂಡು ತಾಲೂಕಿನ ಅಧ್ಯಕ್ಷರಾಗಿ ಕೆ.ಬಿ. ಮಂಜುನಾಥ್, ಆಲೂರು ತಾಲೂಕು ಅಧ್ಯಕ್ಷರಾಗಿ ಹನುಮಂತೇಗೌಡ, ಬೇಲುರು ತಾಲೂಕು ಅಧ್ಯಕ್ಷರಾಗಿ ಐ.ಎನ್. ಅರುಣ್ ಕುಮಾರ್, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷರಾಗಿ ಸಿ.ವಿ. ವಿಶ್ವಾಸ್, ಹೊಳೆನರಸೀಪುರ ತಾಲೂಕಿನ ಅಧ್ಯಕ್ಷರಾಗಿ ಪುನೀತ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾದ ಜಯಕರ್ನಾಟಕ ಜನಪರ ವೇದಿಕೆಯಿಂದ ರಾಜ್ಯದ ೧೫ ಜಿಲ್ಲೆಗಳಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ೫೦ ತಾಲೂಕು ಅಧ್ಯಕ್ಷರ ನೇಮಕ ಮಾಡಲಾಗಿದೆ ಎಂದರು. ನಮ್ಮ ವೇದಿಕೆಯು ತತ್ವ ಸಿದ್ಧಾಂತ ಎಂದರೇ ಯಾವ ಜಾತಿಗಾಗಲಿ, ಒಂದು ವರ್ಗಕ್ಕಾಗಲಿ ಸೀಮೀತವಾಗಿರುವುದಿಲ್ಲ. ಎಲ್ಲಾರು ಒಂದೆ ಕುಟುಂಬದAತೆ ಉತ್ತಮ ಸೇವೆ ಮಾಡುವ ನಿಟ್ಟಿನಲ್ಲಿ ಈ ವೇದಿಕೆ ಜನ್ಮ ತಾಳಿದ್ದು, ನಮ್ಮ ಒಳ್ಳೆ ಕೆಲಸಕ್ಕೆ ಎಲ್ಲಾರ ಸಹಕಾರ ಅವಶ್ಯಕವಾಗಿದೆ. ಕಳೆದ ಒಂದು ವರ್ಷದಿಂದ ಇಡೀ ದೇಶವೇ ಕೊರೋನಾ ಆವರಿಸಿ ತತ್ತರಿಸಿ ಹೋಗಿದೆ. ಕೊರೋನಾಕ್ಕೆ ಯಾರು ಹೆದರುವುದು ಬೇಡ, ನಿಯಮ ಪಾಲಿಸುವ ಮೂಲಕ ಈ ಸೋಂಕಿನಿAದ ದೂರ ಇರೋಣ ಎಂದು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಪಿ. ರವಿಕುಮಾರ್, ಎನ್.ಎಂ. ಯೋಗೇಶ್ ಬಾಬು, ಜಿಲ್ಲಾಧ್ಯಕ್ಷ ಮಣಿಕಂಠ, ಜಿಲ್ಲಾ ಕಾರ್ಯದರ್ಶಿ ಚೌಡಳ್ಳಿ ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಣ್ಣ ಇತರರು ಪಾಲ್ಗೊಂಡಿದ್ರು