ಹಾಸನ ಏ.೨೨ :-ಜಿಲ್ಲೆಯ ಕೊಂಡಜ್ಜಿ ದೇವಸ್ಥಾನ ಹಾಗೂ ದೊಡ್ಡಗದ್ದವಳ್ಳಿ ದೇವಸ್ಥಾನಗಳು ದುಸ್ಥತಿಯಲ್ಲಿದ್ದು ಜೀರ್ಣೋದ್ಧಾರಕ್ಕೆ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿAದು ರಾಜ್ಯ ಧಾರ್ಮಿಕ ದತ್ತಿ ಧರ್ಮೋತ್ಥಾನ ಪ್ರಶಸ್ತಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಧಾರ್ಮಿಕ ಕ್ಷೇತ್ರದಲ್ಲಿ ಪಾಂಡಿತ್ಯ ಪಡೆದಿರುವ ಹಾಗೂ ಉತ್ತಮ ಸೇವೆ ಸಲ್ಲಿಸಿರುವ ವಿವರವನ್ನು ಪಡೆದು ಪರೀಶಿಲಿಸಿ ಅವರ ಸೇವೆಯನ್ನು ಆಧಾರಿಸಿ ಜಿಲ್ಲಾ ಧಾರ್ಮಿಕ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಬಹುದಾಗಿದೆ ಎಂದರು.
ದೊಡ್ಡಗದ್ದವಳ್ಳಿ ಲಕ್ಷಿ÷್ಮ ದೇವಸ್ಥಾನದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಿ ಮತ್ತು ಕಾವಲುಗಾರರನ್ನು ನೇಮಕ ಮಾಡುವಂತೆ ಪುರಾತತ್ವ ಇಲಾಖೆಗೆ ಪತ್ರ ಬರೆಯಿರಿ ಎಂದರಲ್ಲದೆ ಜೊತೆಗೆ ರಾತ್ರಿ ವೇಳೆ ಗರ್ಭಗುಡಿಗೆ ಬೀಗ ಹಾಕಿ ದೇವಾಸ್ಥಾನಕ್ಕೆ ರಕ್ಷಣೆ ಒದಗಿಸಿ ಎಂದರು.
ಚನ್ನರಾಯಪಟ್ಟಣದ ಪಿರಂಗಿ ಮಠ ಸರ್ವೆ ಮಾಡಿ ಅದರ ವಿವರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಮುಜರಾಯಿ ಇಲಾಖೆ ತಹಸೀಲ್ದಾರ್ ಮೋಹನ್ ಕುಮಾರ್, ಜಾನಪದ ತಜ್ಞರಾದ ಹಂಪನಹಳ್ಳಿ ತಿಮ್ಮೇಗೌಡ, ಸಮಾಜ ಸೇವಕರಾದ ಕೆ.ಟಿ ಜಯಶ್ರೀ, ದಾರ್ಮಿಕ ದತ್ತಿ ಸಮಿತಿ ಆಗಮ ಸದಸ್ಯರಾದ ರಕ್ಷಿತ್ ಭಾರದ್ವಾಜ್, ಜಿಲ್ಲಾ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ನವೀನ್ ಕುಮಾರ್, ದಾರ್ಮಿಕ ದತ್ತಿ ಸಮಿತಿ ಸದಸ್ಯರಾದ ಅನಂತ ನಾರಾಯಣ ಮತ್ತಿತರರು ಹಾಜರಿದ್ದರು.