ತೆಂಗಿನ ನಾರಿನ ಉತ್ಪನ್ನಗಳ ತಯಾರಿ

ಹಾಸನ ಏ. ೨೨  :- ತೆಂಗಿನ ನಾರಿನ ಉತ್ಪನ್ನಗಳನ್ನು ತಯಾರಿಸುವ ಹೊಸ ಅಥವಾ ವಿಸ್ತರಣೆ ಘಟಕಗಳಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಕಲ್ಪವೃಕ್ಷ ಕಾಯಕ ಯೋಜನೆ ಅಡಿ ಸ್ವಸಹಾಯ ಸಂಘಗಳು, ಸಹಕಾರ ಸಂಘಗಳು, ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ (ಶೇ.೩೦ ರಿಂದ ಶೇ. ೬೦ ರವರೆಗೆ)  ಸಹಾಯಧನವನ್ನು ಒದಗಿಸಲಾಗುವುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ, ಜಂಟಿ ನಿರ್ದೇಶಕರು ತಿಳಿಸಿದ್ದಾರೆ


ಸದರಿ ಸೌಲಭ್ಯ ಪಡೆಯಲು ಆಸಕ್ತರಿರುವ ಉದ್ದಿಮೆದಾರರು ಜಿಲ್ಲಾ ಕೈಗಾರಿಕಾ ಕೇಂದ್ರ, ಡೈರಿ ಸರ್ಕಲ್ ಹಾಸನ ಕಚೇರಿಯ ದೂ. ಸಂಖ್ಯೆ ೦೮೧೭೨-೨೯೬೨೧೭ ಗೆ ಸಂಪರ್ಕಿಸಬಹುದಾಗಿದೆ.


Post a Comment

Previous Post Next Post