ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಅಸ್ಪೃಶ್ಯತೆ ನಿರ್ಮೂಲನೆ ಸಾಧ್ಯ


ಹಾಸನ:-ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಅಸ್ಪöÈಶ್ಯತೆ ನಿರ್ಮೂಲನೆ ಮಾಡಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್ ಅವರು ತಿಳಿಸಿದ್ದಾರೆ.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರ ಸಭೆ ಹಾಸನ ಇವರುಗಳ  ಸಂಯುಕ್ತಾಶ್ರಯದಲ್ಲಿ ಏರ್ಡಿಸಿದ್ದ ಡಾ. ಬಾಬು ಜಗಜೀವನ್ ರಾಂ ರವರ ೧೧೪ ನೇ ವರ್ಷದ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಹಾನ್ ನಾಯಕರ ಜಯಂತಿಗಳು ಆಚರಣೆಗೆ ಮಾತ್ರ ಸೀಮಿತವಾಗಿರದೆ ಅಂತಹವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದರು. 

  ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ವಿದ್ಯಾವಂತರಾಗುವ ಜೊತೆಗೆ ಜ್ಞಾನವನ್ನು ವೃದ್ದಿಸಿಕೊಂಡು ಸಮಾಜದ ಅಂಕು-ಡೊAಕುಗಳನ್ನು ತಿದ್ದಲು ಶಿಕ್ಷಣವನ್ನು ಅಸ್ತçವಾಗಿ ಬಳಸಿಕೊಳ್ಳಿ ಎಂದು ಹೇಳಿದರು.

       ಬಾಬು ಜಗಜೀವನ್ ರಾಂ ಅವರು ದೇಶದ ಮಹಾನ್ ನಾಯಕರು ಅವರ ವಿಚಾರ, ಚಿಂತನೆ ಹಾಗೂ ಆದರ್ಶಗಳು ಇಂದಿಗೂ ಸಮಾಜದಲ್ಲಿ ಪ್ರಸ್ತುತವಾಗಿವೆ  ಎಂದು ತಿಳಿಸಿದರು.

  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್ ಅವರು ಮಾತನಾಡಿ  ಸರ್ಕಾರದಿಂದ ಸಿಗುವ  ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು  ಸಮಾಜದಲ್ಲಿ  ಉನ್ನತ ಮಟ್ಟಕ್ಕೆ ತಲುಪಬಹುದು ಎಂದು ತಿಳಿಸಿದರು 

       ಡಾ.ಬಾಬು ಜಗಜೀವನ್ ರಾಂ ರವರು ರಾಜಕೀಯ ಕ್ಷೇತ್ರಕ್ಕಿಂತ  ಹೆಚ್ಚಿನದಾಗಿ  ಸಾಮಾಜಿಕ ಕ್ಷೇತ್ರದಲ್ಲಿ  ತೊಡಗಿಸಿಕೊಂಡು ದಲಿತ ಹಾಗೂ ಹಿಂದುಳಿದವರ  ಧ್ವನಿಯಾಗಿದ್ದರು.

   ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯಗಳ ಸದುಪಯೋಗಪಡಿಸಿಕೊಂಡು   ಸಾಮಾನ್ಯ  ವರ್ಗದಲ್ಲಿ  ಸ್ಪರ್ಧಿಸಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿ ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ  ಕೊಟ್ಟ ಶಂಕರ್ ವಿಶೇಷ ಉಪನ್ಯಾಸ ನೀಡಿ  ಡಾ. ಬಾಬು ಜಗಜೀನರಾಂ ಹಾಗೂ ಡಾ.ಬಿ.ಆರ್  ಅಂಬೇಡ್ಕರ್  ಇವರಿಬ್ಬರು ಈ ದೇಶದ ಶೋಷಿತ ಜನರಿಗಾಗಿ  ಸಾಕಷ್ಟು ಶ್ರಮವಹಿಸಿದ ಮಹಾನ್ ನಾಯಕರುಗಳು ಎಂದರು.   

     ಡಾ. ಬಾಬು ಜಗಜೀವನ್ ರಾಮ್ ರವರು ದೇಶದ ದಲಿತರ ದ್ವನಿಯಾಗಿ ಅಸ್ಪöÈಶ್ಯತೆ  ವಿರುದ್ಧ ಹೋರಾಟ ನಡೆಸುತ್ತಾರೆ  ಉಳುವವನೇ ಭೂಮಿಯನ್ನು  ಒಡೆಯ ಕಾಯ್ದೆಯನ್ನು ಜಾರಿಗೊಳಿಸಲು ಬಹಳ ಹೋರಾಟವನ್ನು ಮಾಡಿದ್ದಾರೆ ಎಂದರು.

        ಬಾಬು  ಜಗಜೀವನ್ ರಾಂ ರವರು ಕಾರ್ಮಿಕ ಇಲಾಖೆ ಸಚಿವರಾಗಿದ್ದಾಗ ಕಾರ್ಮಿಕರಿಗೆ  ಅನುಕೂಲವಾಗುವಂತೆ   ಪಿ,ಎಫ್, ಇ ಎಸ್.ಐ ಸೇರಿದಂತೆ ೧೦ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದ್ದಾರೆ. ಹಾಗೂ ಕೃಷಿ ಸಚಿವರಾಗಿದ್ದ  ವೇಳೆಯಲ್ಲಿ ದೇಶದಲ್ಲಿ ಹಸಿವು  ಮುಕ್ತ ಭಾರತವನ್ನು ಮಾಡಲು ಶ್ರಮಿಸುತ್ತಾರೆ.ದೇಶದಲ್ಲಿ ಸಾಮಾಜಿಕ ಗೌರವ ಸಿಗುವುದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅವರು ತಿಳಿಸಿದರು. 

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ,ಹಾಸನ ತಹಸೀಲ್ದಾರ್ ಶಿವಶಂಕರಪ್ಪ ದಲಿತ ಮುಖಂಡರಾದ ಸಂದೇಶ್ ,ಮಲ್ಲೇಶ್ ಅಂಬುಗ ,ಕೃಷ್ಣದಾಸ್ , ಮಹಾಂತಪ್ಪ, ಶಂಕರ್ ರಾಜ್ , ವಿಜಿ  ಕುಮಾರ್ ಹಾಗೂ ಮತ್ತಿತರರು ಹಾಜರಿದ್ದರು. 


Post a Comment

Previous Post Next Post