ಹಾಸನ.೦೫ :-ಜಿಲೆಟಿನ್ ಸ್ಪೋಟದಲ್ಲಿ ಮೃತ ಪಟ್ಟ ಕಾರ್ಮಿಕನ ಕುಟುಂಬಕ್ಕೆ ಸರ್ಕಾರದಿಂದ ದೊರೆಯಬಹುದಾದ ಎಲ್ಲಾ ನರೆವನ್ನು ಒದಗಿಸಲಾಗುವುದು ಎಂದು ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ತಿಳಿಸಿದ್ದಾರೆ.
ಅವರಿಂದು ಹೊಳೆನರಸೀಪುರ ತಾಲ್ಲೂಕಿನಚಾಕೇನಹಳ್ಳಿಯಲ್ಲಿ ಘಟನೆ ನಡೆದ ಸ್ಥಳ ಪರೀಶೀಲಿಸಿ, ಜಿಲ್ಲಾ ಆಸ್ಪತ್ರೆಗೆ ಆಗಮಿಸಿ ಶವಗಾರಕ್ಕೆ ಭೇಟಿ ನೀಡಿ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಮೃತ ಕಾರ್ಮಿಕ ಚನ್ನರಾಯಪಟ್ಟಣ ತಾಲ್ಲೂಕಿನ ಬೆಟ್ಟದಹಳ್ಳಿ ಗ್ರಾಮದ ಸಂಪತ್ (೨೭) ಎಂಬುವವರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.
ಇದೇ ವೇಳೆ ತಮ್ಮ ವೈಯಕ್ತಿಕ ಧನಸಹಾಯವನ್ನು ನೀಡಿದ ಸಚಿವರು ತಾವು ಈಗಾಗಲೇ ಮುಖ್ಯ ಮಂತ್ರಿಗಳೊAದಿಗೆ ಮಾತನಾಡಿದ್ದು ಸರ್ಕಾರದಿಂದ ಕಲ್ಪಿಸಬಹುದಾದ ಎಲ್ಲಾ ನೆರವನ್ನು ಒದಗಿಸಲಾಗುವುದು ತಾವೇ ಮನೆಗೆ ಬಂದು ಸೌಲಭ್ಯಗಳನ್ನು ಒದಗಿಸುವುದಾಗಿ ಹೇಳಿದರು.
ಈಗಾಗಲೇ ತನಿಖೆ ನಡೆಯುತ್ತಿದ್ದು ವರದಿ ಬಂದ ನಂತರ ತಪ್ಪಿಸ್ಥರ ವಿರುದ್ದ ಕ್ರಮವಹಿಸಲಾಗುವುದ ಕುಟುಂಬ ವರ್ಗದವರು ತುಂಬಾ ಬಡತನದಲ್ಲಿರುವುದು ತಮ್ಮ ಅರಿವಿಗೆ ಬಂದಿದೆ ಅಧಿಕಾರಿಗಳ ಸಹಾಯದಿಂದ ಪಾಲಕರಿಗೆ ಅನಕೂಲ ಕಲ್ಪಿಸಲಾಗುವುದು ಎಂದರು.
ಇದೇ ಘಟನೆಯಲ್ಲಿ ಕಾರ್ಮಿಕರಾದ ರವಿಕುಮಾರ್ ಹಾಗೂ ನಟರಾಜ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದ್ದು ಅವರ ಆಸ್ಪತ್ರೆ ಹಾಗೂ ಔಷಧಿಯ ಖರ್ಚನ್ನು ಸರ್ಕಾರವೇ ಪೂರೈಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಕಾರ್ಯದರ್ಶಿಯಾದ ಕಾಂತರಾಜ್, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಹಿಮ್ಸ್ ನಿರ್ದೇಶಕರಾದ ಡಾ|| ರವಿಕುಮಾರ್, ಜಿಲ್ಲಾ ಶಸ್ತç ಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಮತ್ತಿತರರು ಹಾಜರಿದ್ದರು.
