‘ಕಿರಿಕ್ ಪಾರ್ಟಿ’ ಚಿತ್ರತಂಡಕ್ಕೆ ಸಂಕಷ್ಟ- ಬಂಧಿಸಿ ಕರೆ ತರುವಂತೆ ಕೋರ್ಟ್ ಆದೇಶ

ಬೆಂಗಳೂರು: ಕನ್ನಡದ ಹಿಟ್ ಸಿನಿಮಾ ‘ಕಿರಿಕ್ ಪಾರ್ಟಿ’ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದ್ದು, ಸಂಪೂರ್ಣ ಚಿತ್ರ ತಂಡದ ವಿರುದ್ಧ ಕೋರ್ಟ್​ ಜಾಮೀನು ರಹಿತ ವಾರೆಂಟ್​ ಜಾರಿ ಮಾಡಿದೆ.

ನಗರದ 9ನೇ ಎಸಿಎಂಎಂ ಕೋರ್ಟಿ ಜಾಮೀನು ರಹಿತ ವಾರೆಂಟ್ ನೀಡಿದ್ದು, ಪ್ರತಿವಾದಿಗಳ ಬಂಧಿಸಿ ಕರೆ ತರಲು ಕೋರ್ಟ್​ ಸೂಚನೆ ನೀಡಿದೆ.


ನಿರ್ದೇಶಕ ರಿಷಬ್ ಶೆಟ್ಟಿ, ಚಿತ್ರ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಾ ಸ್ಟುಡೀಯೋಸ್ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಇವರ ವಿರುದ್ಧ ಕಿರಿಕ್ ಪಾರ್ಟಿಯಲ್ಲಿ ಲಹರಿ ಹಾಡುಗಳ ಅಕ್ರಮ ಬಳಕೆ ಆರೋಪವಿದ್ದು, ಅನುಮತಿ ಇಲ್ಲದೇ ಹಾಡುಗಳನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ಲಹರಿ ಸಂಸ್ಥೆ ಕೋರ್ಟಿನಲ್ಲಿ ಅರ್ಜಿ ಸಲ್ಲಿಕೆ ಮಾಡಿ ಕ್ರಿಮಿನಲ್ ಮತ್ತು ಸಿವಿಲ್ ಕೇಸ್ ಹಾಕಿತ್ತು.

2019ರ ಸೆಪ್ಟೆಂಬರ್ 28 ರಂದು ಲಹರಿ ರೆಕಾರ್ಡಿಂಗ್ಸ್ ಸಂಸ್ಥೆ ಕಾಪಿ ರೈಟ್ಸ್ ಆಕ್ಟ್ 63ಎ & 63 ಬಿ ಅಡಿಯಲ್ಲಿ ಕೇಸ್ ಹಾಕಿತ್ತು. ಅರ್ಜಿಯಲ್ಲಿ ಸಿನಿಮಾ ರಿಲೀಸ್ ಮಾಡದಂತೆ ಕೋರಿಕೆ ಮಾಡಲಾಗಿತ್ತು. ಆದರೆ ಕೊನೆಗೆ ಅಂಡರ್ ಟೇಕಿಂಗ್ ಪಡೆದುಕೊಂಡು ಚಿತ್ರತಂಡ ಸಿನಿಮಾ ಬಿಡುಗಡೆ ಮಾಡಿತ್ತು. ಆದರೆ ಇತ್ತ ಕ್ರಿಮಿನಲ್ ಕೇಸ್ ವಿಚಾರಣೆ ಎಸಿಎಂಎಂ ಕೋರ್ಟ್​​ನಲ್ಲಿ ಮುಂದುವರೆದಿತ್ತು.

ಇಲ್ಲಿವರೆಗೂ ಕಿರಿಕ್ ಪಾರ್ಟಿ ಟೀಂ ವಿರುದ್ಧ 8 ಬಾರಿ ಜಾಮೀನು ವಾರಂಟ್​ ಜಾರಿ ಮಾಡಲಾಗಿದೆ. ಆದರೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವವರು ಒಮ್ಮೆಯೂ ಕೋರ್ಟ್​​ಗೆ ಹಾಜರಾಗಿರಲಿಲ್ಲ. ಆದ್ದರಿಂದ ಈ ಬಾರಿ ಬಂಧಿಸಿ ಕರೆತರಲು ಎಸಿಎಂಎಂ ಕೋರ್ಟ್ ಅದೇಶ ನೀಡಿದ್ದು, ಮೇ 27ಕ್ಕೆ ಕೋರ್ಟ್ ಮುಂದೆ ಹಾಜರು ಪಡಿಸಲು ಪೊಲೀಸರಿಗೆ ಸೂಚನೆ ನೀಡಿದೆ.

Post a Comment

Previous Post Next Post