ಹಾಸನ ಸ್ಥಬ್ಧ, ಸುಮ್ಮನೆ ಓಡಾಡುವವರಿಗೆ ಪೊಲೀಸರಿಂದ ದಂಢದ ಬಿಸಿ.

ಹಾಸನ: ಕೊರೋನಾ ಎರಡನೇ ಅಲೆ ಹರಡಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕ ಕ್ರಮವಾಗಿ ವಾರದ ಕೊನೆಯ ಎರಡು ದಿನಗಳ ಕಾಲ ಸಂಪೂರ್ಣ ಕರ್ಫ್ಯೂ ವಿಧಿಸಿರುವುದರಿಂದ ಹಾಸನ ಸಂಪೂರ್ಣ ಸ್ಥಬ್ಧವಾಗಿದ್ದು, ಜನಜಂಗಿಲಿ ರಸ್ತೆಗಳೆಲ್ಲಾ ಖಾಲಿ ಖಾಲಿ ಇರುವುದು ಕಂಡು ಬಂದಿತು.


       ಶನಿವಾರದಂದು ಬೆಳಿಗ್ಗೆ ೧೦ ಗಂಟೆಯವರೆಗೂ ಅಗತ್ಯ ವಸ್ತುಗಳ ಮಾರಾಟ ಮಾಡಿದರು. ನಂತರದಲ್ಲಿ ಸಂಪೂರ್ಣ ಸ್ಥಗಿತವಾಯಿತು. ಅನಗತ್ಯವಾಗಿ ಎಲ್ಲೆಂದರಲ್ಲಿ ಸಂಚಾರ ಮಾಡುತ್ತಿದ್ದ ಬೈಕ್ ಹಾಗೂ ಖಾಸಗಿ ವಾಹನಗಳನ್ನು ಪೊಲೀಸರು ಅಲ್ಲಲ್ಲಿ ತಡೆದು ತಪಾಸಣೆ ಮಾಡಿ ದಂಡ ವಿಧಿಸುತಿದ್ದುದು ಸಾಮಾನ್ಯವಾಗಿತ್ತು. ಈ ವೇಳೆ ವಾಹನ ಚಾಲಕರು ಅನೇಕ ಕಾರಣ ಮತ್ತು ದಾಖಲೆ ನೀಡಿ ಸಂಚಾರ ಮಾಡುತ್ತಿದ್ದರು. ಇನ್ನು ಕೆಲವರು ಪೊಲೀಸರ ಜೊತೆ ವಾಗ್ವಾದಕ್ಕೆ ಮುಂದಾಗುತ್ತಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಂದಿನಿ ರವರು ನಗರದ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿ ಅನಗತ್ಯ ವಾಹನ ಚಾಲಕರಿಗೆ ಎಚ್ಚರಿಕೆ ನೀಡುತ್ತಿದ್ದರು. ಬಹುತೇಕ ಜನ ಸಾಮಾನ್ಯರು ರಸ್ತೆಗಿಳಿಯದೆ ಇದದ್ದು ಗಮನಾರ್ಹವಾಗಿತ್ತು. 

      ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ ೧೦ ಗಂಟೆಯವರೆಗೆ ಸಮಯ ನಿಗಧಿಯಾಗಿತ್ತು. ಬಳಿಕ ಮೆಡಿಕಲ್ ಶಾಫ್‌ಗಳು, ಪೆಟ್ರೋಲ್ ಬಂಕ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದದ್ದು ಕಂಡು ಬಂದಿತು. ಉಳಿದಂತೆ ದಿನಸಿ ಅಂಗಡಿ, ಬೇಕರಿಗಳು, ಹಣ್ಣು, ತರಕಾರಿ ಸೇರಿಂದತೆ ವಿವಿಧ ವ್ಯಾಪಾರ ವಹಿವಾಟು ಅಂಗಡಿಗಳು, ಚಲನ ಚಿತ್ರ ಮಂದಿರಗಳು, ಸ್ವಿಮ್ಮಿಂಗ್ ಫೂಲ್‌ಗಳು, ಜಿಮ್‌ಗಳು ಬಂದ್ ಆಗಿರುವುದು ಕಂಡು ಬಂದಿತು. ಇನ್ನು ಮಹಾರಾಜ ಪಾರ್ಕ್ ಸೇರಿದಂತೆ ಇತರೆ ಉದ್ಯಾನವನದಲ್ಲಿ ಜನರು ಕಾಣಲಿಲ್ಲ. ಅಲ್ಲಲ್ಲಿ ಒಂದೆರಡು ಆಟೋಗಳ ಸಂಚಾರ ಕಂಡು ಬಂದಿತು. ಮದುವೆ ಮನೆಗಳು, ಛತ್ರಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಕೆಲವೆಡೆ ಸಾರ್ವಜನಿಕರು ಕೆಲಸವಿಲ್ಲದೆ ರಸ್ತೆಗಿಳಿದ್ದಿದ್ದರು. ಮತ್ತಲವೆಡೆ ಪೊಲೀಸರು ಅಲ್ಲಲ್ಲಿ ತಪಾಸಣೆ ನಡೆಸುತ್ತಿದ್ದದ್ದು ಕಂಡು ಬಂದಿತು. ರಸ್ತೆಗಳು ಸಂಪೂರ್ಣ ಖಾಲಿ ಖಾಲಿಯಾಗಿದ್ದವು,. ಕೊರೊನಾ ಆತಂಕದಿAದ ಜನರು ಸಹ ಮನೆಯಿಂದ ಹೊರ ಬಾರದೆ ಸಹಕರಿಸಿದರು. ಬೆರಳೇಣಿಕೆಯಷ್ಟು ಮಂದಿ ಮಾತ್ರ ಕೋಳಿ, ಮಾಂಸ, ಮೀನು ಖರೀದಿ ಮಾಡುವುದರಲ್ಲಿ ಮುಂದಾಗಿದ್ದರು. ಪೊಲೀಸರ ಕಣ್ತಪ್ಪಿಸಿ ಅಂಗಡಿ, ಟೀ ಕ್ಯಾಂಟಿನ್‌ಗಳನ್ನು ತೆರೆದದ್ದು ಕಂಡ ಪೊಲೀಸರು ಅಂತಹವರನ್ನು ತರಾಟೆಗೆ ತೆಗೆದುಕೊಂಡಿದ್ದು. ಬಾಗಿಲು ಹಾಕಿಸುತ್ತಿದ್ದದ್ದು ಸಹ ಕಂಡು ಬಂದಿತು. ಪೊಲೀಸರೊಂದಿಗೆ ನಗರಸಭೆ ಸಿಬ್ಬಂದಿಗಳು, ಸಹ ಸಾಥ್ ನೀಡಿದರು. ಬಹುತೇಕ ಜನರು ಲಾಕ್ ಡೌನ್ ಗೆ ಸಹಕರಿಸಿದ್ದಾರೆ.

       ಕಳೆದ ವರ್ಷ ಪ್ರಾರಂಭವಾದ ಕೊರೋನಾ ಸೋಂಕು ಹರಡಿದ ಹಿನ್ನಲೆಯಲ್ಲಿ ನಿಯಂತ್ರಣಕ್ಕಾಗಿ ನಿರಂತರ ಲಾಕ್ ಡೌನ್ ಗೊಂಡು ಜನರು ನಾನಾ ಸಮಸ್ಯೆಗಳನ್ನು ಎದರಿಸದ ಕಹಿ ನೆನಪು ಬೆನ್ನಲ್ಲೆ ಮತ್ತೆ ೨೦೨೧ ರಲ್ಲಿ ಮರುಕಳಿಸಿದೆ.


Post a Comment

Previous Post Next Post