ವಾಹನಗಳ ಸುಗಮ ಸಂಚಾರಕ್ಕೆ ರಸ್ತೆ ಬದಿ ಅಂಗಡಿಗಳ ತೆರವು.


ಹಾಸನ:- ಇಂದು ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗಿಳಿದ  ಹಾಸನ ನಗರಸಭೆ ಅಧಿಕಾರಿಗಳು.ನಗರದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನಗರದ ಸಾಲಗಾಮೆ ರಸ್ತೆ ಬದಿಯಲಿದ್ದ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.
ಈ ಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದ  ಸೈಕಲ್ ಶಾಪ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ವಿಕಲಚೇತನ ಮುಷ್ಠಾಕ್ ಅಹಮದ್ ಅವರ M.M.ಸೈಕಲ್ ಶಾಪ್ ಅನ್ನು ಸಹ ನಗರಸಭೆ ಅಧಿಕಾರಿಗಳು ತೆರವುಗೊಳಿಸಿರುವುದರಿಂದ  ಸ್ಥಳೀಯರಲ್ಲಿ ಬೇಸರ ಮೂಡಿದ್ದು,  ಅಂಗಡಿಯಲ್ಲಿದ್ದ ಸೈಕಲ್ ಗಳು ರಸ್ತೆಗೆಬಿದ್ದಿವೆ.ಮುಷ್ಠಾಕ್ ವಿಕಲ  ಚೇತನರಾಗಿರುವುದರಿಂದ ಇವರ ಜೀವನೋಪಾಯಕ್ಕೆ  ನಗರಸಭಾ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಸ್ಥಳೀಯರ ಆಗ್ರಹವಾಗಿದೆ

Post a Comment

Previous Post Next Post