ಸರಕಾರದ ಮಾರ್ಗಸೂಚಿಯನ್ನು ಪಾಲಿಸಿ ಕೊರೊನಾ ಕಡಿವಾಣ ಹಾಕಬೇಕು : ಶಾಸಕ ಎ.ಟಿ.ರಾಮಸ್ವಾಮಿ

 ರಾಮನಾಥಪುರ: ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಸರಕಾರದ ಮಾರ್ಗಸೂಚಿಯನ್ನು ಪಾಲಿಸಬೇಕಿದೆ. ಇದರ ತಡೆಗೆ ನಾವೇಲ್ಲರೂ ಕಡ್ಡಯವಾಗಿ ಸಾಮಜಿಕ ಅಂತರ, ಮಾಸ್ಕ್ ಧರಿಸುವುದು ಹಾಗೂ ಸಭೆ ಸಮಾರಂಭಗಳನ್ನು ನಿಯಮಾನುಸಾರ ಭಾಗವಹಿಸುವ ಮೂಲಕ ಕಡಿವಾಣ ಹಾಕಬೇಕು ಎಂದು ಶಾಸಕ ಡಾ. .ಟಿ. ರಾಮಸ್ವಾಮಿ ತಿಳಿಸಿದರು.



ರಾಮನಾಥಪುರ ನದಿ ದಂಡೆಯಲ್ಲಿರುವ .ಬಿ.ಯಲ್ಲಿ ಕಾರ್ಯಕರ್ತರ ಜೊತೆ ಕೊರೊನಾ ಪ್ರಕರಣದ ಬಗ್ಗೆ ಎಚ್ಚರ ಹಾಗು ಇತ್ತೀಚಗೆ ನಡೆದ ಪಟ್ಟಣಕ್ಕೆ ಅಗುತ್ತಿರುವ ಅಭಿವೃದ್ದಿ ಬಗ್ಗೆ ಮಾಹಿತಿ ನೀಡಿದ ಅವರು ಇಲ್ಲಿಯ ಪಟ್ಟಣದಲ್ಲಿ ಹಲವಾರು ಕಾಮಗಾರಿಗಳನ್ನು ಎರಡೂವರೆ ವರ್ಷಗಳಲ್ಲಿ ಮಾಡಲಾಗಿದ್ದು, ಇನ್ನು ಹಲವಾರು ಕಾಮಗಾರಿಗಳು ಬಾಕಿ ಇದ್ದು, ಅವುಗಳನ್ನು ತ್ವರೀತವಾಗಿ ಮಾಡಿಸುವ ಮೂಲಕ ರಾಮನಾಥಪುರ ಪಟ್ಟಣದ ಸರ್ವತೋಮುಖ ಶ್ರೂಯೋಭಿವೃದ್ದಿಗೆ ಶ್ರಮಿಸುತ್ತೇನೆ. ಪಟ್ಟಣದ ಕಾವೇರಿ ನದಿ ತಟದಲ್ಲಿ ೯೫ ಲಕ್ಷ ರೂ ವೆಚ್ಚದ ಫಿಲ್ಟರ್ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಅನೇಕ ವರ್ಷಗಳ ಬಹು ನಿರೀಕ್ಷೆಯಲ್ಲಿದ್ದ ಇಲ್ಲಿಯ ಪಟ್ಟಣಕ್ಕೆ ಕುಡಿಯುವ ನೀರನ್ನು ಶುದ್ಧೀಕರಿಸಲು ಫಿಲ್ಟರ್ ಯಂತ್ರಗಾರದ ಕಾಮಗಾರಿ ಕೆಲಸ ನಡೆಯುತ್ತಿದೆ. ಪಟ್ಟಣದ ವ್ಯಾಪ್ತಿಯ ಕೋಟವಾಳು ಗ್ರಾಮದ .ನಂ ೧೨ ರಲ್ಲಿ   ಎಕ್ಕರೆ ನೀವೇಶನ ನೀವೇಶನರಹಿರಿಗೆ ಮಂಜೂರು ಮಾಡಿಸಿ ಕೆಲವರಿಗೆ ಈಗಾಗಲೇ ನಿವೇಶನ ನೀಡಲಾಗಿದೆ.

ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಮಂಜೂರು ಮಾಡಿಸಿ ಗ್ರಾಮೀಣ ಭಾಗದ ಹತ್ತಾರು ಸಾವಿರ ಹೆಣ್ಣು ಮಕ್ಕಳಿಗೆ ಅಶ್ರಯವಾಗಿದೆ. ಅವರಣದಲ್ಲಿ ವಿವಿಧ ಯೋಜನೆಯಡಿ ಹಾಗೂ ಅರ್..ಡಿ.ಪಿ. ೨೨ರ ಯೋಜನೆಯಡಿ  ಕೋಟಿ ೫೦  ಲಕ್ಷ ರೂ ವೆಚ್ಚದಲ್ಲಿ ಕೋಠಡಿಗಳನ್ನು ನಿರ್ಮಿಸಲಾಗಿದೆ. ಸೆಸ್ಕಾಂ ಇಜಿನಿಯರ್ ಅಫೀಸು, ಕಾವೇರಿ ನದಿಗೆ ಸೇತುವೆ ೨೩ ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ,  ನದಿ ದಂಡೆಗೆ ಕೋಟಿ ರೂ ವೆಚ್ಚದಲ್ಲಿ ತಡೆಗೋಡೆ ನಡೆಯುತ್ತಿದೆ ಎಂದರು.

ರಾಮೇಶ್ವರಸ್ವಾಮಿ ದೇವಾಲಯದ ಅವರಣ ಮತ್ತು ಕೋಟವಾಳು ಕೆ.ಎಸ್.ಅರ್.ಟಿ.ಸಿ ಸಾರಿಗೆ ಡಿಪೋ ಹತ್ತಿರ ೨೦ ಲಕ್ಷ ರೂ ವೆಚ್ಚದಲ್ಲಿ ಶುದ್ಧ ನೀರಿನ ಘಟಕ ಮಾಡಲಾಗಿದೆ. ಕಾವೇರಿ ನದಿ ದಂಡೆಯ ರಾಮೇಶ್ವರಸ್ವಾಮಿ ದೇವಾಲಯದ ಪಕ್ಕ ೨೫ ಲಕ್ಷ ರೂ ಮತ್ತು ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಪಕ್ಕದಲ್ಲಿ ೨೫ ಲಕ್ಷ ರೂ ವೆಚ್ಚದಲ್ಲಿ ಹೈಟೆಕ್ ಶೌಚಾಲಯಗಳನ್ನು ಉದ್ಘಾಟನೆ ಮಾಡಲಾಗಿದೆ. ಇಲ್ಲಿಯ ಬಸವೇಶ್ವರ ವೃತ್ತದಲ್ಲಿ ಸಾರಿಗೆ ಘಟಕದ ವ್ಯವಸ್ಥೆ, ಬಸ್ ನಿಲ್ದಾಣದ ವ್ಯವಸ್ಥೆ ಅಲ್ಲದೆ ನಿರ್ಮಾಣಕ್ಕೆ ಕೋಟಿ ೬೨ ಲಕ್ಷ ರೂ ಮಂಜೂರಾಗಿ ಕಾಮಗಾರಿ ನಡೆಯುತ್ತಿದೆ. ಅಲ್ಲದೇ ಇಲ್ಲಿಯ ಕೆ.ಎಸ್.ಅರ್.ಟಿ.ಸಿ. ನೂತನ ನಿಲ್ದಾಣದ ಮತ್ತು ವಾಣಿಜ್ಯ ಮಳಿಗೆ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಸರ್ಕಾರಕ್ಕೆ ಮತ್ತೆ ಕೋಟಿ ರೂ ವೆಚ್ಚದಲ್ಲಿ ಕಾಮಾಗಾರಿ ನಡೆಯುತ್ತಿದೆ. ಪಟ್ಟಣದಲ್ಲಿ ಸಾರ್ವಜನಿಕ ಅಸ್ಪತ್ರೆ ನಿರ್ಮಾಣವಾಗಿದೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟವಾಳು ಗ್ರಾಮದಲ್ಲಿ ೧೦ ಲಕ್ಷ ರೂ, ಪಟ್ಟಣದ ದೇವಸ್ಥಾನದ ರಸ್ತೆಗೆ ೨೦ ಲಕ್ಷ ರೂ ವೆಚ್ಚದಲ್ಲಿ ಡಾಂಬರೀಕರಣ ಮುಗಿದಿದೆ. ಪಟ್ಟಣದ ದೇವಾಲಯಗಳ ಬಹುತೇಖ ರಸ್ತೆಗಳಿಗೆ ಡಾಂಬರೀಕರಣ, ಸೇರಿದಂತೆ ನನ್ನ ಅವಧಿಯಲ್ಲಿ ನಾನು ಪ್ರಾಮಾಣಿಕವಾಗಿ ಪಟ್ಟಣಕ್ಕೆ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿಸಿದ್ದೇನೆ ಎಂದರು.

ಸಂದರ್ಭದಲ್ಲಿ ಮುಖಂಡರಾದ ಮಲ್ಲಿಪಟ್ಟಣ ವೆಂಕಟೇಶ್, ಅರುಣ್, ಮುಖಂಡರಾದ ಮಲ್ಲಿಪಟ್ಟಣ ವೆಂಕಟೇಶ್, ಅರುಣ್,. ತಾ.ಪಂ. ಮಾಜಿ ಸದಸ್ಯರಾದ ಬಸವಪಟ್ಟಣ ಬಿ.ಸಿ. ವೀರೇಶ್, ಶಾಸಕರ ಅಪ್ತ ಸಹಾಯಕ ಕಟೇಪುರ ವೆಂಕಟೇಶ್, .ಬಿ. ಕುಮಾರ್, ಮುಂತಾದವರು ಉಪಸ್ಥಿತರಿದ್ದರು.

Post a Comment

Previous Post Next Post