ಕುಖ್ಯಾತ ಅಂತರರಾಜ್ಯ ಮಾಂಗಲ್ಯ ಸರಗಳ್ಳರ ಬಂಧನ

ಹಾಸನ: ರಾಜ್ಯದ ವಿವಿಧ ಭಾಗಗಳಲ್ಲಿ ಒಂಟಿ ಮಹಿಳೆಯರನ್ನು ಅಡ್ಡಗಟ್ಟಿ ಮಾಂಗಲ್ಯ ಸರ ಅಪಹರಿಸುತ್ತಿದ್ದ 22 ಪ್ರಕರಣದ ಅಂತರರಾಜ್ಯ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಚನ್ನರಾಯಪಟ್ಟಣದ ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಿರುವುದಾಗಿ ಹೆಚ್ಚುವರಿ ಪೊಲೀಸ್ ಅಧಿಕಾರಿ ನಂದಿನಿ ತಿಳಿಸಿದರು.

 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲೆಲ್ಲಿ ಒಂಟಿ ಮಹಿಳೆಯರು ಓಡಾಡುತ್ತಿರುತ್ತಾರೆ ಅಲ್ಲಿ ಈ ಕಳ್ಳರು ಮಾಂಗಲ್ಯ ಸರವನ್ನು ಅಪಹರಿಸುತ್ತಿದ್ದರು. ಚಾಮರಾಜನಗರ ಜಿಲ್ಲೆ ಹಾಗೂ ತಾಲೂಕಿನ ಮೇಗಲಹುಂಡಿ ಗ್ರಾಮದ ಆಟೋ ಚಾಲಕ ಗೋಪಾಲ್ 39 ವರ್ಷ, ಮತ್ತೋರ್ವ ಇದೆ ಜಿಲ್ಲೆಯ ಸಾಗಡೆ ಗ್ರಾಮದವನು ಬೆಂಗಳೂರಿನಲ್ಲಿ ವಾಸವಾಗಿದ್ದು, ಏಳನೀರು ವ್ಯಾಪಾರ ಮಾಡುವ ರಮೇಶ್ 45 ವರ್ಷ ಈ ಇಬ್ಬರನ್ನು ಚನ್ನರಾಯಪಟ್ಟಣ ವೃತ್ತ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಒಟ್ಟು 660 ಗ್ರಾಂ ತೂಕದ 30 ಲಕ್ಷ ರೂ ಮೌಲ್ಯದ ಮಾಂಗಲ್ಯ ಸರಗಳು ಪತ್ತೆಯಾಗಿದೆ ಎಂದರು. 

 2020 ಸೆಪ್ಟಂಬರ್ 29 ರಂದು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ಇಂದ್ರಮ್ಮ ಕೊಂ ವಾಸುರವರು ಗೌಡರಹಳ್ಳಿ ಗ್ರಾಮದಿಂದ ಕಟ್ಟೆಗೆ ಬಟ್ಟೆ ಒಗೆಯಲೆಂದು ನಂಜಪ್ಪರವರ ತೋಟದ ಹತ್ತಿರ ನಡೆದುಕೊಂಡು ಹೋಗುವಾಗ ಒಬ್ಬ ಅಪರಿಚಿತ ವ್ಯಕ್ತಿ ರಸ್ತೆಯ ಎಡಬದಿಯಲ್ಲಿ ಒಂದು ಬೈಕ್ ನಿಲ್ಲಿಸಿಕೊಂಡು ನಿಂತಿದ್ದು, ಅಪರಿಚಿತ ವ್ಯಕ್ತಿ ಹಿಂದಿನಿAದ ನಡೆದುಕೊಂಡು ಇಂದ್ರಮ್ಮ ರವರ ಹತ್ತಿರ ಬಂದು ಪಿರ್ಯಾದಿ ಕೊರಳಿಗೆ ಕೈ ಹಾಕಿ ಚಿನ್ನದ ಮಾಂಗಲ್ಯ ಸರವನ್ನು ಕೀಳಲು ಪ್ರಯತ್ನಿಸಿದ್ದು, ಇಂದ್ರಮ್ಮ ಕಿರುಚಾಡಲು ಮತ್ತು ಆತನ ಕೈ ಕಿತ್ತು ಹಾಕಲು ಪ್ರಯತ್ನಿಸಿದರೂ ಸಹಾ ಅಪರಿಚಿತ ವ್ಯಕ್ತಿ ಬಲವಂತವಾಗಿ ಇಂದ್ರಮ್ಮರ ಬಾಯಿಯನ್ನು ಮುಚ್ಚಿಕೊಂಡು ರಸ್ತೆ ಪಕ್ಕದ ನಂಜಪ್ಪರವರ ಹೊಲದ ಕಡೆ ಎಳೆದುಕೊಂಡು ಹೋಗಿ ಕೆಳಕ್ಕೆ ಕೆಡವಿ ಇಂದ್ರಮ್ಮರ ಕೊರಳಿನಲ್ಲಿದ್ದ 30 ಗ್ರಾಂನ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಮುಂದಾದಗ ಇಂದ್ರಮ್ಮ ಮಾಂಗಲ್ಯವನ್ನು ಬಲವಾಗಿ ಹಿಡಿದುಕೊಂಡಿದ್ದರಿAದ ತಾಳಿ ಪಿರ್ಯಾದಿ ಕೈಯಲ್ಲಿ ಉಳಿದುಕೊಂಡಿದ್ದು, ಉಳಿದ ಭಾಗದ ಸರವನ್ನು ಅಪರಿಚಿತ ವ್ಯಕ್ತಿ ಬೈಕಿನಲ್ಲಿ ಅಲ್ಲಿಂದ ಬಾಳಗಂಚಿ ಗ್ರಾಮದ ಕಡೆ ಬೈಕಿನಲ್ಲಿ ಪರಾರಿಯಾಗಿದ್ದು ಕಿತ್ತುಕೊಂಡ ಹೋದ ಚಿನ್ನದ ಸರವು ತಾಳಿ ಬಿಟ್ಟು 30 ಗ್ರಾಂ ಇದ್ದು, ಅಂದಾಜು ಬೆಲೆ ಸುಮಾರು 1,20,000 ರೂ ಗಳೆಂದು ತಿಳಿದು ಬಂದಿದೆ. ದೂರಿನ ಮೇರೆಗೆ ಹಿರಿಸಾವೆ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡರು. ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಐಪಿಎಸ್, ಪೊಲೀಸ್ ಅಧೀಕ್ಷಕರು, ಹಾಗೂ ಹೊಳೆನರಸೀಪುರ ಉಪ - ವಿಭಾಗದ ಉಪ - ಅಧಿಕ್ಷಕರು ಬಿ.ಬಿ. ಲಕ್ಷೆö್ಮÃಗೌಡ ಮೇಲುಸ್ತುವಾರಿಯಲ್ಲಿ ಆರೋಪಿಗಳನ್ನು ಪತ್ತೆಮಾಡಲು ಮುಂದಾದಗ ಕಳೆದ ಒಂದು ವಾರಗಳ ಹಿಂದೆ ಸಂಜೆ ವೇಳೆ ಒಂದು ಪಲ್ಸರ್ ಮೋಟಾರ್ ಬೈಕಿನೊಂದಿಗೆ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರ ಬಂದಿದೆ ಎಂದು ಹೇಳಿದರು.

 ಮದ್ಯಪಾನ, ಸಿಗರೇಟ್ , ಗುಟ್ಕಾ ಸೇವನೆ ಹಾಗೂ ಜೂಜಾಟದಂತಹ ದುಶ್ಚಟಗಳಿಗೆ ಬಲಿಯಾಗಿ ದುಶ್ಚಟಕ್ಕಾಗಿ ಹಣ ಹೊಂದಿಸಲು ಗ್ರಾಮೀಣ ಭಾಗಗಳಲ್ಲಿನ ಇಂಟೀರಿಯರ್ ಪ್ರದೇಶಗಳಲ್ಲಿ ದನ ಮೇಯಿಸಲು, ಕುರಿ ಮೇಯಿಸಲು, ಬಟ್ಟೆ ತೊಳೆಯಲು ಸೌದೆ ತರಲು ಹಾಗೂ ಜಮೀನು ಬಳಿಗೆ ಊಟ ತರಲು ಒಂಟಿಯಾಗಿ ತಿರುಗಾಡುವ ಮಹಿಳೆಯರನ್ನು ಅದರಲ್ಲೂ ವಯಸ್ಸಾದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಆ ಮಹಿಳೆಯರ ಬಳಿ ವಿಳಾಸ, ತೆಂಗಿನ ಮೊಟ್ಟೆ, ಕುರಿ, ಶುಂಟಿ ಕೇಳುವ ನೆಪದಲ್ಲಿ ಮಹಿಳೆಯರ ಬಳಿ ಬೈಕಿನಲ್ಲಿ ಹೋಗಿ ಅವರ ಕೊರಳಲ್ಲಿನ ಚಿನ್ನದ ಮಾಂಗಲ್ಯ ಸರಗಳನ್ನು ಸುಲಿಗೆ ಮಾಡಿಕೊಂಡು ಹೋಗಿ ಸದರಿ ವಡವೆಗಳನ್ನು ಗಿರವಿ ಇಟ್ಟು ಮಾರಾಟ ಮಾಡಿ ಬಂದ ಹಣದಿಂದ ಮೋಜು ಮಸ್ತಿ ಮಾಡುವುದು ಇವರ ಮುಖ್ಯ ಉದ್ದೇಶವಾಗಿದೆ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂತಹ ಕೃತ್ಯ ಎಸಗಿದ್ದಾರೆ ಎಂದು ವಿಚಾರಣೆ ವೇಳೆ ಸತ್ಯಾಂಶ ಹೊರ ಬಂದಿದೆ.
 ಆರೋಪಿಗಳನ್ನು ಪತ್ತೆ ಮಾಡಿದ ವಿಶೇಷ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರ ವಿವರ, ಚನ್ನರಾಯಪಟ್ಟಣ ವೃತ್ತ ನಿರೀಕ್ಷಕರು ಜಿ.ಕೆ. ಸುಬ್ರಮಣ್ಯ, ನಗರ ಪೊಲೀಸ್ ಠಾಣೆ ಪಿಎಸ್‌ಐ ಶ್ರೀನಿವಾಸ್, ೆ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ. ಕುಮಾರಸ್ವಾಮಿ ಎಎಸ್‌ಐ ಹೆಚ್.ಸಿ -182 ಜವರೇಗೌಡ, ಹೆಚ್.ಸಿ -58 ಸುರೇಶ, ಪಿಸಿ 56 ಮಹೇಶ, ಪಿಸಿ -190 ಜಯಪ್ರಕಾಶನಾರಾಯಣ, ಹೆಚ್.ಸಿ -306 ಗಿರೀಶ್ ಹೆಚ್.ಎಸ್. ಹೆಚ್.ಸಿ -125 ಚಂದ್ರೇಶ ಪಿಸಿ -315 ಮಂಜುನಾಥ್ ಪಿಸಿ 527 ಶಶಿಧರ್, ಜಿಲ್ಲಾ ಪೊಲೀಸ್ ಕಛೇರಿಯ ಕಂಪ್ಯೂಟರ್ ವಿಭಾಗದ ಎಪಿಸಿ ಪೀರ್ ಖಾನ್ ಮತ್ತು ವೃತ್ತ ಕಛೇರಿ ಜೀಪ್ ಚಾಲಕ ಎ.ಹೆಚ್.ಸಿ .43 ಪರಮೇಶ ರವರುಗಳ ಕಾರ್ಯವನ್ನು ಮೆಚ್ಚಿ ಇದೆ ವೇಳೆ ಶ್ಲಾಘನೆವ್ಯಕ್ತಪಡಿಸಿದರು.

Post a Comment

Previous Post Next Post