ಕೋವಿಡ್-೧೯ ಚಿಕಿತ್ಸಾ ವ್ಯವಸ್ಥೆ ಸುಧಾರಿಸಲು ಮುಖ್ಯಮಂತ್ರಿ ಸೂಚನೆ

© ಹಾಸನ ಸೀಮೆ ನ್ಯೂಸ್

ಹಾಸನ ಏ.೨೯:- ರಾಜ್ಯದಲ್ಲಿ ಕೋವಿಡ್-೧೯ ಹೆಚ್ಚಳವಾಗುತ್ತಿರುವುದರಿಂದ ಚಿಕಿತ್ಸಾ ವ್ಯವಸ್ಥೆ ಇನ್ನಷ್ಟು ಉತ್ತಮಗೊಳಿಸುವುದರ ಜೊತೆಗೆ ನಿಯಂತ್ರಣ ಕ್ರಮಗಳನ್ನೂ ಕಟ್ಟು ನಿಟ್ಟಾಗಿ ಜಾರಿಗೊಳಿಸಲೇಬೇಕು ಎಂದು ಮುಖ್ಯಮಂತ್ರಿ ಬಿ.ಎಸ್  ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ.



ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿದ ಅವರು ಇದೊಂದು  ಸವಾಲಿನ ಸಂದರ್ಭವಾಗಿದ್ದು, ಲಭ್ಯವಿರುವ ಸೌಲಭ್ಯ, ಔಷದಿ, ಮಾನವ ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಇತಿಮಿತಿಯಾಗಿ ಬಳಸಿ ಸಮಸ್ಯೆಯನ್ನು ಸಮರ್ಥವಾಗಿ ನಿಬಾಯಿಸಿ  ಎಂದು ನಿರ್ದೇಶನ ನೀಡಿದರು

ಹೋಂ ಐಸೋಲೇಷನ್‌ನಲ್ಲಿ ಇರುವ ಸೋಂಕಿತರ ಆರೋಗ್ಯ ಪರಿಸ್ಥಿತಿ ಬಗ್ಗೆ ನಿರಂತರ ಮಾಹಿತಿ ಪಡೆಯಿರಿ ಮನೆಗಳಿಗೆ ಉಚಿತ ಔಷಧಿ ಒದಗಿಸಿ ಇದಕ್ಕಾಗಿ ಈಗಾಗಲೇ ಎಲ್ಲಾ ಜಿಲ್ಲೆಗಳಿಗೆ ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದರು.

ಜನಸಾಮಾನ್ಯರಿಗೆ ತೊಂದರೆಯಾಗದAತೆ ಮೇ೧೨ ರವೆರೆಗೆ ಲಾಕ್ ಡೌನ್ ಜಾರಿಗೊಳಿಸಿದ್ದು, ಬೆಳಿಗ್ಗೆ ೬ ರಿಂದ ೧೦ ಗಂಟೆವರಗೆ  ದಿನಿತ್ಯದ ಅವಶ್ಯಕ ಸಾಮಾಗ್ರಿ ಖರೀದಿಗೆ ಅವಕಾಶ ಮಾಡಿದರೆ  ಆ ನಂತರ ಜನರು ರಸ್ತೆಗೆ ಬರದಂತೆ ನಿಗಾವಹಿಸಿ ಎಂದು ಅವರು ಹೇಳಿದರು


ಎಲ್ಲಾ ಜಿಲ್ಲೆಗಳಲ್ಲಿ ಪೂರೈಕೆಯಾಗುವ ಆಮ್ಲಜನಕ, ರೆಮ್‌ಡಿಸಿವರ್ ಚುಚ್ಚುಮದ್ದು ಗಳ ಬಳಕೆ ಬಗ್ಗೆ ಪ್ರತಿದಿನ ಆಡಿಟ್ ಅಗಬೇಕು ಎಂದು  ತಿಳಿಸಿದ ಅವರು  ಎಲ್ಲಾ ತಾಲ್ಲೂಕಿನಲ್ಲಿ ಟಾಸ್ಕ್ ಫೋರ್ಸ್ ರಚಿಸಿ ಗ್ರಾಮ ಪಂಚಾಯಿತಿವಾರು ಕೋವಿಡ್ ನಿರ್ವಹಣೆ ಮಾಡಿ ಔಷಧಿ ಪೂರೈಕೆ ಹಾಗೂ ಸರ್ಕಾರಿ ನಿಯಮಗಳ ಜಾರಿಗೆ ಕ್ರಮವಹಿಸಿ ಎಂದು ಮುಖ್ಯಮಂತ್ರಿ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ಅವರು ಸಂವಾದದಲ್ಲಿ ಭಾಗವಹಿಸಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿದೆ ಜಿಲ್ಲಾಡಳಿತ ಉತ್ತಮವಾಗಿ ಕೆಲಸ ಮಾಡುತ್ತಿದೆ. ಹಿಮ್ಸ್ನಲ್ಲಿ ಇನ್ನೂ ೧೫೦ ಹಾಸಿಗೆಗಳನ್ನು ಹೆಚ್ಚಿಸಲು ಅವಕಾಶ ಇದ್ದು ಅದಕ್ಕೆ ಆಮ್ಲಜನಕ ಪೂರೈಕೆ ಸೇರಿದಂತೆ ಇತರ ಸೌಲಭ್ಯಗಳನ್ನೊದಗಿಸಿ ವೇಕ್ ಶಿಪ್ಟ್ ಆಸ್ಪತ್ರೆಯಾಗಿ ಪರಿವರ್ತಿಸಿ ಹೆಚ್ಚಿನ  ತುರ್ತಾಗಿ ೭ಕೋಟಿ ರೂ ಅಗತ್ಯ ಇದೆ ಇದಲ್ಲದೆ ಕೋವಿಡ್‌ಕೇರ್ ಸೆಂಟರ್‌ಗಳಿಗೆ ಅಮ್ಲಜನಕ ಸಿಲಿಂಡರ್‌ಗಳನ್ನು ಪೂರೈಸುವ ಅಗತ್ಯ ಇದೆ ಎಂದು ಕೊರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯ ಮಂತ್ರಿ ಯವರು ಸರ್ಕಾರದಿಂದ ಇವುಗಳಿಗೆ ಅನುಮೋದನೆ ನೀಡಲಾಗುವುದು ಸ್ಥಳೀಯವಾಗಿ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಜಿಲ್ಲೆಯಲ್ಲಿ ಮಾಡಲಾಗಿರುವ ಚಿಕಿತ್ಸಾ ವ್ಯವಸ್ಥೆ, ಲಭ್ಯವಿರುವ ಬೆಡ್‌ಗಳು ಅಗತ್ಯ ಸೌಲಭ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ರೆಮ್ ಡಿಸೀವರ್ ಚುಚ್ಚು ಮದ್ದು ಪೂರೈಕೆ ಕೊರತೆ ಬಗ್ಗೆ ಗಮನ ಸೆಳೆದರು.

ಮುಖ್ಯ ಮಂತ್ರಿಯವರು  ಪ್ರತಿಕ್ರಿಯೆ ನೀಡಿ ಎಲ್ಲಾ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳಲ್ಲಿ ರೆಮ್‌ಡಿಸೀವರ್ ಲಸಿಕೆ ಕೊರತೆ ಇದೆ ಇದನ್ನು ಅಗತ್ಯ ಇದ್ದವರಿಗೆ ಮಾತ್ರ ನೀಡಬೇಕು ಆಗ ಬೇಡಿಕೆ ಹಾಗೂ ಪೂರೈಕೆ ನಡುವೆ ಸಮತೋಲನ ಆಗಲಿದೆ ಎಂದರು.

ಕೋವಿಡ್ ಸೋಂಕು ತಪಾಸಣೆಯನ್ನು ಅಗತ್ಯಕ್ಕೆ ಅನುಗುಣವಾಗಿ ಮಾತ್ರ ಮಾಡಿ. ಸೋಂಕಿತರ ಕುಟುಂಬದವರನ್ನು ತಪಾಸಣೆಗೆ ಒಳಪಡಿಸಿ ಎಂದರು.

ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಮಾತನಾಡಿ ಬೆಂಗಳೂರಿನಿAದ ಜನ ಹಳ್ಳಿ ಸೇರಿದ್ದಾರೆ ಇದರಿಂದ ಸೋಂಕು ಹೆಚ್ಚಿನ ****  ಗ್ರಾಮ ಮಟ್ಟದ ಸಮಿತಿಯಿಂದ ಹೊರಗಿನಿಂದ ಬಂದವರ ಆರೋಗ್ಯ ತಪಾಸಣೆ ಮಾಡಿ ಐಸೋಲೇಟ್ ಮಾಡಿಸಿ ಹಾಗೂ ಜಿಲ್ಲೆಗಳಲ್ಲಿ ಕೋವಿಡ್ ಕೇರ್ ಕೇಂದ್ರ ಹೆಚ್ಚಿಸಿ ಗಡಿಭಾಗದ ಜಿಲ್ಲೆಗಳಲ್ಲಿ ಜಾಗೃತಿ ವಹಿಸಿ  ತಪಾಸಣೆ ಮಾಡಿಸಿ ಅಥವಾ ಐಸೊಲೆಷನ್ ಮಾಡಿಸಿ ಎಂದರು.

ಮನೆಯಲ್ಲೆ ಐಸೊಲೇಷನ್ ಆಗಿರುವವರಿಗೆ ಔಷಧ ನೀಡಿ, ರೋಗಲಕ್ಷಣ ಇದ್ದವರಿಗೆ ಹಾಗೂ ಸೋಂಕಿತರ ಕುಟುಂಬದವರಿಗೆ ಕೋವಿಡ್ ಆರ್.ಟಿ.ಪಿ.ಸಿ.ಆರ್ ತಪಾಸಣೆ ಮಾಡಿ ಎಂದರಲ್ಲದೆ, ಕೋವಿಡ್ ನಿರ್ಬಹಣೆಗೆ ಹಣ ಬಳಕೆ ಮಾಡುವ ನಿರ್ದಾರಗಳಿಗೆ ಸಂದರ್ಭನುಸಾರ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗುವುದು. ಹಣಕ್ಕೆ ಕೊರತೆ ಇಲ್ಲ ಅಗತ್ಯಕ್ಕೆ ಅನುಗುಣವಾಗಿ ಹಣವನ್ನು ಜವಾಬ್ದಾರಿಯುತವಾಗಿ ಬಳಸಿ ಎಂದು ಪಿ. ರವಿಕುಮಾರ್ ಹೇಳಿದರು.

ಸಭೆಯಲ್ಲಿ ಉಪಮುಖ್ಯ ಮಂತ್ರಿಗಳಾದ ಗೋವಿಂದಕಾರಜೋಳ, ಡಾ|| ಅಶ್ವತ್ಥನಾರಾಯಣ, ಲಕ್ಷಣ್ ಸವಧಿ, ಕಂದಾಯ ಸಚಿವರಾದ ಆರ್.ಅಶೋಕ್, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವರಾದ ಡಾ|| ಸುಧಾಕರ್ ಹಾಗೂ ಬೆಂಗಳೂರು ಹಾಗು ವಿವಿಧ ಜಿಲ್ಲೆಗಳಿಂದ  ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು. 

 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎ ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತರಾಜಾಂ, ಉಸ್ತುವಾರಿ ಸಚಿವರ ಆಪ್ತಕಾರ್ಯದರ್ಶಿ ಕಾಂತರಾಜ್,   ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ, ಬಿ,ಎನ್ ನಂದಿನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ|| ಸತೀಶ್, ಆರ್.ಸಿ ಹೆಚ್ ಅಧಿಕಾರಿ ಕಾಂತರಾಜು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು. 


Post a Comment

Previous Post Next Post