ಹಾಸನ ಏ ೨೪: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿಂದು ವರನಟ ಡಾ ರಾಜ್ ಕುಮಾರ್ ಅವರ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಾಹಾಯಕ ನಿರ್ದೇಶಕರಾದ ವಿನೋದ್ ಚಂದ್ರ ,ಸಹಾಯಕ ನಿರ್ದೇಶಕರಾದ ಮೀನಾಕ್ಷಮ್ಮ, ಡಾ ರಾಜ್ ಕುಮಾರ್ ಸಂಘದ ಜಿಲ್ಲಾ ಆಧ್ಯಕ್ಷರಾದ ಬಾಳ್ಳುಗೋಪಾಲ್ ,ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತರಾದ ಬಿ.ಟಿ ಮಾನವ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿಬ್ಬಂದಿ ವರನಟ ಡಾ .ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಗೌರವ ಸಲ್ಲಿಸಿದರು .
ಕೊವೀಡ್ ೧೯ ಹಿನ್ನಲೆಯಲ್ಲಿ ಈ ಡಾ ರಾಜ್ ಕುಮಾರ್ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು
Tags
ಹಾಸನ
