ಬಡ ರೋಗಿಗಳ ಮನೆ ಆಧಾರಿತ ಉಪಶಮನ ಆರೈಕೆ ಕಾರ್ಯಕ್ರಮ

ಹಾಸನ ಏ.೨೮ :-ರಾಜ್ಯಾದ್ಯಂತ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಎಸ್.ವಿ.ವೈ.ಎಂ. ಸಂಸ್ಥೆಗೆ ಜಿಲ್ಲೆಯಲ್ಲಿ ಹಾಸನ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಉಪಶಮನ ಆರೈಕೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುತ್ತಿರುವುದಕ್ಕಾಗಿ ಅಭಿನಂದನೆಗಳನ್ನು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಡಾ|| ಬಿ.ಸಿ ರವಿಕುಮಾರ್ ತಿಳಿಸಿದ್ದಾರೆ.



     ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಹಭಾಗಿತ್ವದಲ್ಲಿ ಹಿಮ್ಸ್ ನಲ್ಲಿ ಅನುಷ್ಠಾನ ಮಾಡುತ್ತಿರುವ ಮನೆ ಆಧಾರಿತ ಉಪಶಮನ ಆರೈಕೆ ಕಾರ್ಯಕ್ರಮದ ಹೊಸ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಅವರು ಆಸ್ಪತ್ರೆಗೆ ಬರಲಾಗದ ಮತ್ತು ಅಂತಿಮ ಹಂತದಲ್ಲಿ ಗುಣಪಡಿಸಲಾಗದ ದೀರ್ಘಕಾಲಿಕ ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಕ್ಯಾನ್ಸರ್, ಸ್ಟೊçÃಕ್, ಎಚ್.ಐ.ವಿ ಹೃದಯ ರೋಗಗಳಿಂದ ಬಳಲುತ್ತಿರುವ ರೋಗಿಗಳು ಉಪಶಮನ ಆರೈಕೆ ಕೇಂದ್ರದ ಸದುಪಯೋಗ ಪಡೆದುಕೊಂಡು ತಮ್ಮ ನೋವನ್ನು ಶಮನ ಮಾಡಿಕೊಳ್ಳುವುದು ತುಂಬಾ ಮುಖ್ಯವಾದದ್ದು ಆಗಿರುತ್ತದೆ ಆದ್ದರಿಂದ ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದ್ದಾರೆ.


ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಮೈಸೂರು ಕೇಂದ್ರ ವಿವೇಕಾನಂದ ಸ್ಮಾರಕ ಆಸ್ಪತ್ರೆ ನಿರ್ದೇಶಕರು ಆರೋಗ್ಯ ಹಾಗೂ ಸಮುದಾಯ ಆಧಾರಿತ ಕಾರ್ಯಕ್ರಮಗಳ ಮುಖ್ಯಸ್ಥರಾದ ಡಾ|| ಡೆನ್ನಿಸ್ ಡಿ. ಚೌಹಾಣ್ ರವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತ ಕಾರ್ಯಕ್ರಮವನ್ನು ಹಾಸನ ನಗರದಿಂದ ೨೫ ಕಿಲೋಮೀಟರ್ ಬಳಕೆಯಲ್ಲಿರುವ ನಗರ ಮತ್ತು ಸುತ್ತಲ ಗ್ರಾಮೀಣ ಪ್ರದೇಶದಲ್ಲಿ ಜುಲೈ ೨೦೧೮ ರಿಂದ ಅನುಷ್ಠಾನ ಮಾಡುತ್ತಲಿದೆ. ಇಲ್ಲಿಯವರೆಗೆ ಸುಮಾರು ೫೦೦ ಗುಣಪಡಿಸಲಾಗದ ದೀರ್ಘಕಾಲಿಕ ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಗುರುತಿಸಿ ರೋಗಿಗಳ ಮನೆಗೆ ತಿಂಗಳಿಗೊಮ್ಮೆ ವೈದ್ಯರು ಶುಶ್ರೂಷಕರು ಆಪ್ತ ಸಮಾಲೋಚಕರು ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡ ತಂಡ ಭೇಟಿ ನೀಡಿ ರೋಗಿಗಳಿಗೆ ಮತ್ತು ಕುಟುಂಬದವರಿಗೆ ಅವರುಗಳ ಅವಶ್ಯಕತೆಗಳಿಗನುಗುಣವಾಗಿ ಆಪ್ತಸಮಾಲೋಚನೆ ವೈದ್ಯಕೀಯ ಸೇವೆ ಭಾವನಾತ್ಮಕ ಬೆಂಬಲ ಸೇವೆ ಸಾಮಾಜಿಕ ಸವಲತ್ತುಗಳು ಆದ್ಯತೆ ಆಧ್ಯಾತ್ಮಿಕ ಸೇವೆಗಳು ಸಂಪರ್ಕ ಸೇವೆಗಳನ್ನು ಉಚಿತವಾಗಿ ನೀಡುತ್ತಿದೆ ಎಂದು ತಿಳಿಸಿದ್ದಾರೆ.


ಸಮಾಜದಲ್ಲಿ ಬದುಕುವ ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಜೀವನದ ಅಂತಿಮ ಹಂತದಲ್ಲಿ ಗೌರವಿತವಾಗಿ ಗುಣಮಟ್ಟದ ಜೀವನ ನಡೆಸಬೇಕು ಎನ್ನುವ ಆಸೆ ಇರುತ್ತದೆ ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯ ರೋಗಿಗಳನ್ನು ಪ್ರೀತಿ ವಿಶ್ವಾಸ ಮತ್ತು ಗೌರವಯುತವಾಗಿ ನೋಡಿಕೊಳ್ಳಬೇಕು, ಈ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ಪ್ಯಾಲೆಟ್ ಕೇರ್ ಸೆಂಟರ್ ನ ಮುಖಾಂತರ ಗುಣಪಡಿಸಲಾಗದ ದೀರ್ಘಕಾಲಿಕ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತ ಮನೆ ಉಪಶಮನ ಆರೈಕೆ ನೀಡುವ ಮೂಲಕ ರೋಗಿಗಳ ದೈಹಿಕ ಮಾನಸಿಕ, ಸಾಮಾಜಿಕ, ಆರ್ಥಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಆರೋಗ್ಯ ಕಲಿಸಲಾಗುತ್ತಿದೆ ಯಶಸ್ವಿಗೆ ಸಹಕರಿಸುತ್ತಿರುವ ಹಿಮ್ಸ್ ನಿರ್ದೇಶಕರಾದ ಡಾಕ್ಟರ್ ಬಿಸಿ ರವಿಕುಮಾರ್ ಅವರ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದರು.


ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಹಾಸನ ಇಲಾಖೆಯ ಸ್ಥಳೀಯ ಸಂಚಾಲಕರು ಹಾಗೂ ಉಪಾಧ್ಯಕ್ಷರಾದ ಡಾ|| ಸುಧೀರ್ ಬಿ. ಬೆಂಗಳೂರು ಮಾತನಾಡುತ್ತಾ ರೋಗಿಗಳ ಮನೆಗೆ ಭೇಟಿ ನೀಡುವ ಉಪಶಮನ ಆರೈಕೆ ತಂಡಕ್ಕೆ ಅವಶ್ಯವಿದ್ದಲ್ಲಿ ಸಹಾಯಹಸ್ತ ನೀಡಿ ಸಹಕರಿಸಿದ ಎಲ್ಲಾ ಸಹೃದಯಿಗಳಿಗೆ ಧನ್ಯವಾದ ತಿಳಿಸಿದರು ಅಧ್ಯಕ್ಷರಾದ ಕೃಷ್ಣಮೂರ್ತಿ ನಿವಾಸಿ ವೈದ್ಯಾಧಿಕಾರಿಗಳ ಶೂಶೃಷಕ ಅಧೀಕ್ಷಕರಾದ ಮಾಲಿನಿ ಹಾಗು ವಿವಿಧ ವಿಭಾಗದ ಮುಖ್ಯಸ್ಥರುಸಗಳು ಹಾಗೂ ಎಸ್.ವಿ.ವೈ ಎನ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಮನೆ ಆಧಾರಿತ ಉಪಶಮನ ಆರೈಕೆ ಕಾರ್ಯಕ್ರಮದ ಅವಶ್ಯಕತೆ ಇರುವ ಬಡರೋಗಿಗಲು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ದೂ. ಸಂ ೯೬೮೬೬೬೬೩೦೮/೯೯೦೦೦೨೦೪೮೭ ಸಂಪರ್ಕಿಸಬಹುದಾಗಿದೆ.


Post a Comment

Previous Post Next Post