ಹಾಸನ ಏ.೦೯ : ಸಕಲೇಶಪುರ ಪುರಸಭೆ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳು ಮತ್ತು ಇನ್‌ಸ್ಯಾನಿಟರಿ ಲೆಟ್ರಿನ್ಸ್ಗಳ ಅಸ್ತಿತ್ವದ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಸಕಲೇಶಪುರ ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಸಮೀಕ್ಷೆಯ ಉದ್ದೇಶ ಮತ್ತು ಕಾರ್ಯವ್ಯಾಪ್ತಿ: ಮ್ಯಾನ್ಯುಯಲ್ ಸ್ಕಾö್ಯವೆಂಜಿAಗ್ ಕೆಲಸಗಳಲ್ಲಿ ಇನ್ನೂ ತೊಡಗಿಸಿಕೊಂಡಿರುವ ವ್ಯಕ್ತಿಗಳ ಮತ್ತು ಅವರ ಅವಲಂಬಿತರನ್ನು (ವಯಸ್ಕರು ಮತ್ತು ಅಪ್ರಾಪ್ತರನ್ನು) ಗುರುತಿಸುವುದು. ನಿಜವಾದ ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳ ಗುರುತಿಸುವಿಕೆಯನ್ನು ಖಾತರಿಪಡಿಸಿಕೊಳ್ಳುವುದು. ಹಾಗೂ ನಿಜವಾಗಿಯೂ ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳಲ್ಲದವರ ಸೇರ್ಪಡೆ ಸಾಧ್ಯತೆಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲಾಗದಿದ್ದರೂ ಅದನ್ನು ಕಡಿಮೆಗೊಳಿಸುವುದಾಗಿದೆ.
ಸಮೀಕ್ಷೆಯಲ್ಲಿ ಗುರುತಿಸಲಾದ ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ, ಮತ್ತು ಕುಶಲಕಲೆಗಳ ಸ್ಥಿತಿಗತಿ ಬಗ್ಗೆ ಹಾಗೂ ಪರ್ಯಾಯ ಸ್ವಯಂ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಸಮ್ಮತಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳುವುದು. ಸಮೀಕ್ಷೆಯಲ್ಲಿ ಗುರುತಿಸಲಾದ ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳನ್ನು ಸ್ವಚ್ಛಗೊಳಿಸುತ್ತಿರುವ ಇನ್ ಸ್ಯಾನಿಟರಿ ಲ್ಯಾಟ್ರಿನ್ಸ್ಗಳು ಮತ್ತು ತೆರೆದ ಚರಂಡಿಗಲ ಬಗ್ಗೆ ವಿವರಗಳನ್ನು ಖಚಿತಪಡಿಸಿಕೊಳ್ಳುವುದಾಗಿದೆ.
ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳು ಅಂದರೆ ಯಾರು?: ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳು ಎಂದರೆ ಇನ್‌ಸ್ಯಾನಿಟರಿ ಶೌಚಾಲಯಗಳಲ್ಲಿ ಮಲಮೂತ್ರಗಳನ್ನು ವಿಸರ್ಜಿಸುವ ತೆರೆದ ಚರಂಡಿಗಳು, ಗುಂಡಿಗಳಿAದ ರೈಲ್ವೆ ಹಳಿಗಳಿಂದ ಮಾನವ ಮಲಮೂತ್ರಗಳನ್ನು ಅವುಗಳ ಸಂಪೂರ್ಣ ಕೊಳೆಯುವ ಮೊದಲೇ ಸ್ವಚ್ಛಗೊಳಿಸಲು ತೆಗೆದುಕೊಂಡು ಹೋಗಲು, ವಿಲೇವಾರಿ ಮಾಡಲು ಅಥವಾ ಇನ್ಯಾವುದೇ ರೀತಿಯಲ್ಲಿ ನಿರ್ವಹಿಸಲು ಯಾವುದೇ ವ್ಯಕ್ತಿಗಳಿಂದ, ಸಂಸ್ಥೆಗಳಿAದ, ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಿAದ ನೇಮಿಸಿಕೊಳ್ಳಲ್ಪಟ್ಟ ವ್ಯಕ್ತಿ ಎಂದರ್ಥ.
ನಗರ ಸ್ಥಳೀಯ ಸಂಸ್ಥೆಗಳು, ಸರ್ಕಾರಿ, ಅರೆಸರ್ಕಾರಿ ಮತ್ತು ಕಚೇರಿ ಸಂಸ್ಥೆಗಳಲ್ಲಿ ಕಸ ಗುಡಿಸುತ್ತಿರುವ ಅಥವಾ ಇತರೆ ಸ್ವಚ್ಛತಾ ಕಾಮಗಾರಿಗಳಿಗೆ (ಮೇಲೆ ತಿಳಿಸಲಾದ ಸ್ವಚ್ಛತಾ ಕಾಮಗಾರಿಗಳನ್ನು ಹೊರತುಪಡಿಸಿ) ನೇಮಿಸಲಾಗಿರುವ ಕೆಲಸಗಾರರು ಸಫಾಯಿ ಕರ್ಮಚಾರಿಗಳಾಗಿದ್ದರೆ ಇವರು ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳಲ್ಲ.
ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳ ಸ್ವಯಂ ಘೋಷಣೆ: ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳೆAದು ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ತಮ್ಮನ್ನು ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳೆAದು ಘೋಷಿಸಿಕೊಂಡು ಅನುವು ಆಗುವಂತೆ ಪುರಸಭಾ ಕಾರ್ಯಾಲಯದಲ್ಲಿ ಆರೋಗ್ಯ ಶಾಖೆಂiÀiನ್ನು ಸಂಪರ್ಕಿಸಬಹುದಾಗಿದೆ. (ಕಚೇರಿ ದೂ.ಸಂ ೦೮೧೭೩-೨೪೪೦೪೨) ಸದರಿ ಸಮೀಕ್ಷೆಗಾಗಿ ನಿಗದಿಪಡಿಸಿರುವ ಕೇಂದ್ರಗಳಲ್ಲಿ ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳ ನಿಗಧಿತ ನಮೂನೆಯಲ್ಲಿ ವಿವರಗಳನ್ನು ಭರ್ತಿಮಾಡಿ ಸ್ವಯಂ ಘೋಷಣೆ ಮಾಡಿಕೊಳ್ಳಬಹುದಾಗಿರುತ್ತದೆ. ಹಾಗೂ ಇವರ ಕ್ಷೇಮಾಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆಗಳ ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳ ಅಸ್ತಿತ್ವಕ್ಕೆ ಕುರಿತಾಗಿನ ಮಾಹಿತಿ, ವಿವರಗಳು ಲಭ್ಯವಿದ್ದಲ್ಲಿ ಅವುಗಳನ್ನು ಪುರಸಭಾ ಕಾರ್ಯಾಲಯದ (seಟಜಿ ಜeಛಿಟಚಿಡಿಚಿಣioಟಿ ಛಿeಟಿಣeಡಿs) ದಾಖಲಿಸಬಹುದಾಗಿರುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.