ಹಾಸನದಲ್ಲಿಂದು ಒಟ್ಟು 1277 ಮಂದಿಗೆ ಕರೋನ ಪಾಸಿಟಿವ್ ಪತ್ತೆ ಹಾಗೂ 15 ಮಂದಿ ಸಾವನ್ನಪ್ಪಿದ್ದಾರೆ

ಹಾಸನ ಮೇ 1:-ಜಿಲ್ಲೆಯಲ್ಲಿಂದು ಹೊಸದಾಗಿ 1277 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 42313 ಏರಿಕೆಯಾಗಿದ್ದು, ಜಿಲ್ಲೆಯಲ್ಲಿ 8099 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈವರೆಗೆ 33598 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 89 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ನಿಂದ 15 ಮಂದಿ ಸಾವನಪ್ಪಿದ್ದಾರೆ ಕೋವಿಡ್-19 ನಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 616 ಮಂದಿ ಸಾವನ್ನಪ್ಪಿದ್ದಾರೆ. 

Post a Comment

Previous Post Next Post