ರಾಮನಾಥಪುರ ಹರಾಜು ಮಾರುಕಟ್ಟೆ ಅಧೀಕ್ಷಕ ಸಿದ್ದರಾಮ್‌ಡಾಂಗೆ ಬೆಳೆ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ

 ರಾಮನಾಥಪುರ:   ರೈತರು ಉತ್ಕೃಷ್ಟ ಗುಣಮಟ್ಟದ ಹೊಗೆಸೊಪ್ಪು ಉತ್ಪಾದಿಸಿದರೆ ಅಂತರಾಷ್ಟಿçà ಮಾರುಕಟ್ಟೆಯಲ್ಲಿರುವ ಬೇಡಿಕೆಯನ್ನು ಉಳಿಸಿಕೊಂಡು ಅಧಿಕ ಲಾಭಗಳಿಸಬಹುದು ಎಂದು ರಾಮನಾಥಪುರ ಹರಾಜು ಮಾರುಕಟ್ಟೆ ಅಧೀಕ್ಷಕ ಸಿದ್ದರಾಮ್‌ಡಾಂಗೆ ತಿಳಿಸಿದರು.



ರಾಮನಾಥಪುರ ಸಮೀಪದ ಬೇಡಿಗನಹಳ್ಳಿ ಗ್ರಾಮದಲ್ಲಿ ರಾಮನಾಥಪುರ ತಂಬಾಕು ಮಂಡಳಿ ಮತ್ತು ಐಟಿಸಿ ಕಂಪನಿಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಬೆಳೆ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದ ಅವರು ಹಿಂದೆ ವಿದೇಶದ ಮಾರುಕಟ್ಟೆಗಳಲ್ಲಿ ಭಾಗದ ಹೊಗೆಸೊಪ್ಪಿಗೆ ಉತ್ತಮ ಬೇಡಿಕೆ ಬರುತ್ತಿದ್ದ ಹಿನ್ನೆಲೆಯಲ್ಲಿ ವರ್ತಕರು ಖರೀದಿಗೆ ಮುಗಿ ಬೀಳುತ್ತಿದ್ದರು. ಈಗ ರೈತರು ಉತ್ಪಾದಿಸುವ ತಂಬಾಕಿನಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುತ್ತಿಲ್ಲ. ಬೆಳೆ ಕಟಾವಿಗೆ ಮುನ್ನ ಕುಡಿ, ಕಂಕುಳ ಕುಡಿ ತೆಗೆದು ಬಲಿತ ಎಲೆಗಳನ್ನು ಮುರಿದು ಹಣ್ಣಾಗಿರುವ ಹಾಗೂ ಹಸಿರು ಎಲೆಗಳನ್ನು ಸಮರ್ಪಕವಾಗಿ ವಿಂಗಡಿಸಿ ಕರಕಡ್ಡಿಗೆ ಕಟ್ಟಬೇಕು. ಬೇರಲ್ ಮನೆಗಳಲ್ಲಿ ನಿಗದಿತ ಕರಕಡ್ಡಿಗಳನ್ನು ಜೋಡಿಸಿ ಕ್ರಮಬದ್ದವಾಗಿ ಶಾಖಾಂಶ ನೀಡಬೇಕು. ಹದಗೊಳಿಸಿದ ಹೊಗೆಸೊಪ್ಪನ್ನು ಮೆದೆ ಹಾಕುವಾಗ ಸಾಧಾರಣ ತೇವಾಂಶ ಉಳಿಸಿಕೊಂಡು ಅನ್ಯಪದಾರ್ಥಗಳು ಸೇರ್ಪಡೆ ಆಗದಂತೆ ಜಾಗರೂಕವಾಗಿ ಬೇಲ್ ಮಾಡಿಕೊಂಡು ಮಾರುಕಟ್ಟೆಗೆ ತರಬೇಕು. ಪ್ರತಿಯೊಂದು ಹಂತದಲ್ಲಿಯೂ ಗುಣಮಟ್ಟ ಉಳಿಸಿಕೊಳ್ಳುವತ್ತ ನಿಗಾವಹಿಸಬೇಕು ಎಂದು ಸಲಹೆ ನೀಡಿದರು.

 

.ಟಿ.ಸಿ. ಕಂಪನಿ ರಾಮನಾಥಪುರ ವಿಭಾಗದ ವ್ಯವಸ್ಥಾಪಕ ಪ್ರವೀಣ್ ಮಾತನಾಡಿ, ಬೆಳೆ ಬೆಳವಣಿಗೆ ಹಂತದ ಗಿಡಗಳಿಗೆ ಔಷಧಿಗಳನ್ನು ಹತೋಟಿ ಮೀರಿ ಸಿಂಪಡಿಸಬಾರದು. ಆರೋಗ್ಯಕ್ಕೆ ಹಾನಿಕಾರಕವಾದ ತಂಬಾಕಿನಲ್ಲಿ ಇನ್ನಷ್ಟು ರಾಸಾಯನಿಕ ಉಳಿಕೆ ಅಂಶ ಹೆಚ್ಚಿ ಪ್ರಾಮುಖ್ಯತೆ ಕಳೆದುಕೊಳ್ಳಲಿದೆ. ಸದ್ಯ ಇಲ್ಲಿನ ಉತ್ಪಾದಿತ ಹೊಗೆಸೊಪ್ಪನ್ನು ಅನ್ಯ ದೇಶಗಳಿಗೆ ಹೊಲಿಸಿದರೆ ರಾಸಾಯನಿಕ ಉಳಿಕೆ ಅಂಶ ಮೊಳಕೆಯಲ್ಲಿದೆ. ಇದನ್ನು ಹೆಮ್ಮರವಾಗಿ ಬೆಳೆಯಲು ಅವಕಾಶ ನೀಡಿದರೆ ವರ್ತಕರು ಇಂದಿನ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬೇಕಾದ ಕಡೆ ಉತ್ಪನ್ನ ಕೊಳ್ಳುವ ಸಾಧ್ಯತೆಯಿದೆ. ರೈತರು ಎಚ್ಚೆತ್ತುಕೊಂಡು ಇಂಥ ಕೆಟ್ಟ ಬೆಳವಣಿಗೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

 

ಇದೇ ಸಂದರ್ಭದಲ್ಲಿ ಫೀಡ್ ಅಫೀಸರ್ ಶಂಭುಲಿAಗೇಗೌಡ, ಅಶೋಕ್‌ರಾಜ್, ಬೆಳೆಗಾರರಾದ ಗುಡ್ಡೆನಹಳ್ಳಿ ನೇತ್ರಪಾಲ್, ರೇವಣ್ಣ, ಮಂಜಣ್ಣ, ಗ್ರಾ.ಪಂ. ಸದಸ್ಯ ರೇವಣ್ಣ ಮುಂತಾದ ರೈತರು ಮತ್ತು ಅಧಿಕಾರಿಗಳೊಂದಿಗೆ ಬೆಳೆ ನಿರ್ವಹಣೆ ಕುರಿತು ಸಂವಾದ ಕಾರ್ಯಕ್ರಮ ನಡೆಸಿದರು.

 

Post a Comment

Previous Post Next Post