ಹಾಸನ:- ಕೋವಿಡ್ 19 ಸೋಂಕಿತರ ಚಿಕಿತ್ಸೆಗೆ ಜಿಲ್ಲೆಯ ಆಸ್ಪತ್ರೆಗಳಿಗೆ ಹಾಲಿ ಸಾಕಗುವಷ್ಟು ಆಮ್ಲಜನಕ ಪೂರೈಕೆ ವ್ಯವಸ್ಥೆ ಇದೆ. ಆದರೆ ಮುಂದೆ ಎದುರಾಗಬಹುದಾದ ಕ್ಲಿಷ್ಟ ಪರಿಸ್ಥಿತಿಯಲ್ಲಿ ಬೇಕಾಗಬಹುದಾದ ಗರಿಷ್ಠ ಬೇಡಿಕೆ ನಿಭಾಯಿಸಲು ಜಿಲ್ಲಾಧಿಕಾರಿ ಆರ್, ಗಿರೀಶ್ ಈಗಾಗಲೇ ವ್ಯವಸ್ಥಿತ ಯೋಜನೆ ರೂಪಸಿ ಪ್ರಯತ್ನ ಮುಂದುವರೆಸಿದ್ದಾರೆ.
ಜಿಲ್ಲೆಯಲ್ಲಿ ಹಿಮ್ಸ್ ಆಸ್ಪತ್ರೆಯಲ್ಲಿ ಹಾಲಿ 13 ಸಾವಿರ ಕಿಲೋ ಆಮ್ಲಜನಕ ಪೂರೈಕೆ ಟ್ಯಾಂಕ್
ಇದ್ದು ಅದು ನಿಗದಿತ ಕೋವಿಡ್ ಆಸ್ಪತ್ರೆಯ 400 ಬೆಡ್‌ಗಳ ಆಮ್ಲಜನಕ ಬೇಡಿಕೆ ನೀಗುತ್ತಿದೆ ಇದೇ
ರೀತಿ ನಗರದ ಕೈಗಾರಿಕಾ ಪ್ರದೇಶದಲ್ಲಿರುವ 5 ಮೆಟ್ರಿಕ್ ಟನ್ ಸಾಮಾರ್ಥ್ಯದ ಮೇ| ಮಲ್ನಾಡ್ ಗ್ಯಾಸಸ್
ಹಾಸನ ಜಿಲ್ಲೆಯ ಇತರ ಖಾಸಗಿ ಆಸ್ಪತ್ರೆಗಳು ಹಾಗೂ ಕೆಲವು ಕೋವಿಡ್ ಕೇರ್ ಕೇಂದ್ರಗಳಿಗೆ ಆಮ್ಲಜನಕ
ಪೂರೈಕೆ ಮಾಡುತ್ತಿದೆ ಇಲ್ಲಿ ಪ್ರತಿದಿನ 400 ರಿಂದ 600 ಸಿಲಿಂಡರ್ ವರೆಗೂ ಪೂರೈಕೆ ಸಾಮಾರ್ಥ್ಯವಿದೆ.
ಆದರೆ ಇನ್ನಷ್ಟು ಪ್ರಕರಣಗಳು ಹೆಚ್ಚಿದಲ್ಲಿ ಅಧಿಕ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನು ತೆರೆಯಬೇಕಾಗುತ್ತದೆ ಅದೇ ಪ್ರಮಾಣದ ಆಮ್ಲಜನಕ ಸಿಲಿಂಡರ್ ಗಳ ಲಭ್ಯತೆಯೂ ಮುಖ್ಯವಾಗುತ್ತದೆ ಹಾಗಾಗಿ ಜಿಲ್ಲೆಯಲ್ಲಿ ಇನ್ನು 800 ರಿಂದ 1200 ಹೆಚ್ಚುವರಿ ಸಿಲಿಂಡರ್‌ಗಳು ಆಮ್ಲಜನಕ ಪೂರೈಕೆಗೆ
ಜಿಲ್ಲಾಧಿಕಾರಿ ಪ್ರಯತ್ನ ನಡೆಸಿದ್ದು ಇದು ಸದ್ಯದಲ್ಲೇ ಫಲ ನೀಡಲಿದೆ. ಇದರಿಂದ ಚಿಕ್ಕಮಗಳೂರು ಜಿಲ್ಲೆಗೂ
ಸಾಕಷ್ಟು ಆಮ್ಲಜನಕ ಸಿಲಿಂಡರ್‌ಗಳು ಸರಬರಾಜಗಲಿವೆ.
ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕೈಗಾರಿಕಾ ಅಭಿವೃದ್ಧಿ
ಆಯುಕ್ತರು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದಿದ್ದು ಹಾಲಿ
ಸ್ಥಗಿತಗೊಂಡಿರುವ ಎರಡು ಗ್ಯಾಸ್ ರೀಫಿಲೀಂಗ್ ಕೈಗಾರಿಕೆಗಳಿಗೆ ಲಿಕ್ವಿಡ್ ಆಕ್ಸಿಜನ್ ಸರಬರಾಜು
ಮಾಡಲು ಮನವಿ ಮಾಡಿದ್ದಾರೆ.
ನಗರದಲ್ಲಿ ಲಿಕ್ವಿಡ್ ಆಕ್ಸಿಜನ್ ರೀ ಫೀಲಿಂಗ್ ಮಾಡುವ ಎರಡು ಘಟಕಗಳಿದ್ದು ಇದರಲ್ಲಿ ಮೇ
ಇಂಡಿಯನ್ ಆಕ್ಸಿಜನ್ ಕೇಂದ್ರ 13 ಮೆಟ್ರಿಕ್ ಟನ್ ಸಾಮಾರ್ಥ್ಯ ಹೊಂದಿದೆ ಮೇ ಲಕ್ಷಿ ಗ್ಯಾಸಸ್ ಸಂಸ್ಥೆ
6 ಮೆಟ್ರಿಕ್ ಸಾಮಾರ್ಥ್ಯ ಹೊಂದಿದೆ ಈ ಎರಡಕ್ಕೂ ಕ್ರಮವಾಗಿ ಬಳ್ಳಾರಿಯ ಇನಾಕ್ಸ್ ಎ ಪ್ರೊಡಾಕ್ಸ್
ಹಾಗೂ ಮೇ|| ಬುರುಕ ಗ್ಯಾಸಸ್ಗಳಿಂದ ಕಚ್ಚಾ ಮಾಲು ಪೂರೈಕೆಯಾಗುತ್ತದೆ ಆದರೆ ಹಾಲಿ ಅದು ನಿಂತುಹೊಗಿದೆ ಹಾಗಾಗಿ ಉತ್ಪಾದನೆ ಸ್ಥಗಿತಗೊಂಡಿದೆ
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹಾಗೂ ಮರಣದ ಪ್ರಮಾಣದ ಹೆಚ್ಚಾಗಿರುವುದರಿಂದ ಮುಂದಿನ
ದಿನಗಳಲ್ಲಿ ಆಮ್ಲಜನಕ ಬೇಡಿಕೆ ಹೆಚ್ಚಾಗಬಹುದಾದ ಕಾರಣದಿಂದ ಅಲ್ಲದೆ ಪಕ್ಕದ ಜಿಲ್ಲೆ ಚಿಕ್ಕಮಗಳೂರು
ಜಿಲ್ಲೆಗೆ ಹಾಸನ ಜಿಲ್ಲೆಯಿಂದಲೇ ಆಮ್ಲಜನಕ ಪೂರೈಕೆ ಮಾಡುವುದು ಅವಶ್ಯಕವಾಗಿರುವುದರಿಂದ
ಎರಡು ಸಂಸ್ಥೆಗಳಿಗೆ ಪ್ರತಿದಿನ ಅವಶ್ಯಕವಿರುವ 19 ಟನ್ ಲಿಕ್ವಿಡ್ ಆಕ್ಸಜನ್ ಪೂರೈಸುವಂತೆ ಧಿಕಾರಿ
ಆರ್.ಗಿರೀಶ್ ಅವರು ಮನವಿ ಮಾಡಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಯವರು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರ
ಗಮನಕ್ಕೂ ತಂದಿದ್ದು ಸಚಿವರಿಂದ ಸಂಬಂಧ ಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ
ನಡೆಸಿದ್ದಾರೆ ಇದು ಶೀಘ್ರವಾಗಿ ಫಲ ನೀಡುವ ನೀರಿಕ್ಷೆಯಿದೆ ಹಾಗದಲ್ಲಿ ಇದರಿಂದ ಆಸ್ಪತ್ರೆಗೆ ಆಮ್ಲಜನಕ
ಪೂರೈಕೆ ವಿಷಯಕ್ಕೆ ಸಂಭದಿಸಿದಂತೆ ಎಲ್ಲಾ ರೀತಿಯ ಪರಿಸ್ಥಿಯನ್ನು ನಿಭಾಯಿಸಲು ಜಿಲ್ಲೆ ಸಶಕ್ತವಾಗಲಿದೆ.
Tags
ಹಾಸನ