ಬೇಲೂರು ತಾ.ಅಗ್ಗಡಲು ಗ್ರಾಮದಲ್ಲಿ 35 ಪ್ರಕರಣ ಗ್ರಾಮದಲ್ಲೆ ಎಲ್ಲರಿಗೂ ಚಿಕಿತ್ಸೆಗೆ ವ್ಯವಸ್ಥೆ

 


ಬೇಲೂರು:  ತಾಲ್ಲೂಕಿನ ಕಳ್ಳೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅಗ್ಗಡಲು ಗ್ರಾಮ ಒಂದರಲ್ಲೆ 35 ಕೊರೊನಾ ಪಾಸೀಟೀವ್ ಪ್ರಕರಣಗಳು ವರದಿಯಾಗಿವೆ.

ಇದರಿಂದ ಆತಂಕಗೊಂಡಿರುವ ತಾಲ್ಲೂಕು ಆಡಳಿತ ಇಡಿ

ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ. ಕಂಟೈನ್‍ಮೆಂಟ್ ಜೋನ್ಎಂದು ಘೋಷಿಸಲಾಗಿದ್ದು ಸೋಂಕು ತಗುಲಿದವರಿಗೆ ಅವರ ಮನೆಯಲ್ಲಿಯೆ ಚಿಕಿತ್ಸೆಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ.


ಇದೀಗ ಗ್ರಾಮದಿಂದ ಯಾರೂ ಹೊರಗಡೆ ಬರುವಂತಿಲ್ಲ,

ಗ್ರಾಮಕ್ಕೆ ಹೊರಗಡೆಯಿಂದ ಯಾರೂ ಪ್ರವೇಶಿಸುವಂತಿಲ್ಲ.

ಗ್ರಾಮಕ್ಕೆ ತಹಸೀಲ್ದಾರ್ ಎನ್.ವಿ.ನಟೇಶ್ ಮಾತನಾಡಿ, ಕೊರೊನಾ

ಪ್ರಕರಣ ಹೆಚ್ಚಳವಾಗುತ್ತಿದ್ದು ಎಲ್ಲಾ ರೀತಿಯ ಮುಂಜಾಗ್ರತಾ

ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮದಲ್ಲಿ ಅನಾವಶ್ಯಕವಾಗಿ

ತಿರುಗಾಡುತ್ತಿರುವುದು ಗಮನಕ್ಕೆ ಬಂದಿದ್ದು ಅಂತಹವರ

ಮೇಲೆ ಕ್ರಮ ಕೈಗೊಳ್ಳಲಾಗುವುದು. ಒಬ್ಬರಿಂದ ಒಬ್ಬರಿಗೆ

ಹರಡುವ ಕೊರೊನಾ ಇದಾಗಿರುವುದರಿಂದ ಮನೆಯಿಂದ

ಹೊರಬಾರದಂತೆ ಸಲಹೆ ನೀಡಿದರು.

ಈ ಸಂದರ್ಭ ತಾ.ಪಂ. ಇಒ ರವಿಕುಮಾರ್, ಸಿಪಿಐ ಶ್ರೀಕಾಂತ್, ಎಇ ಅರುಣಕುಮಾರ್, ಪಿಡಿಒ ಕುಮಾರ್ ಭೇಟಿ ನೀಡಿದ್ದರು.




ಬೇಲೂರು ತಾಲ್ಲೂಕು ಅಗ್ಗಡಲು ಗ್ರಾಮಕ್ಕೆ ತಹಸೀಲ್ದಾರ್

ಇನ್ನಿತರ ಅಧಿಕಾರಿಗಳು ಭೇಟಿ ನೀಡಿರುವುದು

Post a Comment

Previous Post Next Post