ಹೆಚ್ಚುವರಿ ಕಟ್ಟಡ ಉದ್ಘಾಟನೆ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ

ಹಾಸನ ಮೇ.15:- ಅರಸೀಕೆರೆಯಲ್ಲಿ ಕೋವಿಡ್ ಚಿಕಿತ್ಸೆಗೆ ಸಿದ್ದಪಡಿಸಿರುವ ಹೆಚ್ಚುವರಿ ಕಟ್ಟಡವನ್ನು ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ಉದ್ಘಾಟಿಸಿ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.



ನಂತರ ಮಾತನಾಡಿದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಸಚಿವರು ಮನೆಯಲ್ಲಿ ಐಸೊಲೇಷನ್‌ಗೆ ಸೌಲಭ್ಯ ಇಲ್ಲದವರನನ್ನು ಕೊವಿಡ್ ಕೇರ್ ಕೇಂದ್ರಕ್ಕೆ ಸೇರಿಸಿ ಅಧಿಕಾರಿಗಳು ಜನ ಪ್ರತಿನಿಧಿಗಳು ಸಂಘ ಸಂಸ್ಥೆಗಳು ಒಂದಾಗಿ ಕೆಲಸ ಮಾಡಬೇಕು.

ಸರ್ಕಾರ ಬಡವರಿಗೆ ಹೆಚ್ಚುವರಿ ಪಡಿತರ ವಿತರಣೆಗೆ ಕ್ರಮ ವಹಸಿದೆ.ಕೊವಿಡ್ ಸೊಂಕಿತರಿಗೆ ಔಷಧಿಕೊರತೆಯಾಗಬಾರದು ನಾನೂ ವೈಯಕ್ತಿಕ ವಾಗಿಯೂ ಔಷದಿ ಒದಗಿಸುವುದಾಗಿ ಸಚಿವರು ಹೇಳಿದರು

ಹಳ್ಳಿಗಳಿಗೆ ವಿಶೇಷ ಗಮನಹರಿಸಬೇಕಿದೆ ತಹಶಿಲ್ದಾರರು ,ವೈದ್ಯಾಧಿಕಾರಿಗಳು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಳ್ಳಿಗಳಲ್ಲಿನ ಸೊಂಕಿನ ನಿಯಂತ್ರಣದ ಬಗ್ಗೆ ಗಮನ ಹರಿಸಬೇಕಿದೆ ಎಂದರು 

 


ಇದೊಂದು ಸವಾಲು ಅದನ್ನು ಧೈರ್ಯವಾಗಿ ಎದುರಿಸಬೇಕು ಎಂದು ಸಚಿವರು ಕರೆ ನೀಡಿದರು.


ಶಾಸಕರಾದ ಶಿವಲಿಂಗೇಗೌಡ ಮಾತನಾಡಿ ಆಸ್ಪತ್ರೆ ಕಟ್ಟಡಕ್ಕಾಗಿ ಮುಖ್ಯಮಂತ್ರಿಯವರಿಗೆ ಒತ್ತಡ ನೀಡಿ 2 ಕೋಟಿ ಮುಖ್ಯ ಮಂತ್ರಿ ಮಂಜೂರು ಮಾಡಿ ಕೊಟ್ಟಿದ್ದರು. ಲ್ಯಾಂಡ್ ಆರ್ಮಿ ಮೂಲಕ ಕಟ್ಟಡದ ನವೀಕರಣ ಮಾಡಲಾಗಿದೆ .ಎಸ್.ಡಿ ಅರ್ ಎಫ್ ನಿಧಿಯಿಂದ 20 ಲಕ್ಷ ಸೇರಿಸಿ ಕಟ್ಟಡ ನವೀಕರಿಸಿ ಕೋವಿಡ್ ಸೊಂಕಿತರ ಚಿಕಿತ್ಸೆಗೆ ಬಳಸಲಾಗಿದೆ. ಅತ್ಯುತ್ತಮವಾಗಿ ವ್ಯವಸ್ಥೆ ಮಾಡಲಾಗಿದೆ ಎಂದರು.



ಇತರರಿಗೂ ಮಾದರಿ ಎನಿಸುವಷ್ಟುÀ ಕಚ್ಚುಕಟ್ಟಾದ ವ್ಯವ್ಯಸ್ಥೆ ಮಾಡಿ ಸೌಲಭ್ಯ ಒದಗಸಿಲಾಗುತ್ತಿದೆ.ಇದರಿಂದ ಅರಸೀಕೆರೆ ತಾಲ್ಲೂಕಿನ ಜನತೆಗೆ ಇಲ್ಲೇ ಉತ್ತಮ ಚಿಕಿತ್ಸೆ ದೊರೆತಂತಾಗಿದೆ ಎಂದರು.


ಒಳ್ಳೆಯ ಕೆಲಸ ಮಾಡುವವರಿಗೆ ಅಭಿನಂದನೆ ಹೇಳಬೇಕು, ತಾಲ್ಲೂಕು ಆಸ್ಪತ್ರೆ ಹೈಟೆಕ್ ಆಗಿದೆ ಅದರೆ ವೈದ್ಯರು ಹಾಗೂ ಸಿಬ್ಬಂದಿ ಭರ್ತಿಯಾಗಬೇಕು ಆಗ ಮಾತ್ರ ವ್ಯವಸ್ಥೆ ಸದ್ಬಳಕೆ ಸಾಧ್ಯ ಎಂದರು.


ಕೋವಿಡ್ ಸೊಂಕಿತರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಿದರೆ ಮಾತ್ರ ಕೊರೋನಾ ಶೀಘ್ರ ನಿಯಂತ್ರಣ ಸಾಧ್ಯ.ಗ್ರಾಮೀಣ ಪ್ರದೇಶದಲ್ಲಿ ಹೋಂ ಐಸೊಲೇಶನ್ ಗೆ ಅಗತ್ಯ ಸೌಲಭ್ಯ ಇಲ್ಲ ಹಾಗಾಗಿ ಮನೆ ಮಂದಿಗೆಲ್ಲಾ ಹರಡುತ್ತದೆ ಎಂದು ಶಾಸಕರು ಹೇಳಿದರು.


ಹೆಚ್ಚಿನ ಕಡೆಗಳಲ್ಲಿ ಕೋವಿದ್ ಕೇರ್ ಕೇಂದ್ರ ಪಾರಂಭಿಸಿ ಹೋಮ್ ಐಸೋಲೇಷನ್ ಕಷ್ಟವಾದವರಿಗೆ ಕರೆ ತಂದು ಚಿಕಿತ್ಸೆ ನೀಡಬೇಕು ಎಂದು ಶಾಸಕರು ಹೇಳಿದರು.


 ಎಲ್ಲಾ ವೈದ್ಯರು ಕೊವಿಡ್ ಸೋಂಕಿತರ ರೋಂಗೆ ಪ್ರತಿದಿನ ಬೆಳಿಗ್ಗೆ ಸಂಜೆ ತೆರಳಿ ಅರೋಗ್ಯ ವಿವಾರಿಸಬೇಕು.


ಅರಸೀಕೆರೆ ಆಸ್ಪತ್ರೆಯಲ್ಲಿಂದು ಇರುವ ಒಂಬತ್ತು ವೈದ್ಯರಲ್ಲಿ ಒಬ್ಬರು ವೈದರು ಮಾತ್ರ ಪಿ.ಪಿ ಕಿಟ್ ಹಾಕಿ ಸೊಂಕಿತರ ತಪಾಸಣೆಗೆ ತೆರಳುತ್ತಿದ್ದಾರೆ ಉಳಿದವರೂ ಹೋಗಬೇಕು ತಮ್ಮ ಸೇವಾ ಪರತೆ ಪ್ರದರ್ಶನ ಮಾಡಬೇಕು ಎಂದು ಶಾಸಕರು ಹೇಳಿದರು.


ವಿಧಾನ ಪರಿಷತ್ ಸದಸ್ಯರಾದ ಗೋಪಾಲಸ್ವಾಮಿ ಅವರು ಮಾತನಾಡಿ ಪರಸ್ಪರ ಸಹಕಾರದೊಂದಿಗೆ ಒಂದಾಗಿ ಕೆಲಸ ಮಾಡಿ ಎಂದು ಹೇಳಿದರು.

 ಶಾಸಕರಾದ ಕೆ.ಎಸ್.ಲಿಂಗೇಶ್ ಅವರು ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಿದ್ದು, ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಿದೆ ಕೋವಿಡ್ ಲಸಿಕೆ ಎಲ್ಲರಿಗೂ ಸಕಾಲದಲ್ಲಿ ಸಿಗÀಬೇಕು ಹಾಗೂ ವಿತರಣೆ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದರು.

 ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ ಡಾ|| ಸತೀಶ್, ನಗರ ಸಭೆ ಅದ್ಯಕ್ಷ ಗಿರೀಶ್, ನಗಾರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸಾದ್, ತಹಸೀಲ್ದಾರ್ ಸಂತೋಷ್, ಉಪಾಧ್ಯಾಕ್ಷರಾದ ಬಸವರಾಜ್ ಮತ್ತಿತರರು ಹಾಜರಿದ್ದರು.

Post a Comment

Previous Post Next Post