ಚನ್ನರಾಯಪಟ್ಟಣ: ಆಮ್ಲಜನಕದ ಕೊರತೆಯಿಂದ ಜನತೆ ಬಳಲುತ್ತಿರುವುದನ್ನು ನೋಡಿ ನಮ್ಮ ತಾಲ್ಲೂಕಿನ ಜನತೆ ಬಳಲಬಾರದೆಂಬ ಉದ್ದೇಶದಿಂದ ಈ ಕಾರ್ಯ ಮಾಡುತ್ತಿದ್ದೇನೆ ಎಂದು ಮನೋಹರ್ ಸೇವಾ ಪ್ರತಿಷ್ಠಾನ ಅಧ್ಯಕ್ಷ ಮನೋಹರ್ ಕುಂಬೇನಹಳ್ಳಿ ತಿಳಿಸಿದರು.
ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಅವರು ದೇಶದಲ್ಲಿ ಕೊರೊನಾದ 2 ನೇ ಅಲೆಯಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಜನತೆ ಉಸಿರಾಟದ ತೊಂದರೆಯಿಂದ ಬಳಲುತ್ತಿರುವುದನ್ನು ನೋಡಿದ ಮೇಲೆ ತುಂಬಾ ನೋವಾಗಿದೆ. ಇದನ್ನು ಮನಗೊಂಡು ನಮ್ಮ ತಾಲ್ಲೂಕಿನ ಜನತೆ ಆಮ್ಲಜನಕ ತೊಂದರೆಯಿಂದ ಪರದಾಡಬಾರದೆಂಬ ಉದ್ದೇಶದಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ 50 ಆಮ್ಲಜನಕ ಸಿಲಿಂಡರ್ ಗಳನ್ನು ನೀಡಲು ತೀರ್ಮಾನ ಮಾಡಿ ನಮ್ಮ ಪ್ರತಿಷ್ಠಾನದ ವತಿಯಿಂದ ಈ ಕಾರ್ಯ ಮಾಡುತ್ತಿದ್ದೇನೆ.
ಜನತೆ ಕೊರೊನಾ ವಿಚಾರದಲ್ಲಿ ತಾತ್ಸಾರ ಮಾಡದೇ ಮಾಸ್ಕ್ ಬಳಸಿ, ಅಂತರ ಕಾಪಾಡಿಕೊಂಡು ನಿಮ್ಮಗಳ ಜೀವವನ್ನು ಕಾಪಾಡಿಕೊಳ್ಳಿ. ತುರ್ತು ಕೆಲಸವಿದ್ದರೇ ಮಾತ್ರ ಮನೆಯಿಂದ ಹೊರ ಬನ್ನಿ ಇಲ್ಲ ನಿಮ್ಮ ಕುಟುಂಬದವರ ಜೊತೆ ಇದ್ದು ನಿಮ್ಮ ಕುಟುಂಬವನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದರು
Tags
ಚನ್ನರಾಯಪಟ್ಟಣ