5000 ಹಣ, ಅಗತ್ಯ ವಸ್ತುಗಳನ್ನು ಕೊಟ್ಟು ಲಾಕ್ ಡೌನ್ ಮಾಡಿ, ಚಿಕಿತ್ಸೆ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳಿಂದ ಲೂಟಿ, ಶವ ಡಿಸಿ ಕಛೇರಿ ಮುಂದೆ ಇಡ್ತಿವಿ ಹೆಚ್.ಡಿ. ರೇವಣ್ಣ

ಹಾಸನ: ಲಾಕ್ ಡೌನ್ ನಿರ್ಧಾರ ಕೈಗೊಳ್ಳುವ ಮೊದಲು 5 ಸಾವಿರ ಹಣ, 10 ಕೆಜಿ ಅಕ್ಕಿ ಹಾಗೂ ಅಗತ್ಯ ವಸ್ತುಗಳನ್ನು ಕೊಡಬೇಕು. ಇನ್ನು ಚಿಕಿತ್ಸೆ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಲೂಟಿ ಮಾಡುತ್ತಿದ್ದು, ಮುಂದೆನೂ ಇದೆ ರೀತಿ ಮುಂದುವರೆದರೇ ಶವ ತಂದು ಜಿಲ್ಲಾಧಿಕಾರಿ ಕಛೇರಿ ಮುಂದೆ ಇಡಬೇಕಾಗುತ್ತದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಎಚ್ಚರಿಸಿದರು.



 ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕಾಏಕಿ ಲಾಕ್ ಡೌನ್ ಮಾಡಿದರೇ ಬಡವರು ಗತಿ ಏನು? ಅವರ ಪರಿಸ್ಥಿತಿ ಏನಾಗುತ್ತದೆ ಬಗ್ಗೆ ಯೋಚಿಸಿದ್ದಾರಾ...? ಕೂಡಲೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ 5000 ಹಣ ಮತ್ತು ಹತ್ತು ಕೆಜಿ ಅಕ್ಕಿ ಸೇರಿ ಅಗತ್ಯ ವಸ್ತುಗಳನ್ನು ಕೊಟ್ಟು ಲಾಕ್ ಡೌನ್ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಜಿಲ್ಲೆಯಲ್ಲಿ ಯಾವುದೇ ಮೆಡಿಸಿನ್ ಸಿಗುತ್ತಿಲ್ಲ. ಇಲ್ಲಿ 

ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ. ಇನ್ನು ಚಿಕಿತ್ಸೆಯ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಲೂಟಿ ಮಾಡುತ್ತಿದೆ. ಇದೇ ರೀತಿ ಮರುಕಳಿಸಿದರೇ ಶವ ತಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಇಡಲಾಗುವುದು. ಮುಂದೆ ಅದನ್ನು ನೀವೇ ಅಂತ್ಯಸAಸ್ಕಾರ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. 

 ಮುಸ್ಲಿಂ ಸಮುದಾಯದ ಬಗ್ಗೆ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡುತ್ತಾ, ಒಬ್ಬ ಮಂತ್ರಿಯಾಗಿ ಹಾಗೆ ಹೇಳಿಕೆ ನೀಡಿರುವುದು ತಪ್ಪು. ಹಿಂದೂ ಮುಸ್ಲಿಂ ಎಲ್ಲರಿಗೂ ಸಮಾನವಾದ ಅವಕಾಶವಿದೆ. ಎಲ್ಲ ಸಮಾಜವನ್ನು ಕಾಪಾಡುವುದು ಆಯಾ ಸರ್ಕಾರಗಳ ಜವಾಬ್ದಾರಿ. ಸಂವಿಧಾನದ ಮೂಲಕ ಪ್ರಮಾಣವಚನ ಸ್ವೀಕರಿಸಿದ ಮೇಲೆ ಹೀಗೆ ಮಾತಾಡಿರುವುದು ತಪ್ಪೆಂದರು. ಜನಗಣಮನ ರಾಷ್ಟçಗೀತೆಯಲ್ಲಿ ಏನು ಹೇಳಿದ್ದಾರೆ ಎಂಬುದು ನಮ್ಮ ಪ್ರಶ್ನೆ ಎಂದು ಗುಡುಗಿದರು. 

 ಹಾಸನ ಜಿಲ್ಲೆಯಲ್ಲಿ ಶುಕ್ರವಾರದಂದು 2540 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಒಂದೆ ದಿನದಲ್ಲಿ 20 ಜನ ಸಾವನ್ನಪ್ಪಿದ್ದಾರೆ. ನಿನ್ನೆ ಬೋರೇಗೌಡ, ಮೊನ್ನೆ ಸಂತೋಷ್ ಎಂಬುವವರು ಆಕ್ಸಿಜನ್ ಇಲ್ಲದೇ ಸಂಜೀವಿನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು. ಹಾಸನ ಜಿಲ್ಲೆಗೆ ಒಂದು ಸಾವಿರ ರೆಮಿಡಿಸಿವಿಯರ್ ಇಂಜೆಕ್ಷನ್ ಬೇಕಾಗಿದೆ. ಜಿಲ್ಲೆಯಲ್ಲಿ 200 ಆಕ್ಸಿಜನ್ ಸಿಲಿಂಡರ್ ಕೊರತೆ ಇದೆ ಅಂತಾ ಹೇಳ್ತಾರೆ

ಅದು ನಾಳೆಯಷ್ಟರೊಳಗೆ 400 ಆಗಬಹುದು. ಆದರೇ ಕೆಲವು ರಾಜಕೀಯ ಮುಖಂಡರು ರೆಮಿಡಿಸಿವಿಯರ್ ಮಾರಾಟ ಮಾಡಿಸುತ್ತಿದ್ದಾರೆ ಜೊತೆಗೆ ಕಾಳಸಂತೆಯಲ್ಲಿಯೂ ಒಂದಕ್ಕೆ 18 ಸಾವಿರದಂತೆ ಮಾರಾಟ ಮಾಡಲಾಗುತ್ತಿದೆ ಎಮದು ಗಂಭೀರವಾಗಿ ಆರೋಪಿಸಿ ಈ ದಂಧೆಯ ಬಗ್ಗೆ ಕ್ರಮಕೈಗೊಳ್ಳಬೇಕಾಗಿದೆ ಎಂದರು. 

ಯಾರೋ ಹೇಳಿದ್ದಾರೆ ಅಂತಾ ನಿನ್ನೆ 40 ಸಿಲಿಂಡರ್ ಸ್ಪರ್ಶ್ ಆಸ್ಪತ್ರೆಗೆ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತಿದ್ದು, ಎರಡೂ ರಾಷ್ಟಿçÃಯ ಪಕ್ಷಗಳು ರಾಜಕೀಯ ಮಾಡುತ್ತಿದ್ದಾವೆ. ಚಾಮರಾಜನಗರ ಕೇಸ್ ಮುಚ್ಚಿ ಹಾಕೋಕೆ, ಮುಸಲ್ಮಾನರನ್ನು ಟಾರ್ಗೆಟ್ ಮಾಡಿದ್ರು ಅಂತಿದ್ದಾರೆ. ಜೆಡಿಎಸ್ ಆಡಳಿತದಲ್ಲಿ ದೇವೇಗೌಡ್ರ ಮುಸಲ್ಮಾನರಿಗೆ ಮೀಸಲಾತಿ ಕೊಡಿಸಿದ್ದರು. ಮುಸಲ್ಮಾನರಿಗೆ ಬಿಜೆಪಿ ಕೊಡುಗೆ ಏನು? ನಾಚಿಕೆ ಆಗಬೇಕು ನಿಮಗೆ ಎಂದ ಅವರು, ನಿಮ್ಮ ರಾಜಕೀಯವನ್ನು ಆಮೇಲೆ ಇಟ್ಕೊಳ್ಳಿ. ಮೊದಲು ಜನರ ಕಷ್ಟಕ್ಕೆ ಸ್ಪಂದಿಸಿ, ಈ ಸಮಯದಲ್ಲಿ ರಾಜಕೀಯ ಬೇಕಾಗಿತ್ತಾ ಎಂದು ಪ್ರಶ್ನಿಸಿದರು. 

 ಕೇಂದ್ರದಿAದ ಆಕ್ಸಿಜನ್ ತರಿಸೋದಕ್ಕೆ ಆಗ್ತಿಲ್ಲ. ರಾಜ್ಯದ 26 ಜನ ಎಂಪಿಗಳು ಏನೂ ಮಾಡ್ತಿಲ್ಲ.

ಏಳು ಅಂದ್ರೆ ಹೇಳ್ತಾರೆ, ಕೂರು ಅಂದ್ರೆ ಕೂರ್ತಾರೆ. ಇನ್ನು ಮುಖ್ಯಮಂತ್ರಿಗಳು ನಮ್ಮ ಬಳಿ ದುಡ್ಡಿಲ್ಲ ಪಾಪರ್ ಚೀಟಿ ಆಗಿದ್ದೇವೆ ಅಂತಾ ಹೇಳಿಬಿಡಲಿ ಎಂದು ಸವಾಲು ಹಾಕಿದರು.

Post a Comment

Previous Post Next Post