ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ನೂಕು ನುಗ್ಗಲು, ಸಾಮಾಜಿಕ ಅಂತರ ಟುಸ್

ಹಾಸನ: ನಗರದ ಅನೇಕ ಕಡೆ ಆರೋಗ್ಯ ಕೇಂದ್ರಗಳಲ್ಲಿ ಕೊರೋನಾ ಲಸಿಕೆ ಕೊಡಲಾಗುತ್ತಿದ್ದು, ಆದರೇ ಸಾರ್ವಜನಿಕರು ಸಾಮಾಜಿಕ ಅಂತರ ಮರೆತು ನೂಕು ನುಗ್ಗಲಿನಲ್ಲಿ ನಿಂತಿರುವುದನ್ನು ನೋಡಿದರೇ ಇದೆನೂ ಸೋಂಕು ಹರಡುವ ಕಂಪನಿ ಎಂಬAತೆ ಲಸಿಕಾ ಆರೋಗ್ಯ ಕೇಂದ್ರಗಳು ಮಾರ್ಪಟ್ಟಿದೆ.



 ದಿನೆ ದಿನೆ ಕೊರೋನಾ ಸೋಂಕು ಹೆಚ್ಚು ಹರಡುತ್ತಿರುವುದರಿಂದ ಸರಕಾರವು ಕೊರೋನಾ ಲಸಿಕೆಯನ್ನು ನೀಡಿದೆ. ಹಾಸನ ನಗರದ ಹಳೆ ಕೋರ್ಟ್ ಆವರಣ, ಬೀರನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕೃಷ್ಣ ಆಸ್ಪತ್ರೆ ಸೇರಿದಂತೆ ಇತರೆ ಭಾಗಗಳಲ್ಲಿ ಕೊರೋನಾ ಲಸಿಕೆಯನ್ನು ಹಾಕಲಾಗುತ್ತಿದೆ. ದಿನಕ್ಕೆ 150 ರಿಂದ 200 ಟೋಕನ್ ಕೊಟ್ಟು ಲಸಿಕೆಗೆ ಆಹ್ವಾನಿಸಲಾಗಿದೆ. ಲಸಿಕೆ ಹಾಕುವವರು ಬೆಳಿಗ್ಗೆ 9 ರಿಂದ 10 ಗಂಟೆಗೆ ಬರುವುದು ತಿಳಿದಿದ್ದರೂ ಬೆಳಿಗ್ಗೆ 6 ರಿಂದಲೆ ಜನರು ಆರೋಗ್ಯ ಕೇಂದ್ರದ ಮುಂದೆ ಜಮಾಯಿಸುತ್ತಾರೆ. ಆದರೇ ಸಾಮಾಜಿಕ ಅಂತರ ಎಂಬುದು ಇಲ್ಲಿ ಇಲ್ಲವೇ ಇಲ್ಲ. ಸಾಮಾಜಿಕ ಅಂತರದಲ್ಲಿ ದೂರ ನಿಲ್ಲುವಂತೆ ಇನ್ನು ಪೊಲೀಸರು ಅದೆಷ್ಟೊ ಸಾರಿ ಹೇಳಿದರೂ ಕಿವಿಗೆ ಹಾಕಿಕೊಳ್ಳದೆ ನೂಕು ನುಗ್ಗಲಿನಲ್ಲಿ ಸಾರ್ವನಿಕರು ನಿಂತಿರುವುದನ್ನು ನೋಡಿದರೇ ಕೊರೋನಾ ಪಾಸಿಟಿವ್ ಹರಡುವ ಕೇಂದ್ರವೆ ಎಂಬAತೆ ಗೋಚರಿಸುತ್ತದೆ. ಪ್ರತಿ ದಿನ ಹಾಸನ ಜಿಲ್ಲೆ ಒಂದರಲ್ಲೆ ಸಾವಿರಾರು ಜನರಿಗೆ ಕೊರೋನಾ ಪಾಸಿಟಿವ್ ಬಂದು ಅನೇಕರು ಸಾವನಪ್ಪುತ್ತಿದ್ದರೂ ಜನರು ಇನ್ನು ಎಚ್ಚೆತ್ತುಕೊಳ್ಳದೇ ಇರುವುದು ಒಂದು ದುರಂತವೆ ಸರಿ...

Post a Comment

Previous Post Next Post