ಚಿಲ್ಲರೆ ವ್ಯಕ್ತಿ ಶೌಚಾಲಯದಲ್ಲೆ ಕಳ್ಳತನ

ಹಾಸನ: ಹಣಕ್ಕಾಗಿ ಏನಾದರೂ ಮಾಡುತ್ತಾರೆ ಎಂಬುದಕ್ಕೆ ಇಲ್ಲೊರ್ವ ಚಿಲ್ಲರೆ ವ್ಯಕ್ತಿ ಶೌಚಾಲಯದಲ್ಲಿ ಸಂಗ್ರಹವಾದ ಚಿಲ್ಲರೆ ಕಾಸಿಗೆ ಕೈಹಾಕಲು ಹೋಗಿ ಸಿಕ್ಕಿ ಬಿದ್ದು, ಅಲ್ಲಿಂದ ಪರಾರಿಯಾದ ಘಟನೆ ಗುರುವಾರದಂದು ಬೆಳಿಗ್ಗೆ ನಡೆದಿದೆ.


       ನಗರದ ಹಳೆ ಮಟನ್ ಮಾರ್ಕೇಟ್ ರಸ್ತೆ, ಡಬಲ್ ಟ್ಯಾಂಕ್ ಬಳಿ ಇರುವ ಶೌಚಾಲಯಕ್ಕೆ ಬೆಳಿಗ್ಗೆ ಹಳೆಬಟ್ಟೆ ಹಾಕಿಕೊಂಡಿದ್ದ, ಚಿಂದಿ ಹಾಯುವನಾಗೆ ಕಾಣುತ್ತಿದ್ದ ವ್ಯಕ್ತಿ ಓರ್ವ ಸಮಯ ಕಾದು ಒಳ ಪ್ರವೇಶ ಮಾಡಿ ಕ್ಯಾಸ್ ಇರುವ ಟೇಬಲ್ ಗೆ ಕೈಹಾಕಿ ಕದಿಯುವಾಗ ಸಾರ್ವಜನಿಕರು ನೋಡಿದ್ದು, ಈ ವೇಳೆ ಮಾರ್ಷಲ್ ತಂಡದ ಮಹದೇವ್ ಎಂಬುವರು ಇದನ್ನು ಗಮನಿಸಿದ್ದಾರೆ. ತಕ್ಷಣ ಶೌಚಾಲಯದ ಬಳಿ ಹೋಗಿ ಆತನನ್ನು ವಿಚಾರಿಸುವ ವೇಳೆ ಆತ ಅಲ್ಲಿಂದ ಪರಾರಿಯಾದನು. ಇತನು ಮಾಸ್ಕ್ ಕೂಡ ಹಾಕದೆ ಕಳ್ಳತನ ಮಾಡಲು ಯತ್ನಿಸಿದ್ದನು.


Post a Comment

Previous Post Next Post