ಕೋವಿಡ್ ಕೇರ್ ಕಾಲ್ ಸೆಂಟರ್ ತೆರೆದು ಉತ್ತಮ ಚಿಕಿತ್ಸೆ

ಹಾಸನ: ಔಷಧಿ ತಲುಪದೆ ಇರುವ ಸ್ಥಳಗಳಿಗೆ ಖುದ್ಧಾಗಿ ಸರಬರಾಜು ಮಾಡಲು ಕೋವಿಡ್ ಕೇರ್ ಕಾಲ್ ಸೆಂಟರ್ ತೆರೆದು ಉತ್ತಮ ಚಿಕಿತ್ಸೆ ನೀಡಲು ಆತ್ಮಸ್ಥೆöÊರ್ಯ ಸಂಜೀವಿನಿ ಎಂಬ ಕಾರ್ಯಪಡೆಯನ್ನು ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಕೆಡಿಪಿ ಮಾಜಿ ಸದಸ್ಯರಾದ ಜಿ. ದೇವರಾಜೇಗೌಡ ತಿಳಿಸಿದರು.


      ಪತ್ರಿಕಾಗೋಷ್ಠಿಯಲ್ಲಿ ಗುರುವಾರದಂದು ಮಾತನಾಡಿ, ಹೊಳೇನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಪ್ರತಿಯೊಂದು ಗ್ರಾಮಗಳಲ್ಲಿ ಇರುವ ಕೋವಿಡ್ ಪಾಸಿಟೀವ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಯೋಗ ಕ್ಷೇಮ ನೋಡಿಕೊಳ್ಳಲು ಹಾಗೂ ಅವರನ್ನು ಸಂಪರ್ಕ ಮಾಡಿ ಅವರಿಗೆ ಆತ್ಮ ಸೈರ್ಯ ತುಂಬಿ ಅಗತ್ಯವಿರುವ ಔಷಧಿ ಪೂರೈಕೆ ಮಾಡಲು ಸಂಭAದಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಡಳಿತಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ಔಷಧಿ ತಲಪದೇ ಇರುವ ಸ್ಥಳಗಳಿಗೆ ನಾವೇ ಖುದ್ದಾಗಿ ಔಷಧಿ ಸರಬರಾಜು ಮಾಡಲು ಕೋವಿಡ್ ಕೇರ್ ಕಾಲ್ ಸೆಂಟರ್ ತೆರೆದು ಉತ್ತಮ ಚಿಕಿತ್ಸೆ ನೀಡಲು ಆತ್ಮ ಸೈರ್ಯ ಸಂಜೀವಿನಿ ಎಂಬ ಕಾರ್ಯಪಡೆಯನ್ನು ಸ್ಥಾಪಿಸಲಾಗುತ್ತಿದೆ ಎಂದರು. ಇದರ ಉದ್ದೇಶ ಪ್ರತಿಯೊಂದು ಪಂಚಾಯ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಯಾ ಗ್ರಾಮಗಳಲ್ಲಿ ಆಯ್ಕೆಯಾಗಿರುವ ಸದಸ್ಯರುಗಳು ಅವರ ಸಿಬ್ಬಂದಿಗಳೊAದಿಗೆ ಸೇರಿ ಪ್ರತಿ ಹಳ್ಳಿಯಲ್ಲಿ ಬೆಳಿಗ್ಗೆ ೧೦ ರಿಂದ ಮದ್ಯಾಹ್ನ ೧ ಗಂಟೆಯವರಗೆ ಇದ್ದು ಕೋವಿಡ್ ರೋಗಿಗಳನ್ನು ಪತ್ತೆ ಹಚ್ಚಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಆಯಾ ತಾಲ್ಲೂಕು ಆಡಳಿತದೊಂದಿಗೆ ಸೇರಿ ಕೆಲಸ ತಪ್ಪಿದರೆ ಅವರ ವಿರುದ್ಧ ನಿರ್ದಾಕ್ಷಣ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರದ ಗಮನ ಸೆಳೆಯಲಾಗುವುದು. ಖಡ್ಡಾಯವಾಗಿ ಪ್ರತಿ ಹಳ್ಳಿಗಳಲ್ಲಿ ಇರುವ ಮನೆಗಳು, ಚರಂಡಿಗಳು ಹಾಗೂ ಮನೆಗಳ ಗಲ್ಲಿಗಲ್ಲಿಗಳಿಗೆ ೩ ದಿವಸಗಳಿಗೆ ಒಂದು ಬಾರಿ ಸ್ಕಾನಟೈಸರ್ ಅಥವಾ ಔಷದಗಳನ್ನು ಸಿಂಪಡಿಸಲು ಸಂಭAದಪಟ್ಟ ಇಲಾಖೆಗಳಿಂದ ಕೆಲಸ ಪ್ರಾರಂಭಿಸುವುದು. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಖಡ್ಡಾಯವಾಗಿ ಕನಿಷ್ಠ ೧೦ ಹಾಸಿಗೆ ಹಾಗೂ ಆಮ್ಲಜನಕವಿರುವ ಕೋವಿಡ್ ಕೇರ್ ಸೆಂಟರ್ ಅನ್ನು ತೆರೆಯಲು ಮತ್ತು ಆ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಲು ಸ್ವಯಂ ಸೇವಕರ ಸಹಕಾರವನ್ನು ಪಡೆದು ಸಾವು ನೋವುಗಳನ್ನು ತಪ್ಪಿಸುವುದು ನಮ್ಮ ಉದ್ದೇಶವಾಗಿದೆ. 

       ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳ ನಾಯಕರು ಹಾಗೂ ಪ್ರಮುಖರ ಸಹಕಾರನ್ನು ಪಡೆದು ಪ್ರತಿ ಗ್ರಾಮಗಳಲ್ಲಿ ಕೋವಿಡ್ ಚಿಕೆತ್ಸೆ ಹಾಗೂ ವ್ಯಾಕ್ಸಿನೇಷನ್ ಹಾಕಿಸುವ ಕೆಲಸ ಮಾಡುವುದು ಹಾಗೂ ಇದಕ್ಕೆ ಒಂದು ಪ್ರತ್ಯೇಕ ತಂಡವನ್ನು ರಚನೆ ಮಾಡಲಾಗುತ್ತದೆ. ತುರ್ತು ಪರಿಸ್ಥಿತಿಗೆ ಜಿಲ್ಲೆಯಲ್ಲಿ ಇರುವ ಖಾಸಾಗಿ ವಾಹನಗಳನ್ನು (ಟಿ.ಟಿ. ವಾಹನ) ಅಂಬುಲೆನ್ಸ್ಗಳಾಗಿ ಪರಿವರ್ತಿಸಿ, ಅವುಗಳನ್ನು ಜಿಲ್ಲಾಡಳಿತ ಸಾರಿಗೆ ಇಲಾಖೆಯ ಮೂಲಕ ವಶಕ್ಕೆ ಪಡೆದು ಕೋವಿಡ್ ಚಿಕೆತ್ಸೆಯ ಕರ್ತವ್ಯಕ್ಕೆ ವಹಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಿ ಅವರೊಂದಿಗೆ ನಮ್ಮ ತಂಡ ಕೆಲಸ ಮಾಡುತ್ತೇವೆ ಎಂದರು. ಕೋವಿಡ್ ಹೆಸರಿನಲ್ಲಿ ಸುಲಿಗೆ ಮಾಡುತ್ತಿರುವ ಆಸ್ಪತ್ರೆಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆದು ರೋಗಿಗಳ ಚಿಕಿತ್ಸೆಯನ್ನು ಸರ್ಕಾರವೇ / ಜಿಲ್ಲಾಡಳಿತವೇ ನೋಡಿಕೊಳ್ಳುವಂತೆ ಸರ್ಕಾರದ ಗಮನಸೆಳೆದು ಅಲ್ಲಿ ಇರುವ ನಮ್ಮ ಕ್ಷೇತ್ರದ ಜನರಿಗೆ ಉತ್ತಮ ಚಿಕಿತ್ಸೆ ಕೊಡಿಸುವ ಕೆಲಸ ಮಾಡಲಾಗುತ್ತದೆ. ಮತ್ತು ಬಹಳ ಪ್ರಮುಖವಾಗಿ ಪ್ರತಿನಿತ್ಯ ವರದಿಯಾಗುವ ಕೋವಿಡ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಕೂಡಲೇ ಸೋಂಕಿತರನ್ನು ಸಂಪರ್ಕಿಸಿ ಅವರಿಗೆ ದೈರ್ಯ ಮತ್ತು ಸೈರ್ಯವನ್ನು ತುಂಬಿ ಅವರುಗಳಿಗೆ ಗುಣಮುಖರಾಗಲು ಉತ್ತಮ ಸೇವೆ ಸಲ್ಲಿಸಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಕೆಲಸ ಮಾಡಲು ಹಾಸನದ ನನ್ನ ಸ್ವಗೃಹದಲ್ಲಿ ಕೋವಿಡ್ ಕೇರ್ ಕಾಲ್ ಸೆಂಟರ್ ತೆರೆದು ಉತ್ತಮ ಚಿಕಿತ್ಸೆ ನೀಡಲು ಆತ್ಮ ಸೈರ್ಯ ಸಂಜೀವಿನಿ ಎಂಬ ಕಚೇರಿಯನ್ನು ತೆರೆದು ಪ್ರತಿನಿತ್ಯ ಮಾನ್ಯ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯ ನಿರ್ವಾಕ ಅಧಿಕಾರಿಗಳು ಇವರಿಗೆ ಮಾಹಿತಿ ರವಾನಿಸಲಾಗುವುದು ಎಂದು ತಮ್ಮ ಮುಖ್ಯ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.


Post a Comment

Previous Post Next Post