ಖಗೋಳದ ವಿದ್ಯಮಾನಗಳು ಮತ್ತು ಮಾನವನ ಸಂಶೋಧನೆಗಳಿಗೆ ಕೊನೆ ಮೊದಲಿಲ್ಲ. ಅವುಗಳ ನಿರಂತರತೆ ನಿರಂತರ ಕುತೂಹಲಗಳನ್ನು ಸೃಷ್ಟಿಸುತ್ತಲೇ ಇರುತ್ತವೆ. ಖಗೋಳ ಕೌತುಕಗಳಲ್ಲಿ 'ಬಾಗಶಃ ಚಂದ್ರಗ್ರಹಣ' ಮತ್ತು ‘ಸೋಪರ್ ಮೂನ್’ ಒಟ್ಟೊಟ್ಟಿಗೆ ಇದೇ 2021 ಮೇ 26 ರ ಬುಧವಾರ ಆಕಾಶದ ರಂಗಮAಟಪದಲ್ಲಿ ಒಟ್ಟೊಟ್ಟಿಗೆ ಜರುಗಲಿವೆ.
ಅಕಾಶಕಾಯಗಳು ಮನುಷ್ಯನಲ್ಲಿ ಏಷ್ಟು ಕೌತುಕಗಳನ್ನು ಹುಟ್ಟಿಸುತ್ತವೆಯೋ, ಅಷ್ಟೇ ವಿಸ್ಮಯವನ್ನು ಖಗೋಳ ವಿದ್ಯಮಾನಗಳೂ ಎಡೆಮಾಡಿಕೊಡುತ್ತವೆ. ಅವುಗಳು ಹಳತನ್ನು ಅಳಿಸಿ ಹೊಸತನದ ಸಂಶೋಧನೆಗಳಿಗೆ ಎಡೆಮಾಡಿಕೊಡುತ್ತವೆ.
ಸೂರ್ಯ ಗ್ರಹಣ: ಭೂಮಿ ಮತ್ತು ಸೂರ್ಯನ ನಡುವೆ ಚಂದ್ರನು ಹಾದುಹೋಗುವಾಗ ಸೂರ್ಯನ ಬೆಳಕು ಚಂದ್ರನ ಮೇಲೆ ಬಿದ್ದು, ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಆಗ ಭೂಮಿಯ ಮೇಲೆ ಬೀಳುವ ಸೂರ್ಯನ ಬೆಳಕು ಕ್ಷೀಣಿಸುತ್ತದೆ, ಇಲ್ಲವೇ ಪರಿಪೂರ್ಣವಾಗಿ ಕತ್ತಲು ಆವರಿಸುತ್ತದೆ. ಆಗ ಸೂರ್ಯನು ಸ್ವಲ್ಪ ಸಮಯ ಕಾಣದೇ ಇರಬಹುದು. ಅದುವೇ ಸೂರ್ಯ ಗ್ರಹಣ.
ಚಂದ್ರ ಗ್ರಹಣ : ಚಂದಿರ ಮತ್ತು ಸೂರ್ಯನ ನಡುವೆ ಭೂಮಿಯು ಹಾದುಹೋಗುವಾಗ ಸೂರ್ಯನ ಬೆಳಕು ಭೂಮಿಯ ಮೇಲೆ ಬಿದ್ದು, ಭೂಮಿಯ ನೆರಳು ಚಂದಿರನ ಮೇಲೆ ಬೀಳುತ್ತದೆ. ಆಗ ಚಂದಿರನ ಮೇಲೆ ಬೀಳುವ ಸೂರ್ಯನ ಬೆಳಕು ಕ್ಷೀಣಿಸುತ್ತದೆ. ಆಗ ಬಾಗಶಃ, ಇಲ್ಲವೇ ಪರಿಪೂರ್ಣವಾಗಿ ಕತ್ತಲು ಆವರಿಸುತ್ತದೆ. ಆಗ ಭೂಮಿಯ ಮೇಲಿನಿಂದ ನೋಡಿದಾಗ ಸ್ವಲ್ಪ ಸಮಯಗಳ ಕಾಲ ಚಂದಿರ ಮಸುಕಾಗಿ ಕಾಣಬಹುದು, ಇಲ್ಲವೇ ಪರಿಪೂರ್ಣವಾಗಿ ಕಾಣದೇ ಹೋಗಬಹುದು. ಅದುವೇ ಚಂದ್ರಗ್ರಹಣ.
ಚಂದ್ರ ಗ್ರಹಣಗಳಲ್ಲಿ ಮೂರು ವಿಧಗಳಿವೆ : ಮೊದಲನೆಯದು ಸಂಪೂರ್ಣ ಚಂದ್ರಗ್ರಹಣ, ಎರಡನೆಯದು ಬಾಗಶಃ ಚಂದ್ರಗ್ರಹಣ, ಮೂರನೆಯದು ಅರೆನೆರಳಿನ ಚಂದ್ರಗ್ರಹಣ.
ಸೂಪರ್ ಮೂನ್ : ಚಂದ್ರನು ಭೂಮಿಯನ್ನು ಸುತ್ತುವ ಕಕ್ಷೆಯು ವೃತ್ತಾಕಾರವಾಗಿರದೆ ದೀರ್ಘ ವೃತ್ತಾಕಾರವಾಗಿರುವುದರಿಂದ, ಚಂದ್ರನು ಭೂಮಿಯಿಂದ ಕೆಲವೊಮ್ಮೆ ದೂರ ಸರಿದರೆ, ಮತ್ತೆ ಕೆಲವೊಮ್ಮೆ ಹತ್ತಿರಕ್ಕೆ ಬರುತ್ತಾನೆ, ದೂರದಲ್ಲಿದ್ದಾಗ ಸಣ್ಣದಾಗಿ ಗೋಚರಿಸಿದರೆ, ಹತ್ತಿರ ಬಂದಾಗ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿಯೂ ಗೋಚರಿಸುತ್ತಾನೆ. ಈ ಚಂದ್ರನೇ ಸೂಪರ್ ಮೂನ್.
ರಕ್ತ ಚಂದ್ರ ಗ್ರಹಣ: ಜಾಗತಿಕ ಸಂದರ್ಭದಲ್ಲಿ ಹೇಳುವುದಾದರೆ ಇದೇ 2021 ಮೇ 26 ರ ಬುಧವಾರ ದಂದು ಮಧ್ಯಾಹ್ನ 2.17ಕ್ಕೆ ಪ್ರಾರಂಭ ಗೊಂಡು ಸಂಜೆ 7.20 ಕ್ಕೆ ಕೊನೆಗೊಳ್ಳಲಿದೆ. ಈ ಆಸ್ಟೆçÃಲಿಯಾದ ಕೆಲವುಭಾಗ, ನ್ಯೂಜಿಲ್ಯಾಂಡ್ಯ್, ಅಮೇರಿಕಾದ ಪೂರ್ವ ಭಾಗ, ದಕ್ಷಿಣ ಅಮೇರಿಕಾ, ಹಿಂದೂ ಮಹಾಸಾಗರ, ಸ್ಪೆಸಿಫಿಕ್ ಸಾಗರ, ಅಟ್ಲಾಂಟಿಕ್ ಸಾಗರ, ಏಷ್ಯಾದ ಆಗ್ನೇಯ ಭಾಗಗಳಲ್ಲಿ ಗೊಚರಿಸಲಿದೆ.
ಈ ಸಮಯದಲ್ಲಿ ಸೂರ್ಯ, ಚಂದಿರ ಮತ್ತು ಭೂಮಿಗಳು ಸರಿಯಾಗಿ ಒಂದೇ ಸರಳ ರೇಖೆೆಯಲ್ಲಿ ಬರುವುದಿಲ್ಲ. ಆದ್ದರಿಂದ ಭೂಮಿಯಿಂದ ಮೂಡಲ್ಪಟ್ಟ ಕರಿನೆರಳು ಚಂದಿರನನ್ನು ತಲುಪುವುದಿಲ್ಲ. ಆದರೆ ಮಂದನೆರಳು (ಅರೆನೆರಳು) ಚಂದಿರನ್ನು ಸಂಪೂರ್ಣವಾಗಿ ಆವರಿಸುತ್ತದೆ. ಆದುದರಿಂದ ಚಂದಿರನ ಮೇಲೆ ಯಾವುದೇ ಕಲೆಗಳು ಮೂಡುವುದಿಲ್ಲ, ಇಡೀ ಬಾಗವು ಮೊಬ್ಬಾಗಿ ಕಾಣಿಸುತ್ತದೆ, ಬೆಳಕಿನ ಚದುವುವಿಕೆಯ ಕಾರಣದಿಂದ ಚಂದಿರನ ಮೇಲೆ ಬೀಳವ ಬೆಳಕು ಕೆಂಪಾಗಿ ಕಾಣುತ್ತದೆ. ರಕ್ತದ ಬಣ್ಣವೂ ಕೆಂಪಾಗಿರುವುದರಿAದ, ಈ ಗ್ರಹಣವನ್ನು ರಕ್ತ ಚಂದ್ರ ಗ್ರಹಣ, ಇಲ್ಲವೇ ತಾಮ್ರ ಚಂದ್ರ ಗ್ರಹಣ ಎನ್ನುತ್ತಾರೆ.
ಹಾಸನ ಜಿಲ್ಲೆಯ ಸಂದರ್ಭಕ್ಕೆ ಅನುಸಾರವಾಗಿ ಇದು ಬಾಗಶಃ ಚಂದ್ರಗ್ರಹಣ : ಚಂದ್ರ ಉದಯಿಸುವ ಸಮಯದಲ್ಲಾಗಲೇ ಗ್ರಹಣಹಿಡಿದಿರುತ್ತದೆ, ಅದೇ ಸಮಯವನ್ನು ತೆಗೆದುಕೊಳ್ಳುವುದಾದರೆ ಗ್ರಹಣ ಸಂಜೆ 6.53 ಪ್ರಾರಂಭ ಗೊಂಡು ಸಂಜೆ 7.20 ಕ್ಕೆ ಕೊನೆಗೊಳ್ಳಲಿದೆ. ಈ ಸಮಯದಲ್ಲಿ ಚಂದಿರನ ಯಾವುದೇ ಬಾಗವು ಪೂರ್ಣ ಕಪ್ಪಾಗದೆ, ಇಡೀ ಬಾಗವು ಕಾಣಿಸುತ್ತಲೇ ಇರುತ್ತದೆ. ಚಂದಿರನ ಒಂದು ಭಾಗ ಮಾತ್ರ ಮಸುಕಾಗುತ್ತದೆ.
ಈ ಗ್ರಹಣದ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡು, ದೇಶ ವಿದೇಶಗಳ ವಿಜ್ಞಾನಿಗಳು, ಸಂಶೋಧಕರು, ಉಪನ್ಯಾಸಕರು ಮತ್ತು ಇತರೆ ಖಗೋಳ ಆಸಕ್ತರು ಸಂಶೋದನೆಗಾಗಿ ಗ್ರಹಣ ನೋಡಸಿಗುವ ಸ್ಥಳಗಳಿಗೆ ಪಯಣಿಸುತ್ತಿದ್ದಾರೆ.
ಭಾರತದಲ್ಲಿ ನಾವಿರುವ ಸ್ಥಳಗಳÀಲ್ಲೇ ಯಾವುದೇ ಖರ್ಚಿಲ್ಲದೇ ಬರಿಗಣ್ಣಿನಲ್ಲೇ ಅನಾಯಾಸವಾಗಿ ನೋಡಲು ಸಿಗುತ್ತಿರುವ ಈ ಅವಕಾಶದಿಂದ ವಂಚಿತಾಗದೆ ವೀಕ್ಷಿಸಿ ವೈಚಾರಿಕತೆ ಮೈಗೂಡಿಸಿ ಕೊಳ್ಳಬೇಕೆಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಮನವಿ ಮಾಡಿಕೊಳ್ಳುತ್ತದೆ.
ಚಂದ್ರಗ್ರಹಣವನ್ನು ಬರಿಗಣ್ಣಿನಿಂದಲೇ ವೀಕ್ಷಿಸಬಹುದು : ಯಾವುದೇ ಸಂದರ್ಭಗಳಲ್ಲಿಯೂ ಸೂರ್ಯನ್ನು ಬರಿಕಣ್ಣಿನಿಂದ ನೇರವಾಗಿ ನೋಡಬಾರದು. ಹಾಗೆ ಬರಿಕಣ್ಣಿನಿಂದ ಸಂಪೂರ್ಣ ಸೂರ್ಯಗ್ರಹಣವನ್ನೊಂತೂ ಬರಿಕಣ್ಣಿನಿಂದ ನೋಡಲೇ ಬಾರದು. ಆದರೆ 2021 ಮೇ 26 ರ ಬುಧವಾರ ಸಂಭವಿಸುತ್ತಿರುವುದು ಚಂದ್ರಗ್ರಹಣ. ಚಂದಿರನ್ನು ಎಲ್ಲಾ ಸಂದರ್ಭದಲ್ಲೂ ಬರಿಗಣ್ಣಿನಿಂದಲೇ ನೋಡ ಬಹುದಾಗಿದೆ.
ಬಿ.ಜಿ. ಗೋಪಾಲಕೃಷ್ಣ
(9343431828)
ಖಜಾಂಜಿ, ಭಾರತ ಜ್ಞಾನ ವಿಜ್ಞಾನ ಸಮಿತಿ
ಹಾಸನ ಜಿಲ್ಲೆ , ಹಾಸನ.
Tags
ಲೇಖನ