ಬೇಲೂರು: ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾಕಾರ್ಯಕರ್ತೆಯರಿಗೆ ಕಳೆದ 3 ತಿಂಗಳಿನಿಂದ ವೇತನ ನೀಡಿಲ್ಲ, ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ಇವಾರಿಗೂ ಹೆಚ್ಚಿನ ಸವಲತ್ತು ಕಲ್ಪಿಸಿಲ್ಲ, ಸರ್ಕಾರಕ್ಕೆ ಸ್ವಲ್ಪವಾದರೂ ಕಾಳಜಿ ಬೇಡವೆ? ಈ ರೀತಿ ಪ್ರಶ್ನಿಸಿದವರು ಸಂಸದ ಪ್ರಜ್ವಲ್‍ರೇವಣ್ಣ ಅವರು. ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಸೆಂಟರ್ ವೀಕ್ಷಿಸಿ ಟಾಸ್ಕ್‍ಫೋರ್ಸ್ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾತನಾಡಿ, ಕೊರೊನಾ ಸೋಂಕಿತರನ್ನು ಭೇಟಿ ಮಾಡಿ ಅವರೊಟ್ಟಿಗೆ ಸೆಲ್ಫಿ ತೆಗೆದು ಮೇಲಾಧಿಕಾರಿಗಳಿಗೆ ಕಳುಹಿಸುವ ಪರಿಪಾಠ ನಿಲ್ಲಿಸಬೇಕು. ಫ್ರೆಂಟ್‍ಲೈನ್ ಆಗಿ ಕರ್ತವ್ಯ ನಿರ್ವಹಿಸುವ ಇವರಿಗೆ ಹೆಚ್ಚುಕಮ್ಮಿಯಾದರೆ ಸರ್ಕಾರ ಪರಿಹಾರ ನೀಡಲಿದೆಯೇ ಎಂದರು. ಪೊಲೀಸರು ತಮ್ಮ ಇಲಾಖೆಯ ಯಾವುದೆ ಹಣದಿಂದ ವಸ್ತುಗಳ ಖರೀದಿಸಲು ಅವಕಾಶ ಇಲ್ಲದ ಕಾರಣ ತಹಸೀಲ್ದಾರ್ ಪೇಸ್‍ಶೀಲ್ಡ್, ಮಾಸ್ಕ್ ಇತ್ಯಾದಿಗಳ ಖರೀದಿಸಿಕೊಡುವಂತೆ ಸಂಸದರು ಸೂಚಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಸದ್ಯ 40 ಹಾಸಿಗೆ ವ್ಯವಸ್ಥೆಯಿದ್ದು ಫ್ರೆಂಟ್‍ಲೈನ್ ವಾರಿಯರ್ಸ್‍ಗೆ ಆಕ್ಸಿಜನ್ ಸಹಿತವಾದ 5 ಹಾಸಿಗೆಗಳ ಮೀಸಲಿಡಬೇಕು. 12 ಜನ ಸಿಬ್ಬಂದಿಯನ್ನು ನೇಮಕಮಾಡಿಕೊಳ್ಳಬೇಕು. ಸೋಂಕಿತರು ಮೃತಪಟ್ಟಾಗ
ದೇಹವನ್ನು ಎತ್ತುವವರಿಗೆ ಪಿಪಿ ಕಿಟ್ ಹೆಚ್ಚುವರಿಯಾಗಿ ನೀಡಬೇಕು. 280 ಪ್ರಕರಣವಿರುವ ಆರೇಹಳ್ಳಿಗೆ ಹಾಗೂ ಹಳೇಬೀಡಿಗೆ 1 ಆಂಬ್ಯುಲೆನ್ಸ್ ಹಾಗೂ 1 ಆಕ್ಸಿಜನ್ ಕಾನ್ಸ್‍ಟೇಸರ್ ನೀಡಬೇಕು. 7 ಕೋವಿಡ್ ಸೆಂಟರ್‍ನಲ್ಲಿ 5 ಭರ್ತಿಯಾಗಿದೆ. ತಾ.ನಲ್ಲಿ 35 ಕಂಟೈನ್ಮೆಂಟ್ ಜೋನ್ ಗುರಿತಿಸಲಾಗಿದೆ. ಪಡಿತರ ಅಂಗಡಿ, ಗೊಬ್ಬರ ಮಾರಾಟ ಸ್ಥಳ,
ಔಷಧಿ ಅಂಗಡಿ ಇಲ್ಲಿ ಅಧಿಕಾರಿಗಳ ಗಮನ ಹೆಚ್ಚಿರಬೇಕು.
ಆಸ್ಪತ್ರೆಗೆ ಬರುವವರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸುವುದು ಸೂಕ್ತ ಎಂದ ಸಂಸದ ಪ್ರಜ್ವಲ್‍ರೇವಣ್ಣ,
ಬೇಲೂರಿನಲ್ಲಿ ಲಾಕ್‍ಡೌನ್ ವೇಳೆಯೂ ವಾಹನಗಳ ಓಡಾಟ
ಇರುವುದು ಮತ್ತು ಬೆಳಿಗ್ಗೆ ದಿನಬಳಕೆ ವಸ್ತುಗಳ ಖರೀದಿಗೆ ವಾಹನಗಳ ತರುವುದು ಕಂಡುಬರುತ್ತಿದ್ದು ಈ ಬಗ್ಗೆ ಪೊಲೀಸರು ಬಿಗಿ ಕ್ರಮ ಜರುಗಿಸುವಂತೆ ಸೂಚಿಸಿದರು. ಕೋವಿಡ್ ಸೆಂಟರ್ ವ್ಯವಸ್ಥೆ, ಆಸ್ಪತ್ರೆಯಲ್ಲಿ ಏನೆಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ, ಏನೇನು ಕೊರತೆಯಿದೆ ಹಾಗೂ ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ, ರ್ಯಾಪಿಡ್‍ಟೆಸ್ಟ್ ಅಂಕಿಅಂಶಗಳ ಕುರಿತು ತಹಸೀಲ್ದಾರ್ ಎನ್.ವಿ.ನಟೇಶ್ ಹಾಗೂ ವೈದ್ಯಾಧಿಕಾರಿಗೆ
ಡಾ.ವಿಜಯ್ ಹಾಗೂ ಡಾ.ನರಸೇಗೌಡ ಮಾಹಿತಿ ನೀಡಿದರು. ಶಾಸಕ ಕೆ.ಎಸ್.ಲಿಂಗೇಶ್ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮದ ಬಗ್ಗೆ ಸಲಹೆ ನೀಡಿದರು. ಎಸಿ ಗಿರೀಶ್‍ನಂದನ್, ಡಿವೈಎಸ್‍ಪಿ ನಾಗೇಶ್, ಸಿಪಿಐ ಶ್ರೀಕಾಂತ್, ಇಒ ರವಿಕುಮಾರ್ ಇದ್ದರು.
ಬೇಲೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಪ್ರಜ್ವಲ್‍ರೇವಣ್ಣ ಕೋವಿಡ್ ಸೆಂಟರ್ ವೀಕ್ಷಿಸಿದರು
ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇವಾಲಯದ ದಾಸೋಹ
ಭವನದಲ್ಲಿ ಕೋವಿಡ್ ಪರಿಶೀಲನಾ ಸಭೆ ನಡೆಸಿದ ಸಂಸದ ಪ್ರಜ್ವಲ್ ರೇವಣ್ಣ


