ಬೇಲೂರು: ಪರಿಸರ ಸಂರಕ್ಷಣೆಗೆ ತಮ್ಮ ಜೀವಮಾನವನ್ನೇ ಮುಡುಪಾಗಿಟ್ಟ ಚಿಪ್ಕೋ ಚಳುವಳಿಯ ನೇತಾರ ಸುಂದರ್ ಲಾಲ್ ಬಹುಗುಣಅವರನ್ನು ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರ ಪುತ್ರ ಬಳ್ಳೂರು ಉಮೇಶ್ ಸ್ಮರಿಸಿಕೊಂಡಿದ್ದಾರೆ.
ಸುಂದರ್‍ಲಾಲ್ ಬಹುಗುಣ ಅವರನ್ನು
ಕಳೆದುಕೊಂಡಿರುವುದು ಭಾರತವೊಂದೆ ಅಲ್ಲ ಇಡಿ ವಿಶ್ವವೇ
ಬೆಲೆಕಟ್ಟಲಾಗದ ರತ್ನವೊಂದನ್ನು ಕಳೆದುಕೊಂಡಿದೆ.
ಸಾಲುಮರದ ತಿಮ್ಮಕ್ಕ ಹಾಗೂ ಸುಂದರ್‍ಲಾಲ್ ಬಹುಗುಣ ಅವರು ಒಂದೆ ವೇದಿಕೆಯಲ್ಲಿ ಪರಿಸರಕ್ಕೆ ತಮ್ಮ ಅಮೂಲ್ಯವಾದ
ಕೊಡುಗೆ ನೀಡಿದ್ದಕ್ಕೆ ನ್ಯಾಷನಲ್ ಸಿಟಿಜನ್ ಅವಾರ್ಡ್ ಅನ್ನು ಅಂದು ಪ್ರಧಾನಿಯಾಗಿದ್ದ ಹೆಚ್.ಡಿ.ದೇವೇಗೌಡ ಅವರಿಂದ ಸ್ವೀಕರಿಸಿದ್ದರು.
ಅಂದು ನನ್ನ ಪರಿಸರ ಸಂರಕ್ಷಣೆಯ
ಕಾರ್ಯಗಳನ್ನು ಅವಲೋಕಿಸಿದ ಸುಂದರ್‍ಲಾಲ್ ಬಹುಗುಣ
ಅವರು, ನನ್ನ ಬೆನ್ನು ತಟ್ಟಿ ನೀನು ಎತ್ತರಕ್ಕೆ
ಬೆಳೆಯುತ್ತೀಯ, ಪರಿಸರ ಕಾಳಜಿ ಬಿಡಬೇಡ ಎಂದು ಹಾರೈಸಿದ ಆ ಕ್ಷಣವನ್ನು ನಾನೆಂದೂ ಮರೆಯಲಾರೆ. ಇಂತಹ ವ್ಯಕ್ತಿ
ಮತ್ತೊಮ್ಮೆ ಭಾರತಾಂಭೆಯ ನೆಲದಲ್ಲಿ ಜನ್ಮತಾಳಿ ಪ್ರಕೃತಿ
ಮಾತೆಯ ಸೇವೆ ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
22 ಬಿಎಲ್‍ಆರ್‍ಪಿ-2
ಬೇಲೂರು ತಾಲ್ಲೂಕು ಬಳ್ಳೂರು ಗ್ರಾಮದ ಬಳ್ಳೂರು
ಉಮೇಶ್ 1995 ರಲ್ಲಿ ಸುಂದರ್‍ಲಾಲ್ ಬಹುಗುಣ ಅವರನ್ನು
ಗೌರವಿಸಿದ್ದು ಹೀಗೆ (ಸಂಗ್ರಹ ಚಿತ್ರ)