ಹಾಸನ: ಶನಿವಾರ ಮೇ.೧ ಎಂದರೆ ಕಾರ್ಮಿಕರ ದಿನಾಚರಣೆ ಇದ್ದರೂ ಲೆಕ್ಕಿಸದೇ ಒಂದು ಹೊತ್ತು ಊಟಕ್ಕಾಗಿ ಕಟ್ಟಡ ಕೆಲಸದಲ್ಲಿ ಕಾರ್ಮಿಕರು ನಿರತರಾಗಿದ್ದರು.
ಕಾರ್ಮಿಕರ ದಿನಾಚರಣೆ ಎಂದರೇ ಕಾರ್ಮಿಕರ ನೆನಪು ಬರುತ್ತದೆ. ಕಟ್ಟಡ ಕಾರ್ಮಿಕರು ಸೇರಿದಂತೆ ನಾನಾ ರೀತಿಯ ಕಾರ್ಮಿಕರು ಇದರಲ್ಲಿ ಸೇರುತ್ತಾರೆ. ಪ್ರತಿ ವರ್ಷ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತಿತ್ತು. ಕಳೆದ ಎರಡು ವರ್ಷಗಳಿಂದ ಕೊರೋನಾ ಎಂಬ ಮಹಾಮಾರಿ ಆವರಿಸಿರುವುದರಿಂದ ದಿನಾಚರಣೆಯನ್ನು ಕೈಬಿಡಲಾಗಿದೆ. ಬಹುತೇಕ ಕಾರ್ಮಿಕರು ಮೇ.೧ ರಂದು ತಮ್ಮ ಕೆಲಸಗಳನ್ನು ಸ್ಥಗಿತ ಮಾಡಿ ಕುಟುಂಬದೊAದಿಗೆ ಸಂತೋಷದಿAದ ಕಾಲ ಕಳೆಯುತ್ತಾರೆ. ಆದರೇ ಕೆಲ ಕಾರ್ಮಿಕರೂ ದಿನಾಚರಣೆಯನ್ನು ಕೂಡ ನೆನಪಿಸಿಕೊಳ್ಳದೇ ಕುಟುಂಬ ಸಮೇತರಾಗಿ ಕಟ್ಟಡ ಇತರೆ ಕೆಲಸದಲ್ಲಿ ತೊಡಗಿರುವುದು ಕಾಣಬಹುದು. ನಗರದ ಪಾರ್ಕ್ ರಸ್ತೆ, ಸೀತರಾಮಂಜನೇಯ ದೇವಸ್ಥಾನದ ಹಿಂಬಾಗದ ರಸ್ತೆ ಬದಿ ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದರು. ಇಂದು ಶನಿವಾರ ಕಾರ್ಮಿಕರ ದಿನ ಇದ್ದರೂ ಕೆಲಸ ನಿರ್ವಹಿಸುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದಕ್ಕೆ ಕಾರ್ಮಿಕರು ಉತ್ತರ ಕೊಟ್ಟಿದ್ದು! ಸರ್ ನಾವು ದಿನಗೂಲಿಯಲ್ಲಿ ಕೆಲಸ ಮಾಡಬೇಕು. ಇಂದು ದುಡಿಯದಿದ್ದರೇ ಊಟಕ್ಕೆ ಯಾರು ಹಣ ಕೊಡುತ್ತಾರೆ ಎಂದು ತಟ್ ಅಂತ ಉತ್ತರ ಕೊಟ್ಟರು.