ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ನಡೆದಿದ್ದ ಅಪಘಾತದಲ್ಲಿ ವೈದ್ಯ ರಸ್ತೆ ಪಕ್ಕ ಬಿದ್ದು ನರಳಾಡಿ ಸಾವನ್ನಪ್ಪಿದ್ದ ಪ್ರಕರಣ ಕುರಿತು ಶಾಸಕ ಡಿ.ಎಸ್ ಸುರೇಶ್ ಸ್ಪಷ್ಟೀಕರಣ ನೀಡಿದ್ದಾರೆ.
ಘಟನೆ ಕುರಿತು ವಿಡಿಯೋವೊಂದನ್ನು ಮಾಡಿ ಶಾಸಕರು ಸ್ಪಷ್ಟೀಕರಣ ನೀಡಿದ್ದಾರೆ. ನನಗೆ ಕಣ್ಣು ನೋವು ಇದ್ದಿದ್ದರಿಂದ ಕಾರಿನಿಂದ ಕೆಳಗೆ ಇಳಿಯಲಿಲ್ಲ. ನಾನು ನಿದ್ರೆಗೆ ಜಾರಿದ್ದು, ನನ್ನ ಕಾರಿನ ಡ್ರೈವರ್ ಹೋಗಿ ನೋಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಗಾಯಳು ವೈದ್ಯರನ್ನು ಆಂಬುಲೆನ್ಸ್ ನಲ್ಲಿ ಕಳಿಸಿದ್ದಾರೆ ಎಂದಿದ್ದಾರೆ.
ಆದರೆ ಈ ವೇಳೆ ಕೆಲ ಕಿಡಿಗೇಡಿಗಳು ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ನಾನು ಸಹಾಯಕ್ಕೆ ಧಾವಿಸುತ್ತಿಲ್ಲ ಅಂತ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ವಿಡಿಯೋ ಮಾಡಿ ಘಟನೆ ಸಂಬಂಧ ಹೇಳಿಕೆಯನ್ನು ಶಾಸಕರು ನೀಡಿದ್ದಾರೆ.
Tags
ಚಿಕ್ಕಮಗಳೂರು