ರಾಸ್ತೆಯಲ್ಲಿ ನರಳಾಡಿ ಪ್ರಾಣ ಬಿಟ್ಟ ಹೆಲ್ತ್ ಇನ್ಸ್ ಪೆಕ್ಟರ್ : ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದರೂ ನೆರವಿಗೆ ಬರದ ಶಾಸಕ

ಚಿಕ್ಕಮಗಳೂರು : ಪ್ರಾಣ ಹೋಗ್ತಿದ್ರು ಸ್ಥಳದಲ್ಲಿದ್ದ ಶಾಸಕರು ಸಹಾಯ ಮಾಡದ ಘಟನೆ ತರೀಕೆರೆಯಲ್ಲಿ ನಡೆದಿದೆ .


ಅಪಘಾತದಿಂದ ತೀವ್ರ ಗಾಯಗೊಂಡ ವ್ಯಕ್ತಿ ರಸ್ತೆಯಲ್ಲಿ ಒದ್ದಾಡುತ್ತಿದ್ದರೂ ಶಾಸಕ ಸುರೇಶ್  ಕಾರಿನಿಂದ‌ ಕೆಳಗಿಳಿದಿಲ್ಲ.
ಕೊರೋನಾ ಡ್ಯೂಟಿ ಮುಗಿಸಿ‌ ಬರುವಾಗ   ಲಕ್ಕವಳ್ಳಿ ಕ್ರಾಸ್ ಬಳಿ  ಬೈಕಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಹೋಗಿದೆ .
ಹಿರಿಯ ಆರೋಗ್ಯಾಧಿಕಾರಿಗೆ ಅಪಘಾತವಾಗಿ ರಕ್ತದ ಮಡುವಿನಲ್ಲಿ ಒದ್ದಾಟ ನಡೆಸುತ್ತಿದ್ದರು.
ನೆರವಿಗೆ ಬಂದು ಆಸ್ಪತ್ರೆಗೆ ಕರೆದೊಯ್ಯುವಂತೆ  ಸ್ಥಳದಲ್ಲಿದ್ದ ಒಂದಿಬ್ಬರು ಯುವಕರು ಮನವಿ ಮಾಡಿದರು ಶಾಸಕರು ಕಿವಿಗೊಡಲಿಲ್ಲ . ಅಂಗರಕ್ಷಕ ಬಂದರೂ
ನೋಡಿ  ಹಾಗೆ ಹಿಂದಿರುಗಿದ .
ಅರ್ಧ ಗಂಟೆಗೂ ಹೆಚ್ಚು ಹೊತ್ತು ಸ್ಥಳದಲ್ಲೇ ಒದ್ದಾಡಿ, ನೋವಿನಿಂದ ಬಳಲುತ್ತಿದ್ದರೂ ಅದೇ ಮಾರ್ಗವಾಗಿ ಹೋಗುತ್ತಿದ್ದ ಶಾಸಕ ಸುರೇಶ್  ಕಾರನ್ನು ನಿಲ್ಲಿಸಿದರೆ ಹೊರತು ಕಾರಿನಿಂದ ಇಳಿಯಲಿಲ್ಲ. 



ಶಾಸಕ‌ ಸುರೇಶ್ ನಡೆಗೆ ಸ್ಥಳದಲ್ಲೇ ಸ್ಥಳಿಯರು ತೀವ್ರ  ಅಸಮಾಧಾನ ಹೊರಹಾಕಿದ್ದಾರೆ .
ಅರ್ಧ ಗಂಟೆ ಬಳಿಕ ಆಂಬುಲೆನ್ಸ್ ನಲ್ಲಿ ಶಿವಮೊಗ್ಗಕ್ಕೆ ರವಾನಿಸಿದರೂ ಪ್ರಯೋಜನವಾಗದೆ ರಮೇಶ್ ಮಾರ್ಗಮಧ್ಯದಲ್ಲಿ ಸಾವನಪ್ಪಿದ್ದಾರೆ .
ಪ್ರಾಣ ಹೋಗ್ತಿದ್ದರೂ  ಮಾನವೀಯತೆ ತೋರದ ಶಾಸಕರ ನಡೆ ತೀವ್ರ ಟೀಕೆಗೆ ಗುರಿಯಾಗಿದೆ .

Post a Comment

Previous Post Next Post