ಮಂಕನಹಳ್ಳಿಯಲ್ಲಿ ನಿರ್ವಿುಸಿರುವ ರಿಡ್ಜ್ ಪಾಯಿಂಟ್ ವೈಶಿಷ್ಟ್ಯ

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಸಿಲೆ ವ್ಯೂ ಪಾಯಿಂಟ್ ಸಮೀಪದ ಮಂಕನಹಳ್ಳಿಯಲ್ಲಿ ನಿರ್ವಿುಸಿರುವ ರಿಡ್ಜ್ ಪಾಯಿಂಟ್ ಕಲ್ಲಿನಲ್ಲಿ ನಿರ್ವಿುಸಿರುವ ರಿಡ್ಜ್​ನ ಒಂದು ಭಾಗದಲ್ಲಿ ಅರೇಬಿಯನ್ ಸೀ (ಅರಬ್ಬಿ ಸಮುದ್ರ), ಮತ್ತೊಂದು ಭಾಗದಲ್ಲಿ ಬೇ ಆಫ್ ಬೆಂಗಾಲ್ (ಬಂಗಾಳಕೊಲ್ಲಿ) ಎಂದು ಇಂಗ್ಲಿಷ್​ನಲ್ಲಿ ಬರೆಯಲಾಗಿದೆ.
ಅರೇಬಿಯನ್ ಸೀ 

ರಿಡ್ಜ್​ನಲ್ಲಿ ಬರೆಯಲಾಗಿರುವಂತೆ, ಇಲ್ಲಿನ ಪಶ್ಚಿಮ ಭಾಗದ ಬೆಟ್ಟಕುಮರಿ ಪ್ರದೇಶದಿಂದ ಹುಟ್ಟುವ ಅಡ್ಡಹೊಳೆ ಮತ್ತು ಪುಷ್ಪಗಿರಿಯ ಗಿರಿಹೊಳೆ ಎರಡೂ ಸೇರಿ ಕುಮಾರಧಾರ ನದಿಯಾಗುತ್ತದೆ. ನಂತರ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಕಡೆಗೆ ಹರಿದು ಹೋಗುತ್ತದೆ. ನಂತರ ಗುಂಡ್ಯ ನದಿಯೊಂದಿಗೆ ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯನ್ನು ಸಂಗಮಿಸುತ್ತದೆ. ಇದು ಮುಂದೆ ಪಶ್ಚಿಮಾಭಿಮುಖವಾಗಿ ಹರಿದು ಮಂಗಳೂರಿನ ಸಮೀಪ ಅರಬ್ಬಿ ಸಮುದ್ರವನ್ನು ಸೇರುತ್ತದೆ. 

ಬೇ ಆಫ್ ಬೆಂಗಾಲ್ 

ಈ ಪರ್ವತ ಶ್ರೇಣಿಗಳ ಪೂರ್ವಭಾಗದಲ್ಲಿ ಬಿದ್ದ ಮಳೆ ನೀರು ಮತ್ತು ಸಣ್ಣ ತೊರೆಗಳು ಹೇಮಾವತಿಯೊಂದಿಗೆ ಸೇರಿಕೊಳ್ಳುತ್ತವೆ. ಹೇಮಾವತಿ ನದಿ ಸಕಲೇಶಪುರ ಪಟ್ಟಣದ ಪಕ್ಕದಲ್ಲೇ ಹರಿದು ಮಂಡ್ಯ ಜಿಲ್ಲೆಯ ಕೆಆರ್​ಎಸ್ ಬಳಿ ಕಾವೇರಿ ನದಿಯೊಂದಿಗೆ ಸಂಗಮವಾಗಿ ತಮಿಳುನಾಡಿನಲ್ಲಿ ಬಂಗಾಳಕೊಲ್ಲಿ ಸೇರುತ್ತದೆ

Post a Comment

Previous Post Next Post