ವ್ಯಾಪರ ವಹಿವಾಟು ಸಮಯ ಮುಗಿದರೂ ಟ್ರಾಫೀಕ್ ಜಾಮ್

ಹಾಸನ: ಕೊರೋನಾ ಹಿನ್ನಲೆಯಲ್ಲಿ ಮುನ್ನೇಚ್ಚರಿಕ ಕ್ರಮವಾಗಿ ವ್ಯಾಪಾರ ವಹಿವಾಟನ್ನು ಬೆಳಿಗ್ಗೆ ೬ ಗಂಟೆಯಿAದ ೧೨ ಗಂಟೆಯವರೆಗೂ ನಿಗಧಿ ಮಾಡಲಾಗಿದ್ದರೂ ನಂತರದ ಸಮಯದಲ್ಲೂ ಕುಡ ವಾಹನಗಳು ಎಂದಿನAತೆ ಓಡಾಟ ನಡೆಸುತ್ತಿರುವುದರಿಂದ ಅಲ್ಲಲ್ಲಿ ಟ್ರಾಫೀಕ್ ಜಾಮ್ ಇರುವುದು ಕಂಡು ಬಂದಿತು.


       ಕೊರೋನಾ ಸೋಂಕು ದಿನೆ ದಿನೆ ಹೆಚ್ಚಾಗುತ್ತಿರುವದರಿಂದ ಸರಕಾರವು ಮೊದಲು ಬೆಳಿಗ್ಗೆ ೬ ಗಂಟೆಯಿAದ ಬೆಳಿಗ್ಗೆ ೧೦ ಗಂಟೆಯವರೆಗೆ ಮಾತ್ರ ಆಹಾರ ಪದಾರ್ಥಗಳು ವ್ಯಾಪಾರ ಮಾಡಲು ಅವಕಾಶ ಕೊಟ್ಟಿತ್ತು. ಕಳೆದ ಎರಡು ದಿನಗಳಿಂದ ಮಾರ್ಗಸೂಚಿ ಬದಲಾಯಿಸಿ ಮದ್ಯಾಹ್ನ ೧೨ ಗಂಟೆಯವರೆಗೂ ವಿಸ್ತರಿಸಿದೆ. ನಿಗಧಿತ ಸಮಯ ಮುಗಿದರೂ ಸಾರ್ವಜನಿಕರ ಒಡಾಟ ಮತ್ತು ವಾಹನ ಸಂಚಾರ ಕಡಿಮೆ ಆಗುವುದು ಕಂಡು ಬರಲಿಲ್ಲ. ಎಂದಿನAತೆ ವಾಹನಗಳ ಒಡಾಟ ನಡೆಸಿರುವುದು ಆತಂಕದ ವಿಚಾರವಾಗಿದೆ. ಈ ಬಗ್ಗೆ ಇನ್ನು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾದ ಅವಶ್ಯಕತೆ ಇದೆ ಎಂಬುದು ಕೆಲ ಬುದ್ದಿವಂತರ ಅಭಿಪ್ರಾಯವಾಗಿದೆ.


Post a Comment

Previous Post Next Post